2020 ರಲ್ಲಿ ಭಾರತದಲ್ಲಿ 138 ಕೋಟಿಗೂ ಹೆಚ್ಚು ಜನ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ 80ರಷ್ಟು ಜನರು ಎಲ್ ಪಿ ಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇದ್ದಾರೆ.ಹೆಚ್ಚಾಗಿ ಬಳಸುವ ಗ್ಯಾಸ್ ಎಂದರೆ ಇಂಡಿಯನ್,ಎಚ್ ಪಿ, ಭಾರತ್. ಗ್ಯಾಸ್ ಏಜೆನ್ಸಿ ತೆಗೆದುಕೊಳ್ಳುವ ವ್ಯಕ್ತಿ ಭಾರತೀಯ ನಾಗರಿಕ ಆಗಿರಬೇಕು.
ವಿದ್ಯಾರ್ಹತೆ ಎಸ್ಎಸ್ಎಲ್ ಸಿ ಪಾಸಾಗಿರಬೇಕು ಹಾಗೂ ವಯಸ್ಸು 21 ವರ್ಷ ಮೇಲ್ಪಟ್ಟು 60 ವರ್ಷ ಒಳಗೆ ಇರಬೇಕು. ವ್ಯಕ್ತಿಯ ಮೇಲೆ ಯಾವುದೇ ಕಾರಣಕ್ಕೂ ಪೋಲಿಸ್ ಕೇಸ್ ಇರಬಾರದು ಹಾಗೂ ಜಾಗ ಕೂಡ ತುಂಬಾ ಮುಖ್ಯವಾಗಿರಬೇಕು.
ಗ್ಯಾಸ್ ಏಜೆನ್ಸಿ ಅಪ್ಲಿಕೇಶನ್ ಫಾರ್ಮ್ ತುಂಬಿದ ನಂತರ ಅಪ್ಲಿಕೇಶನ್ ಫೀಸ್ ಕಟ್ಟಬೇಕಾಗುತ್ತದೆ. ಹಣವು ಜಾಗದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ನಗರದಲ್ಲಿ ಅಪ್ಲಿಕೇಶನ್ ತುಂಬಿದ್ದರೆ ಜನರಲ್ ಕೆಟಗರಿ ಅವರಿಗೆ 10000 ಫೀಸ್ ಇರುತ್ತದೆ. ಒಬಿಸಿ ಕೆಟಗರಿ ಅವರಿಗೆ 5000 ಹಾಗೂ SC ST ಕೆಟಗರಿ ಅವರಿಗೆ 3000 ಫೀಸ್ ತುಂಬಬೇಕು.
ತಿಳಿಯಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಅಪ್ಲಿಕೇಶನ್ ಫಾರ್ಮ್ ತುಂಬುವುದಾದರೆ ಜನರಲ್ ಕೆಟಗರಿ ಅವರಿಗೆ ₹8000.ಒಬಿಸಿ ಕೆಟಗರಿ ₹4000 ಹಾಗೂ SC ST ಕೆಟಗರಿ ಗೆ ₹2500 ಫೀಸ್ ತುಂಬಬೇಕು. ಒಂದು ವೇಳೆ ಅಪ್ಲಿಕೇಶನ್ ಫಾರ್ಮ್ ಅಪ್ರೂವಲ್ ಆದರೂ ಆಗದಿದ್ದರೂ ಹಣವನ್ನು ಹಿಂದಿರುಗಿ ಕೊಡಲಾಗುವುದಿಲ್ಲ.
ಇನ್ನು ಅಪ್ಲಿಕೇಶನ್ ಅಪ್ರೋವಲ್ ಆದನಂತರ ಕೆಲವು ದಾಖಲೆಗಳನ್ನು ಮತ್ತು 10% ಸೆಕ್ಯೂರಿಟಿ ಡೆಪೋಸಿಟ್ ತುಂಬಬೇಕಾಗುತ್ತದೆ. ನಗರ ಪ್ರದೇಶದಲ್ಲಿ 5 ಲಕ್ಷ ಹಾಗೂ ಗ್ರಾಮೀಣದಲ್ಲಿ 4 ಲಕ್ಷ ರೂಪಾಯಿ ತುಂಬಬೇಕು. ಇದರ ನಂತರ ಗ್ಯಾಸ್ ಏಜೆನ್ಸಿ ನೀಡಲಾಗುತ್ತದೆ.ಗ್ಯಾಸ್ ಏಜೆನ್ಸಿಗೆ ಸಾಮಾನ್ಯವಾಗಿ 15 ಲಕ್ಷದಿಂದ 20 ಲಕ್ಷ ಇನ್ವೆಸ್ಟ್ಮೆಂಟ್ ಮಾಡಬೇಕಾಗುತ್ತದೆ.ಇದರಲ್ಲಿ ಒಳ್ಳೆಯ ಲಾಭವು ಕೂಡ ಸಿಗುತ್ತದೆ.