ಸೂರ್ಯನ ಪ್ರಭಾವ ಉತ್ತಮವಾಗಿರದೆ ಇದ್ದರೆ ವ್ಯಕ್ತಿ ತನ್ನ ಜೀವನದಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜೊತೆಗೆ ನಮ್ಮ ಸುತ್ತಲಿನ ಪರಿಸರದಲ್ಲಿ ಸಾಕಷ್ಟು ಅನಾರೋಗ್ಯಗಳು ಹಾಗೂ ಋಣಾತ್ಮಕ ವಾತಾವರಣಗಳ ಸೃಷ್ಟಿಯಾಗುತ್ತವೆ. ಸೂರ್ಯನ ಕಿರಣಗಳ ಒಂದು ಸ್ಪರ್ಶದಿಂದ ಭೂಮಿಯ ಮೇಲೆ ಅಗಾಧವಾದ ಶಕ್ತಿ ಹಾಗೂ ಚೈತನ್ಯ ಉಂಟಾಗುವುದು. ಸೂರ್ಯನಿಲ್ಲದ ಪ್ರಪಂಚವು ಕತ್ತಲಲ್ಲಿ ಮುಳುಗುತ್ತದೆ.
ಅತ್ಯಂತ ಪ್ರಾಚೀನ ಹಾಗೂ ಪವಿತ್ರವಾದ ಋಗ್ವೇದದಲ್ಲಿ ಸೂರ್ಯನಿಗೆ ಸಂಬಂಧಿಸಿದ ವಿಶೇಷ ಮಂತ್ರಗಳಿರುವುದನ್ನು ಕಾಣಬಹುದು. ಸೂರ್ಯನಿಗೆ ಸೂಕ್ತ ಪೂಜೆಯನ್ನು ಕೈಗೊಳ್ಳುವುದರ ಮೂಲಕ ವ್ಯಕ್ತಿ ವಿವಿಧ ದೋಷಗಳಿಂದ ಮುಕ್ತನಾಗಬಹುದು. ಜೊತೆಗೆ ಕೆಲವು ಅದೃಷ್ಟಗಳು ಸಹ ಒದಗಿ ಬರುತ್ತವೆ.
ಪುರಾಣದಲ್ಲಿ ಸೂರ್ಯ—ಹಿಂದೂ ಪುರಾಣದಲ್ಲಿ ಸೂರ್ಯನು ಏಳು ಕುದುರೆಗಳನ್ನು ಹೊಂದಿರುವ ರಥದಲ್ಲಿ ಸವಾರಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ಏಳು ಕುದುರೆಗಳು ಮಾನವ ದೇಹದ ಏಳು ಚಕ್ರಗಳನ್ನು ಹಾಗೂ ಮಳೆ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತದೆ. ಬ್ರಹ್ಮಾಂಡದ ಮೂಲ ದೇವ ಮತ್ತು ವಿರಾಟ ಪುರುಷನ ಕಣ್ಣು ಎಂದು ಸಹ ಕರೆಯಲಾಗುವುದು. ಸಂತರು, ಅಸುರರು ಮತ್ತು ಮಾನವರು ಸೂರ್ಯನನ್ನು ಐದು ಸರ್ವೋತ್ತಮ ದೇವರುಗಳಲ್ಲಿ ಒಬ್ಬ ಎಂದು ಪೂಜಿಸುತ್ತಾರೆ.
ಸೂರ್ಯ ದೇವನ ರೂಪ—ಸೂರ್ಯನನ್ನು ಅನೇಕ ರೂಪದಲ್ಲಿ ಪೂಜಿಸಲಾಗುತ್ತದೆ. ಅವುಗಳಲ್ಲಿ ಎರಡು ರೂಪವು ಸಾಮಾನ್ಯವಾದದ್ದು. ಒಂದು ಅರ್ಕ ಮತ್ತೊಂದು ಮಿತ್ರ. ಭಾರತದ ಉತ್ತರ ಮತ್ತು ಪೂರ್ವ ರಾಜ್ಯಗಳಲ್ಲಿ ಸೂರ್ಯನನ್ನು ಅರ್ಕಾ ರೂಪದಲ್ಲಿ ಪೂಜಿಸುತ್ತಾರೆ. ಹಾಗಾಗಿ ಪ್ರಾಚೀನ ಕಾಲದಲ್ಲಿಯೇ ಸೂರ್ಯನ ಆರಾಧನೆಗಾಗಿ ಅನೇಕ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಓರಿಸ್ಸಾದ ಕೊನಾರ್ಕ್ ದೇವಾಲಯ, ಉತ್ತರ ಪ್ರದೇಶದ ಉತ್ತರಾರ್ಕ ಮತ್ತು ಲೋಲಾರ್ಕ್, ರಾಜಸ್ಥಾನದ ಬಲಾರ್ಕ್ ಮತ್ತು ಗುಜರಾತ್ನ ಮೊಧೇರಾದ ಸೂರ್ಯ ದೇವಾಲಯವು ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ದೇವಾಲಯವಾಗಿದೆ. ಸೂರ್ಯನ ಇನ್ನೊಂದು ರೂಪ ಮಿತ್ರ. ಅದು ಗುಜರಾತಿನಲ್ಲಿದೆ. ಗುಜರಾತಿ ಭಾಷೆಯಲ್ಲಿ ಮಿತ್ರ ಎಂದರೆ ಸ್ನೇಹಿತ ಎನ್ನುವ ಅರ್ಥವನ್ನು ನೀಡುತ್ತದೆ.
ಸೂರ್ಯ ದೇವನ ವಿವಿಧ ಹೆಸರು—ಹಿಂದೂ ಧರ್ಮದಲ್ಲಿ ಸೂರ್ಯನನ್ನು 108 ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳಲ್ಲಿ ಕೆಲವು ಜನಜನಿತ ಅಥವಾ ಸಾಮಾನ್ಯ ಹೆಸರುಗಳು. ಆದಿತ್ಯ, ಆದಿದೇವ, ಅಂಗರಕ, ಅರ್ಕಾ, ಭಾಗಾ, ಹ್ರಹ್ಮ, ಧನ್ವಂತರಿ, ಧರ್ಮಧ್ವಜ, ಧತ್ರಿ, ಧೂಮಕೇತು, ಇಂದ್ರ, ಜಯ, ಮೈತ್ರೇಯ, ಪ್ರಭಾಕರ, ರವಿ, ರುದ್ರ, ಸಾವಿತ್ರಿ, ಸೋಮ, ತೇಜ, ವರುಣ ಮತ್ತು ವಿಷ್ಣು ಎನ್ನುವ ಹೆಸರುಗಳಿಂದಲೂ ಕರೆಯಲಾಗುವುದು.
ಸೂರ್ಯ ದೇವನ ಪೂಜೆ ಮತ್ತು ಪ್ರಯೋಜನಗಳು—ನಿತ್ಯವೂ ಸೂರ್ಯ ದೇವನನ್ನು ಪೂಜಿಸುವುದರಿಂದ ಅನೇಕ ಅನುಕೂಲವನ್ನು ಪಡೆದುಕೊಳ್ಳಬಹುದು. ಸೂರ್ಯನ ಪೂಜೆಯಿಂದ ವ್ಯಕ್ತಿ ಆಂತರಿಕ ಶಕ್ತಿ, ಆತ್ಮವಿಶ್ವಾಸವನ್ನು ಪಡೆದುಕೊಳ್ಳುತ್ತಾನೆ. ಅಂತೆಯೇ ಸಂವಹನ ಕ್ರಿಯೆಯನ್ನು ಸುಧಾರಿಸುತ್ತದೆ. ಪೂಜೆಯಿಂದ ಗ್ರಹಗಳ ದೋಷ ಹಾಗೂ ಋಣಾತ್ಮಕ ಸಂಗತಿಗಳಿಂದ ಸುಲಭವಾಗಿ ಪಾರಾಗಬಹುದು. ಅಲ್ಲದೆ ಜೀವನದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಪಡೆದುಕೊಳ್ಳಬಹುದು. ಸೂರ್ಯನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಂಡರೂ ಸಾಕಷ್ಟು ತೊಂದರೆಗಳು ನಮ್ಮಿಂದ ದೂರ ಸರಿಯುತ್ತವೆ. ಆರೋಗ್ಯ, ಸಂಪತ್ತು ಸಮೃದ್ಧಿಯಾಘುತ್ತವೆ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಧೈರ್ಯ ಹಾಗೂ ಅವಕಾಶಗಳು ಕೈಗೂಡಿ ಬರುತ್ತವೆ.
ಸೂರ್ಯ ದೇವನನ್ನು ಪೂಜಿಸುವ ವಿಧಾನ—ಜೀವನದಲ್ಲಿ ಅಪೇಕ್ಷಿತ ಸಂಗತಿಗಳನ್ನು ಪಡೆದುಕೊಳ್ಳಲು ದೇವರ ಅನುಗ್ರಹ ಅತ್ಯಗತ್ಯ. ಅದರಲ್ಲೂ ಸೂರ್ಯ ದೇವನ ಕೃಪೆಯಿಂದ ಸಾಕಷ್ಟು ಅನುಕೂಲತೆಯನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ಸೂರ್ಯ ದೇವನ ಆರಾಧನೆಯಲ್ಲಿ ನಿರ್ದಿಷ್ಟವಾದ ಮಾರ್ಗಗಳಿವೆ.
ಸೂರ್ಯ ದೇವನಿಗೆ ಪೂಜಿಸುವ ಮುನ್ನ ದೇಹ ಮತ್ತು ಆತ್ಮವನ್ನು ಶುದ್ಧಿಗೊಳಿಸಿಕೊಳ್ಳಲು ಸ್ನಾನ ಮಾಡಬೇಕು.ಸೂರ್ಯ ದೇವನ ಪೂಜೆಯ ನಿಮಿತ್ತ ಉಪವಾಸ ಕೈಗೊಳ್ಳುವವರು. ಒಂದು ಮುಂಜಾನೆಯ ಸೂರ್ಯೋದಯದಿಂದ ಉಪವಾಸವನ್ನು ಕೈಗೊಂಡರೆ ಮರುದಿನದ ಸೂರ್ಯೋದಯದ ತನಕ ಊಟ-ತಿಂಡಿಯನ್ನು ಸೇವಿಸಬಾರದು. ಎರಡನೇ ದಿನದ ಸೂರ್ಯೋದಯದಿಂದ ಉಪವಾಸ ಕ್ರಮವು ಅಂತ್ಯಗೊಳ್ಳುತ್ತದೆ.
ಸೂರ್ಯ ದೇವನ ಆರಾಧನೆ ಮಾಡುವ ಮೊದಲು ಗಣೇಶನ ಪೂಜೆ ಮಾಡುವುದು ಕಡ್ಡಾಯ.ಸೂರ್ಯ ದೇವನ ಪೂಜೆಗೆ ರುದ್ರಾಕ್ಷಿ ಮಾಲೆ, ಕುಂಕುಮ, ಮೌಲಿ, ಸೂರ್ಯ ಯಂತ್ರ, ಹವಾನ್ ಕುಂಡ, ನೈವೇದ್ಯ, ತುಪ್ಪ, ಹಣ್ಣುಗಳು, ವೀಳ್ಯದೆಲೆ, ತೆಂಗಿನ ಕಾಯಿ ಸೇರಿದಂತೆ ಇನ್ನಿತರ ಪವಿತ್ರ ಪೂಜಾ ಸಾಮಾಗ್ರಿಗಳನ್ನು ಸಿದ್ಧಪಡಿಸಿಕೊಳ್ಳಬೇಕು.ಪೂಜೆಯ ನಂತರ ಧರ್ಮ ಗ್ರಂಥಗಳ ಪ್ರಕಾರ ಬ್ರಾಹ್ಮಣರಿಗೆ ಬಟ್ಟೆಯ ದಾನ ಮಾಡಬೇಕು.
ಪೂಜಾ ಕ್ರಮಗಳು
- ಮೊದಲು ಸ್ನಾನ ಮಾಡಿ, ಶುದ್ಧ ಬಟ್ಟೆ/ ಮಡಿ ಬಟ್ಟೆಯನ್ನು ತೊಡಬೇಕು.
- ಮುಂಜಾನೆ ಸೂರ್ಯೋದಯ ಆಗುತ್ತಿದ್ದಂತೆ ಸೂರ್ಯನ ಪ್ರಾರ್ಥನೆಯನ್ನು ಮಾಡಿ.
- ಪೂಜೆ ಮಾಡಲು ಪೂರ್ವ ದಿಕ್ಕಿಗೆ ಅಥವಾ ಸೂರ್ಯನ ಉದಯದ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ.
- ನಿಮ್ಮನ್ನು ಶುದ್ಧಗೊಳಿಸಿಕೊಳ್ಳಲು ಗೋ-ಮೂತ್ರವನ್ನು ತಲೆಯ ಮೇಲೆ ಸಿಂಪಡಿಸಿಕೊಳ್ಳಿ.
- ಸೂರ್ಯ ದೇವನನ್ನು ಆರಾಧಿಸುವ ಮೊದಲು ಗಣೇಶನನ್ನು ಪ್ರಾರ್ಥಿಸಿ.
- ಒಂದು ತಾಮ್ರದ ಪಾತ್ರೆಯಲ್ಲಿ ಜೇನುತುಪ್ಪವನ್ನು ತೆಗೆದುಕೊಂಡು, ಸೂರ್ಯ ದೇವನಿಗೆ ಅರ್ಪಿಸಿ.
- ಸೂರ್ಯೋದಯ ಆಗಿ ಒಂದು ಗಂಟೆಯ ಒಳಗೆ ಸೂರ್ಯ ದೇವನ ಪೂಜೆ ಮಾಡಬೇಕು.
- ಸೂರ್ಯನಿಗೆ ಕಮಲದ ಹೂವನ್ನು ಅರ್ಪಿಸುವುದು ಶ್ರೇಷ್ಠ. ಅದನ್ನು ಹೊರತು ಪಡಿಸಿದರೆ ಇತರ ಯಾವುದೇ ಹೂವನ್ನು ಸಹ ಬಳಸಬಹುದು.
- ಸೂರ್ಯನ ನಾಮ ಜಪ ಮಾಡುತ್ತಾ ಕುಂಕುಮ, ಚಂದನ ಅಥವಾ ಗಂಧವನ್ನು ತಿಲಕವನ್ನಾಗಿ ಅನ್ವಯಿಸಿಕೊಳ್ಳಬಹುದು.
- ಸೂರ್ಯನ ಪೂಜೆಗೆ ಗಾಯತ್ರಿ ಮಂತ್ರ ಅಥವಾ ಆದಿತ್ಯ ಹೃದಯ ಸ್ತೋತ್ರವನ್ನು ಹೇಳಬೇಕು.
- ಕಡಿಮೆ ಎಂದರೂ ಏಳು ಬಾರಿ ಸೂರ್ಯನಿಗೆ ಅಘ್ರ್ಯ ನೀಡುತ್ತಾ” ಓಂ ಘ್ರಿನಿಮ್ ಸೂರ್ಯ ಆದಿತ್ಯಮು” ಎಂದು ಪಠಿಸಬೇಕು.
- 5-7 ನಿಮಿಷಗಳ ಕಾಲ ಸೂರ್ಯ ದೇವನ ಕೆಳಗೆ ಕುಳಿತು ಧ್ಯಾನ ಮಾಡಿ.
- ಅಘ್ರ್ಯ ಬಿಟ್ಟ ನೆಲದ ಮೇಲೆ ಇರುವ ನೀರನ್ನು ಕೈಗಳಿಂದ ಸ್ಪರ್ಶಿಸಿ. ಆ ನೀರನ್ನು ನಿಮ್ಮ ಕಣ್ಣಿಗೆ, ತಲೆಗೆ ಹಚ್ಚಿಕೊಳ್ಳಿ.
- ಆ ಜಾಗವನ್ನು ನೀವು ತುಳಿಯಬಾರದು. ಅಲ್ಲಿಗೆ ಸೂರ್ಯ ದೇವನ ಪೂಜೆಯು ಮುಕ್ತಾಯವಾಗುವುದು.
ನಿತ್ಯವೂ ಈ ಕ್ರಮದ ಮೂಲಕ ಸೂರ್ಯನಿಗೆ ನೀರನ್ನು ಅರ್ಪಿಸಿ, ಪೂಜೆ ಮಾಡಿದರೆ ಸೂರ್ಯನ ಆಶೀರ್ವಾದ ದೊರೆಯುವುದು. ಅಂತೆಯೇ ನಂಬಲು ಅಸಾಧ್ಯವಾದಂತಹ ಶಿಸ್ತು, ಮಾನಸಿಕ ಶಕ್ತಿ ಹಾಗೂ ಚಿಂತನೆಗಳಲ್ಲಿ ಸಮತೋಲನವು ಕಂಡುಬರುತ್ತವೆ. ಸೂರ್ಯನ ಮೊದಲ ಕಿರಣವು ನಿಮ್ಮ ಮೇಲೆ ಬಿದ್ದರೆ, ಆ ದಿನದ ಆರಂಭವು ಯಶಸ್ಸಿಗೆ ಪ್ರೇರಣೆಯಾಗುತ್ತದೆ. ಜೊತೆಗೆ ಜೀವನದ ಎಲ್ಲಾ ಸಂತೋಷ, ಸಂಪತ್ತು ಮತ್ತು ಆರೋಗ್ಯವನ್ನು ಪಡೆದುಕೊಳ್ಳಬಹುದು ಎನ್ನಲಾಗುತ್ತದೆ.
ಪ್ರಾಚೀನ ಪದ್ಧತಿಯ ಪ್ರಕಾರ ಸೂರ್ಯನಿಗೆ ಅಘ್ರ್ಯ ನೀಡಿದರೆ ಮಾನಸಿಕ, ದೈಹಿಕ ಮತ್ತು ಪ್ರಾಯೋಗಿಕ ಸಹಿಷ್ಣುತೆಯನ್ನು ನೀಡುತ್ತದೆ. ಅದು ಜೀವನದಲ್ಲಿ ಉಂಟಾಘುವ ಅನೇಕ ಸಂಘರ್ಷಗಳನ್ನು ತಡೆಯುತ್ತದೆ. ಸೂರ್ಯ ದೇವನಿಗೆ ನಿಯಮಿತವಾಗಿ ಪೂಜೆ ಸಲ್ಲಿಸುವುದರಿಂದ ಬುದ್ಧಿಶಕ್ತಿ ಹೆಚ್ಚುವುದು, ವಿದ್ವಾಂಸರು ಆಗುವ ಸಾಧ್ಯತೆಗಳಿರುತ್ತವೆ. ವ್ಯಕ್ತಿಯ ಮನಸ್ಸಿನಲ್ಲಿ ಅಹಂ, ಕೋಪ, ದುರಾಸೆ, ಬಯಕೆ ಮತ್ತು ದುಷ್ಟ ಆಲೋಚನೆಗಳನ್ನು ನಿವಾರಿಸುತ್ತದೆ.