ಈ ಒಂದು ಉಪಾಯವನ್ನು ರವಿವಾರದ ದಿನ ನೀವು ಮಾಡಿದರೆ ಸಮಾಜದಲ್ಲಿ ನಿಮಗೆ ಗೌರವ ಘನತೆ ಹೆಚ್ಚಾಗಿ ಸಿಗುತ್ತದೆ. ಈ ಉಪಯವು ಸೂರ್ಯದೇವರಿಗೆ ಸಂಬಂಧಿಸಿದೆ. ಒಂದು ವೇಳೆ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಸಾಮಾನ್ಯವಾಗಿ ಸೂರ್ಯ ಗ್ರಹವು ದುರ್ಬಲವಾಗಿದೆ ಎಂದು ಅರ್ಥ. ಇಂತಹ ಸ್ಥಿತಿಯಲ್ಲಿ ನೀವು ಉಪಾಯವನ್ನು ಮಾಡಬಹುದು. ಈ ಉಪಾಯವನ್ನು ಮಾಡುವುದಕ್ಕೆ ನೀವು ವಿಶೇಷವಾಗಿ ಸೂರ್ಯ ತಿಲಕವನ್ನು ತಯಾರಿಸಿಕೊಳ್ಳಬೇಕು. ತಿಲಕವನ್ನು ಹಚ್ಚುವ ಕ್ರಿಯೆಯೂ ನಮ್ಮಲ್ಲಿ ವಿಶೇಷವಾದ ಕ್ರಿಯೆ ಆಗಿದೆ. ಪ್ರಾಚೀನ ಕಾಲದಲ್ಲಿ ಜನರು ವಿಶೇಷವಾಗಿ ತಿಲಕವನ್ನು ಯಾವತ್ತಿಗೂ ತಮ್ಮ ಹಣೆಯ ಮೇಲೆ ಹಚ್ಚಿಕೊಳ್ಳುತ್ತಿದ್ದರು.
ಆದರೆ ಕಾಲ ಕಳೆದಂತೆ ಎಲ್ಲ ಜನರು ಈ ವಿಷಯಗಳನ್ನು ಮರೆಯುತ್ತಾಲೇ ಹೋಗುತ್ತಿದ್ದಾರೆ. ಇದೇ ಕಾರಣದಿಂದ ಇವರ ಜೀವನದಲ್ಲಿ ತೊಂದರೆಗಳು ಹೆಚ್ಚಾಗುತ್ತದೆ. ಈ ಪ್ರಯೋಗವನ್ನು ಮಾಡಲು ಎಲ್ಲದಕ್ಕಿಂತ ಮೊದಲು ನೀವು ಒಂದು ದಾಸವಾಳ ಹೂವಿನ ಗಿಡವನ್ನು ನೀವು ಹುಡುಕಬೇಕು.ಒಂದು ಸಿಗದೇ ಇದ್ದಾರೆ ನಿಮ್ಮ ಹತ್ತಿರ ಇರುವ ಯಾವುದಾದರೂ ನರ್ಸರಿ ಗೆ ಹೋಗಿ ದಾಸವಾಳ ಹೂವಿನ ಗಿಡವನ್ನು ತೆಗೆದುಕೊಂಡು ಬರಬೇಕು.
ದಾಸವಾಳದ 8 ಹೂವನ್ನು ರವಿವಾರದ ದಿನ ತೆಗೆದುಕೊಂಡು ಬರಬೇಕು.ಈ ಹೂವುಗಳನ್ನು ರವಿವಾರದ ದಿನ ತೆಗೆದುಕೊಂಡು ಬಂದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇರುವ ಗಣಪತಿಗೆ ಈ ಹೂಗಳನ್ನು ಅರ್ಪಿಸಬೇಕು. ಯಾಕೆಂದರೆ ಭಗವಂತನಾದ ಶ್ರೀ ಗಣೇಶನಿಗೆ ಕೆಂಪು ದಾಸವಾಳದ ಹೂವು ತುಂಬಾನೇ ಪ್ರಿಯ ಆಗಿರುತ್ತದೆ.
ಒಂದು ವೇಳೆ ನೀವು ವಿಶೇಷವಾದ ಕಾರ್ಯಕ್ಕೆ ಹೋಗುತ್ತಿದ್ದಾರೆ ಭಗವಂತನಾದ ಶ್ರೀ ಗಣೇಶನಿಗೆ ಕೆಂಪು ಹೂವನ್ನು ಅರ್ಪಿಸಿದರೇ ತೊಂದರೆಗಳು ಬರುವುದಿಲ್ಲ. ನಿಮ್ಮ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ಮುಗಿಯಲು ಶುರುವಾಗುತ್ತವೆ. ಹಾಗಾಗಿ ರವಿವಾರದ ದಿನ 8 ಕೆಂಪು ದಾಸವಾಳ ಹೂವನ್ನು ತೆಗೆದುಕೊಂಡು ಬಂದು ಶ್ರೀ ಗಣೇಶನಿಗೆ ಅರ್ಪಿಸಬೇಕು. ಮಾರನೇ ದಿನ ಈ ಹೂಗಳನ್ನು ಉದಯಿಸುತ್ತಿರುವ ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಕು. ಮುಖ್ಯವಾಗಿ ಮಧ್ಯಾಹ್ನದ ಬಿಸಿಲಿನಲ್ಲಿ ಈ ಹೂವುಗಳನ್ನು ಇಡಬಾರದು.ಇದರಿಂದ ವಿಶೇಷವಾದ ತಿಲಕವನ್ನು ತಯಾರಿಸಬಹುದು.ಈ ಹೂವುಗಳನ್ನು ಒಣಗಿಸಿ ಪೇಸ್ಟ್ ಅನ್ನು ತಯಾರಿಸಿ ಇಟ್ಟುಕೊಳ್ಳಬೇಕು.ಇದರಲ್ಲಿ ಸ್ವಲ್ಪ ಕರ್ಪೂರವನ್ನು ಸೇರಿಸಬೇಕು ಮತ್ತು ಸಿಂಧೂರವನ್ನು ಸೇರಿಸಿ ತಿಲಕವನ್ನು ತಯಾರಿಸಿ ಪ್ರತಿದಿನ ನಿಮ್ಮ ಹಣೆಯ ಮಧ್ಯ ಇಡಬೇಕು.ಈ ರೀತಿ ಮಾಡಿದರೆ ಸೂರ್ಯ ಗ್ರಹವು ಪ್ರಬಲವಾಗುತ್ತದೆ.