1) ಬೆಳಗಿನ ಸುಪ್ರಭಾತ ದೇವರ ನಾಮ ಸ್ಮರಣೆಯಿಂದ ಶುರುವಾಗಲಿ.
2) ದೇಹ ದಂಡನೆಗೆ ಪ್ರಾಶತ್ಯ ಕೊಡು.
3) ಹೊಟ್ಟೆ ಸಾಕು ಎನ್ನುವುದರೊಳಗೆ ಊಟದಿಂದ ಎದ್ದೇಳು.
4) ಯಾರನ್ನೂ ದ್ವೇಷಿಸಬೇಡ, ಎಲ್ಲರನ್ನೂ ಪ್ರೀತಿಸು.
5) ಪ್ರೀತಿ ವಣಿ೯ಸದಲ, ಸಕಲ ಜೀವ, ಚರಾಚರ ವಸ್ತುಗಳನ್ನು ಪ್ರೀತಿಸು.
6) ಮಾಡುವ ಕೆಲಸದ ಕುರಿತು ಮೇಲು ಕೀಳೆಂಬ ಭಾವನೆ ಬೇಡ. ಪ್ರೀತಿ, ಶೃದ್ಧೆ ತುಂಬಿರಲಿ.
7) ಹಣವಿದ್ದರೂ ಅಹಂಕಾರಪಡಬೇಡ. ಖಚು೯ ಮಿತವಾಗಿರಲಿ. ಒಂದೊಂದು ರೂಪಾಯಿಗೂ ಲೆಕ್ಕವಿಡು.
8) ದೇಹದಲ್ಲಿ ಶಕ್ತಿ ಇರುವವರೆಗೂ ದುಡಿ, ಆದರೆ ದುಡ್ಡಿಗೆ ದಾಸನಾಗಬೇಡ. ಸ್ವಲ್ಪವಾದರೂ ದಾನ ಮಾಡು
9) ಸೋಮಾರಿತನ ಮನಸ್ಸನ್ನು ವಿಕಾರಗೊಳಿಸುತ್ತದೆ, ಸದಾ ಒಂದಿಲ್ಲೊಂದು ಕೆಲಸದಲ್ಲಿ ಮಗ್ನನಾಗು.
10) ನಾನು ಅನ್ನುವ ಶಬ್ದ ಮರೆತು ನಾವು ಅನ್ನುವ ಶಬ್ದ ಮರೆಯಬೇಡ.
11) ಸ್ನೇಹ ಜೀವನದ ಅನರ್ಗ್ಯ ರತ್ನ. ನಿಜವಾದ ಸ್ನೇಹ ಸಂಪಾದಿಸಿಕೊ.
12) ದೇವರನ್ನು ನಂಬು. ಆದರೆ ದೇವರ ಹೆಸರಲ್ಲಿ ನಡೆಯುವ ಡಂಬಾಚಾರ ನಂಬಬೇಡ.
13) ಹೆಣ್ಣನ್ನು ಗೌರವಿಸು. ಹೆಣ್ತನವ ತುಳಿಯಬೇಡ.
14) ಉದ್ಯೋಗಂ ಪುರುಷ ಲಕ್ಷಣಂ. ಉದ್ಯೋಗ ಗಂಡಿಗೆ ಲಕ್ಷಣ, ಆದರೆ ಹಣವಿದೆಯೆಂದು ದುಶ್ಚಟಕ್ಕೆ ಬಲಿಯಾಗಬೇಡ.
15) ಗೃಹಿಣಿ ಗೃಹಮುಶ್ಚತೆ, ಗೃಹಿಣಿಯ ಕತ೯ವ್ಯ ಹೆಣ್ಣಿಗೆ ಲಕ್ಷಣ, ಆದರೆ ಆಧುನಿಕತೆಯ ಹೆಸರಲ್ಲಿ ಸಂಪ್ರದಾಯ ಮುರಿಯಬೇಡ, ಸ್ವಲ್ಪವಾದರೂ ಇರಲಿ.
16) ಮನೆಯೆ ಮಂತ್ರಾಲಯ, ಮನಸೆ ದೇವಾಲಯ, ಈ ಮನಸೆಂಬ ದೇವಾಲಯದಲಯವ ಆಗಾಗ ವಿವೇಚನೆಯ ಮುಲಾಮು ಹಚ್ಚಿ ತೊಳೆಯುತ್ತಿರು. ಮನಸು ನಿಮ೯ಲವಾಗಿದ್ದರೆ ಮನೆ ನಂದನವನ.
17) ಆಸ್ತಿಕನಾಗಿರು. ನಾಸ್ತಿಕ ನೀನಾಗಿದ್ದರೆ ದೇವರನ್ನು ದೂರಿ ಆಸ್ತಿಕರ ಮನ ನೋಯಿಸಬೇಡ.
18) ಮೂಕ ಪ್ರಾಣಿಯ ಪೊರೆ ಹಿಂಸಿಸಬೇಡ. ಅವಕ್ಕೂ ಹೃದಯ, ಜೀವವಿರುವುದ ಮರೆಯಬೇಡ.
19) ಆಸೆಗೆ ದಾಸನಾಗಬೇಡ, ಮನಸ್ಸಿಗೆ ಸಾಕು ಎಂಬುವ ಪಾಠ ಆಗಾಗ ಕಲಿಸುತ್ತಿರು.
20)ಹಿರಿಯರನ್ನು ಗೌರವಿಸು. ಅವರು ಯಾರಾದರೇನು ವೃದ್ದಾಪ್ಯದಲ್ಲಿರುವವರ ಪೋಷಿಸು. ಏಕೆಂದರೆ ನೀನೂ ಮುಂದೆ ವೃದ್ದನಾಗುವೆ ಮರೆಯಬೇಡ.
21) ಕಳೆದು ಹೋದ ಕಾಲ ಮತ್ತೆ ಸಿಗುವುದಿಲ್ಲ. ಕಾಲಕ್ಕೆ ಪ್ರಾಧಾನ್ಯತೆ ಕೊಡು. ಒಂದು ನಿಮಿಷವೂ ವ್ಯಥ೯ ಮಾಡಬೇಡ.
22) ಆತ್ಮವೆ ಪ್ರೀತಿ, ಪ್ರೀತಿಯೆ ದೇವರು. ಇದಕ್ಕೆ ವಯಸ್ಸಿಲ್ಲ, ಸಾವಿಲ್ಲ ಆಕಾರವಿಲ್ಲ. ಶುದ್ಧವಾಗಿರಿಸಿಕೊ, ಕಲ್ಮಶವಾಗಲು ಬಿಡಬೇಡ.
23) ಮದುವೆಯೆ ಜೀವನವಲ್ಲ. ಅದಿಲ್ಲದೆ ಸಾಧಿಸುವ ಹಾದಿ ನೂರೆಂಟಿದೆ. ಆಗಿಲ್ಲವೆಂದು ಕೊರಗುವ ಬದಲು ಸಾಧನೆಗೆ ದೇವರು ಕೊಟ್ಟ ವರವೆಂದು ತಿಳಿ. ದೇಶ ಸುತ್ತು, ಕೋಶ ಓದು. ಅನುಭವದ ಜ್ಞಾನ ಬರೆದು ಹಂಚು.
24) ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ಜೀವನ ನಿಯಮಿತ ಮಾಡಿಕೊ, ಶಿಸ್ತು ರೂಢಿಸಿಕೊ.
25)ಮಾನವ ಜನ್ಮ ದೊಡ್ಡದು. ಭೂಮಿಯ ಋಣ ತೀರಿದ ಮೇಲೂ ಬದುಕಿನಾಚೆಗೂ ಬದುಕುವ ದಾರಿ ಹುಡುಕು. ನ್ಯಾಯ ಮಾಗ೯ದಲ್ಲಿ ನಡೆ.