ಶ್ರಾವಣ ಮಾಸದಲ್ಲಿ ಈ ವಿಶೇಷವಾದ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಭಗವಂತ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸುತ್ತಾನೆ. ಈ ಎಲ್ಲಾ ವಸ್ತುಗಳು ಶಿವನಿಗೆ ಅತೀ ಪ್ರಿಯವಾಗಿದ್ದು. ಭಗವಂತನಾದ ಶಿವನು ಭೋಲೆ ಬಂಡಾರಿ ಆಗಿದ್ದಾನೆ. ಸ್ವಲ್ಪ ಪ್ರಯತ್ನ ಮಾಡಿದರು ತುಂಬಾ ಬೇಗನೆ ಒಲಿಯುತ್ತಾನೆ. ಶ್ರಾವಣ ಮಾಸದಲ್ಲಿ ಈ ಪವಿತ್ರವಾದ ವಸ್ತುಗಳಲ್ಲಿ ಯಾವುದಾದರು ಒಂದು ವಸ್ತುವನ್ನು ಮನೆಗೆ ತೆಗೆದುಕೊಂಡು ಬಂದರೆ ಭಗವಂತನಾದ ಶಿವನು ಆ ವ್ಯಕ್ತಿಯ ಎಲ್ಲಾ ಕಷ್ಟ ತೊಂದರೆಗಳನ್ನು ದೂರ ಮಾಡುತ್ತಾನೆ. ಈ ವ್ಯಕ್ತಿಗೆ ಜೀವನದಲ್ಲಿ ಧನ ಸಂಪತ್ತಿನ ಕೊರತೆ ಆಗುವುದಿಲ್ಲ. ಶಿವನು ಅವರಿಗೆ ಮನಸ್ಸಿಚ್ಚೆಗಳ ವರವನ್ನು ಸಹ ಕೊಡುತ್ತನೆ.
1, ಭಸ್ಮ:-ಶ್ರಾವಣ ಮಾಸದಲ್ಲಿ ಶಿವನ ದೇವಾಲಯದಿಂದ ಭಸ್ಮವನ್ನು ತೆಗೆದುಕೊಂಡು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬಹುದು. ಈ ಭಸ್ಮದ ಜೊತೆಗೆ ಶಿವನ ಪೂಜೆ ಮಾಡಿದರೆ ಅನೇಕ ರೀತಿಯ ಲಾಭಗಳು ಸಿಗುತ್ತವೆ.ಉಳಿದ ಭಸ್ಮವನ್ನು ಹಣ ಇಡುವ ಜಾಗದಲ್ಲಿ ಇಡಬಹುದು. ಇದರಿಂದ ಧನ ಸಂಪತ್ತಿನ ವ್ಯರ್ಥ ಆಗುವುದಿಲ್ಲ.
2,ರುದ್ರಾಕ್ಷಿ:-ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ತಂದರೆ ಸುಖ ಸಮೃದ್ಧಿ ಸಿರಿ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣುವಿರಿ. ಶಿವನ ಕೃಪೆಯಿಂದ ನಿಮ್ಮ ಜೀವನದಲ್ಲಿ ಇರುವ ಹಲವಾರು ಸಮಸ್ಸೆಗಳಿಂದ ನಿಮಗೆ ಮುಕ್ತಿ ಕೂಡ ದೊರೆಯುತ್ತದೆ. ರುದ್ರಾಕ್ಷಿ ಒಂದು ರೀತಿಯ ಹಣ್ಣು ಆಗಿದೆ. ಇದನ್ನು ಪೂರ್ತಿಯಾಗಿ ಶಿವನ ಅಂಶ ಎಂದು ತಿಳಿಯಲಾಗಿದೆ.
3, ಗಂಗಾಜಲ:-ಗಂಗಾಜಲ ಶಿವನಿಗೆ ಅತ್ಯಂತ ಪ್ರಿಯ ಆಗಿದ್ದು ಶಿವ ಲಿಂಗದ ಮೇಲೆ ಕೇವಲ ಒಂದು ಲೋಟ ನೀರನ್ನು ಹಾಕಿದರು ಬೇಗನೆ ಶಿವನು ಒಲಿಯುತ್ತಾನೆ.
4, ಬಿಲ್ವ ಪತ್ರೆ:-ಬಿಲ್ವ ಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದ ವಸ್ತು ಆಗಿದೆ. ಶ್ರಾವಣ ಮಾಸದಲ್ಲಿ ಬಿಲ್ವ ಪತ್ರೆ ತೆಗೆದುಕೊಂಡು ಬಂದು ಶಿವನಿಗೆ ಅರ್ಪಿಸಿದರೆ ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳು ಈಡೇರುತ್ತವೆ.
5, ಪಾದರಸದಿಂದ ತಯಾರು ಮಾಡಿದ ಶಿವಲಿಂಗ:-ಪಾದರಸಕ್ಕೂ ಮತ್ತು ಶಿವನಿಗೂ ಶಿವನಿಗೂ ವಿಶೇಷವಾದ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಪಾದರಸ ದಿಂದ ಮಾಡಿದ ಶಿವ ಲಿಂಗವನ್ನು ತೆಗೆದುಕೊಂಡು ಬಂದರೆ ನಿಮ್ಮ ಎಲ್ಲಾ ದೋಷಗಳು ದೂರ ಆಗುತ್ತವೆ. ಶಿವ ಲಿಂಗವು ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ನೆಲೆಸುತ್ತದೆ.
6, ತ್ರಿಶುಲ:-ಶ್ರಾವಣ ಮಾಸದಲ್ಲಿ ತ್ರಿಶುಲ ತೆಗೆದುಕೊಂಡು ಬಂದರೆ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ.ತ್ರಿಶುಲ ಶತ್ರುಗಳ ಕೊಲ್ಲುವಂತಹ ಶಕ್ತಿ ಇರುತ್ತದೆ. ತ್ರಿಶುಲವನ್ನು ಪೂಜೆ ಮಾಡಿದರೆ ತುಂಬಾ ಒಳ್ಳೆಯದು.
7,ಡಮರುಗ:-ಶ್ರಾವಣ ಮಾಸದಲ್ಲಿ ಡಮರುಗ ತಂದರೆ ಇದು ಕೆಟ್ಟ ಶಕ್ತಿಗಳನ್ನು ನಾಶ ಮಾಡುತ್ತದೆ. ಪ್ರತಿದಿನ ಸಂಜೆ ಸಮಯದಲ್ಲಿ ಡಮರುಗವನ್ನು ಬಾರಿಸಿದರೆ ತುಂಬಾ ಒಳ್ಳೆಯದು.