ದೇಹದ ನಿಶಕ್ತಿಗೆ ಚಿರಯವ್ವನ ಕೊಡುವಂತಹ ಶಕ್ತಿ ಈ ಗಿಡದಲ್ಲಿ ಇದೆ. ಈ ಸಸ್ಯವನ್ನು ಉಪಯೋಗಿಸಿ ಹಿಂದಿನ ಕಾಲದಲ್ಲಿ ಋಷಿಮುನಿಗಳು ಸಾವಿರಾರು ವರ್ಷ ಬದುಕುತಿದ್ದರು ಅಂತ ದಾಖಲೆಗಳು ಇವೆ.ಈ ಗಿಡದ ಹೆಸರು ಪುನರ್ನಾವ ಸಸ್ಯ.ಇದರ ಸೈಂಟಿಫಿಕ್ ನೇಮ್ ರೆಡ್ ಸ್ಪೀಡರ್ ಲಿಂಕ್ ಎಂದು ಕರೆಯುತ್ತಾರೆ.ಇದು ಬಳ್ಳಿತರ ರೋಡ್ ಸೈಡ್ ಮತ್ತು ಮನೆಯ ಹಿತ್ತಲಿನಲ್ಲಿ ಬೆಳೆಯುತ್ತದೆ.ಇದರಲ್ಲಿ ಚಿಕ್ಕ ಚಿಕ್ಕದಾಗಿ ಪಿಂಕ್ ಕಲರ್ ಹೂವು ಬಿಡುತ್ತದೆ.
ಈ ಸಸ್ಯದ ಉಪಯೋಗವೇನೆಂದರೆ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತೆ ಕಿಡ್ನಿಯನ್ನು ಶಕ್ತಿಯುತಗೊಳಿಸುತ್ತದೆ.ಸಂಧಿವಾತ ಸಮಸ್ಸೆ, ಮಂಡಿ ನೋವು, ಜಾಯಿಂಟ್ ಪೇನ್ ಜೊತೆಗೆ ಹೊಟ್ಟೆಗೆ ಸಂಬಂಧ ಪಟ್ಟ ಎಲ್ಲಾ ಸಮಸ್ಯೆಗಳಿಗೂ ಸಹಿತ ಈ ಸೊಪ್ಪು ರಾಮಬಾಣವಾಗಿ ಕೆಲಸ ಮಾಡುತ್ತದೆ.ಈ ಸೊಪ್ಪನ್ನು ಎಲ್ಲರು ಸಹ ಉಪಯೋಗ ಮಾಡಬಹುದು.
ಪುನರ್ನಾವ ಹೆಸರಿನಲ್ಲಿ ಇದೆ ಇದರ ಅರ್ಥ ಪುನಃ ಯವ್ವನ ಕೊಡುವಂತಹದು. ಈ ಪುನರ್ನಾವ ಸೊಪ್ಪು ಕಿಡ್ನಿಯನ್ನು ಶಕ್ತಿಯುತವಾಗಿ ಇಡಲು ಸಹಾಯ ಮಾಡುತ್ತದೆ.ಅಷ್ಟೇ ಅಲ್ಲದೆ ಕಿಡ್ನಿಯಲ್ಲಿ ಕಲ್ಲು ಮತ್ತು ಉರಿ ಮೂತ್ರ ಸಮಸ್ಸೆಗಳು ಕಡಿಮೆ ಮಾಡುವಂತಹ ಗುಣ ಈ ಪುನರ್ನಾವ ಸೊಪ್ಪಿಗೆ ಇದೆ.ಈ ಸೊಪ್ಪನ್ನು ಹೇಗೆ ಉಪಯೋಗಿಸಬೇಕು ಎಂದರೆ,
10 ರಿಂದ 20 ಪುನರ್ನಾವ ಎಲೆ ತೆಗೆದುಕೊಂಡು ಚೆನ್ನಾಗಿ ತೊಳೆದು ನಂತರ ಎರಡು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಕುದಿಸಿದ ನಂತರ ಸೋಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.21 ದಿನ ಈ ಸೊಪ್ಪಿನ ಕಷಾಯ ಕುಡಿದರೆ ಕಿಡ್ನಿಗೆ ಎನರ್ಜಿ ಬರುತ್ತದೆ.ಮಲಬದ್ಧತೆ ಸಮಸ್ಸೆ ಇರುವವರು ಹರಳೆಣ್ಣೆ ಜೊತೆ ಈ ಪುನರ್ನಾವ ಪುಡಿಯನ್ನು ಮಿಕ್ಸ್ ಮಾಡಿಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಬೇಗ ಕಡಿಮೆಯಾಗುತ್ತದೆ.ಇನ್ನು ತಂಡಿ, ಶೀತ, ಕೆಮ್ಮು ಸಮಸ್ಸೆ ಇರುವವರು ಪುನರ್ನಾವ ಪುಡಿ, ಬಜೆ ಪುಡಿ, ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ತಂಡಿ, ಶೀತ ಕೆಮ್ಮು ಎಲ್ಲಾ ಕಡಿಮೆ ಆಗುತ್ತದೆ.ಅಷ್ಟೇ ಅಲ್ಲದೆ ಅಸ್ತಮಾ ಸಮಸ್ಸೆ ಇರುವವರು ಈ ಪುನರ್ನಾವ ಪೌಡರ್ ಅನ್ನು ಉಪಯೋಗಿಸಿ ನಂತರ ಅದಕ್ಕೆ ಸ್ವಲ್ಪ ಅರಿಶಿಣ ಮಿಕ್ಸ್ ಮಾಡಿ ತೆಗೆದುಕೊಳ್ಳುವುದರಿಂದ ಬೇಗ ಅವರಿಗೆ ಅಸ್ತಮಾ ಕಾಯಿಲೆ ಕಡಿಮೆ ಆಗುತ್ತದೆ.
ಈ ಪುನರ್ನಾವ ಸೊಪ್ಪನ್ನು ಪಲ್ಯ,ಜೆಟ್ನಿ ಮಾಡಿ ಆಹಾರದಲ್ಲಿ ಸೇವಿಸುತ್ತ ಬಂದವರಿಗೆ ಬೊಜ್ಜಿನ ಸಮಸ್ಸೆ ಉಂಟಾಗುವುದಿಲ್ಲ.ತೂಕ ಜಾಸ್ತಿ ಇದೆ ಎನ್ನುವವರು ಈ ಪುನರ್ನಾವ ಸೊಪ್ಪಿನ ಕಷಾಯ ಕುಡಿದರೆ ಸುಲಭವಾಗಿ ತೂಕ ಕಡಿಮೆ ಆಗುತ್ತದೆ.ಇದರಲ್ಲಿ ದೇಹದ ತೂಕವನ್ನು ನಿಯಂತ್ರಣ ಮಾಡುವ ಗುಣ ಇದರಲ್ಲಿ ಇದೆ.ಈ ಪುನರ್ನಾವ ಸೊಪ್ಪು ನಿದ್ರಾಹೀನತೆಗೂ ರಾಮಬಾಣವಾಗಿ ಕೆಲಸ ಮಾಡುತ್ತದೆ.ಇದರಲ್ಲಿ ಮಾಡಿರುವ ಆಹಾರವನ್ನು ಸೇವಿಸಿದರೆ ನಿದ್ರಾಹೀನತೆ ಸಮಸ್ಸೆ ಬರುವುದಿಲ್ಲ.ಸಂಧಿವಾತ, ಕೀಲು ನೋವು, ಮಂಡಿ ನೋವು ಸಮಸ್ಸೆ ಇರುವವರು ಈ ಸೊಪ್ಪನ್ನು ಉಪಯೋಗಿಸಿದರೆ ಈ ಎಲ್ಲಾ ಸಮಸ್ಸೆಯಿಂದ ಮುಕ್ತಿ ಸಿಗುತ್ತದೆ.ಪುನರ್ನಾವ ಸೊಪ್ಪಿನಲ್ಲಿ ಅದ್ಭುತವಾದ ಔಷಧಿಯ ಗುಣವಿದೆ. ಹಲವು ಕಾಯಿಲೆಗಳಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ.
ಪುನರ್ನಾವ ಚೆಟ್ನಿ ಹೇಗೆ ಮಾಡುವುದು ಎಂದರೆ-ಬೇಕಾಗುವ ಸಾಮಗ್ರಿಗಳು :ಒಂದು ಬೌಲ್ ಪುನರ್ನಾವ ಸೊಪ್ಪುಒಂದು ಈರುಳ್ಳಿಎರಡು ಎಸಳು ಬೆಳ್ಳುಳ್ಳಿಉರಿದ ಪುಟಾಣಿ ದಲ್ ಎರಡು ಚಮಚಎರಡು ಹಸಿ ಮೆಣಸುತೆಂಗಿನ ತುರಿ ಎರಡು ಚಮಚನಿಂಬೆ ರಸ 1 ಚಮಚಉಪ್ಪು 1 ಚಮಚ
ಮಾಡುವ ವಿಧಾನ : ಈ ಎಲ್ಲಾವನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಹಾಕಿದರೆ ಚೆಟ್ನಿ ತಯಾರಾಗುತ್ತದೆ.ಇದು ಚಪಾತಿ, ರೊಟ್ಟಿ, ಅನ್ನಕ್ಕೂ ಕೂಡ ತುಂಬಾ ಚೆನ್ನಗಿ ಇರುತ್ತದೆ.ಇದು ತುಂಬಾ ರುಚಿಯಾಗಿ ಇರುತ್ತದೆ. ಇದಕ್ಕೆ ಮೊಸರನ್ನು ಸಹ ಬಳಸಬಹುದು.ಮಾರ್ಕೆಟ್ ನಲ್ಲಿ ನಿಮಗೆ ಎಲ್ಲಾ ರೀತಿಯಲ್ಲಿ ಪುನರ್ನಾವ ಪ್ರಾಡಕ್ಟ್ ಸಿಗುತ್ತದೆ.ಇದನ್ನು ವಾರದಲ್ಲಿ ಎರಡು ಬಾರಿ ಬಳಸುವುದರಿಂದ ಒಳ್ಳೆಯ ಬೆನಿಫಿಟ್ ಸಿಗುತ್ತದೆ.