ಕ್ಯಾನ್ಸರ್ ಬಂದರೆ ಸಾವು ಖಚಿತವೋ ಅದೇ ರೀತಿ ಅದನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಇದಕ್ಕಾಗಿ ಆಹಾರ ಪದ್ದತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಆರಂಭದಿಂದಲೇ ತಂದುಕೊಂಡು ತುಂಬಾ ಕಟ್ಟುನಿಟ್ಟಾಗಿ ಆಹಾರ ಪದ್ದತಿಯನ್ನು ಅನುಸರಿಸುವುದರಿಂದ ಈ ಭಯಂಕರ ಕಾಯಿಲೆ ಅನ್ನು ನಿಯಂತ್ರಣದಲ್ಲಿ ಇಡಬಹುದು.
ತ್ವಚೆಯ ಅನಾರೋಗ್ಯಕ್ಕೆ ಕಾರಣವಾಗಿ ಚರ್ಮದ ಸೌಂದರ್ಯವನ್ನು ಹಾಳು ಮಾಡುವ ಸಮಸ್ಯೆ ಎಂದರೆ ಅದು ಚರ್ಮದ ಕ್ಯಾನ್ಸರ್.ಕೆಲವರಿಗೆ ಗಂಟುಗಳ ರೂಪದಲ್ಲಿ ಚರ್ಮದ ಮೇಲ್ಭಾಗದಲ್ಲಿ ಕಂಡು ಬಂದು ಕ್ಯಾನ್ಸರ್ ಸಮಸ್ಯೆಗೆ ಕಾರಣವಾದರೆ, ಇನ್ನು ಕೆಲವರಿಗೆ ಚರ್ಮದ ಮೇಲೆ ಗಾಯಗಳ ರೀತಿ, ಸೋಂಕುಗಳ ರೀತಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.
ಕ್ಯಾನ್ಸರ್ ವಾಸಿ ಮಾಡುವ ಕಾಯಿಲೆ ಖಂಡಿತ ಅಲ್ಲ. ಹಾಗಾಗಿ ಇದನ್ನು ಬರದಂತೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ.ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡುವ ಕೆಲವೊಂದು ಹಣ್ಣು-ತರಕಾರಿಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ಹೆಚ್ಚು ಅನುಕೂಲವಿದೆ.
ಇದಕ್ಕೆ ಅನುಕೂಲಕರವಾದ ತರಕಾರಿ ಎಂದರೆ ಅದು ಸೀಮೆಬದನೆಕಾಯಿ. ಸಂಶೋಧಕರು ತಮ್ಮ ಅಧ್ಯಯನಗಳಿಂದ ಹೇಳುವ ಪ್ರಕಾರ ಸೀಮೆಬದನೆಕಾಯಿ ತನ್ನಲ್ಲಿ ಎರಡು ಪ್ರಭೇದದ ಆಂಟಿಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದೆ. ಸಪೋನಿನ್ ಮತ್ತು ಫ್ಲೇವನಾಯ್ಡ್. ಇವುಗಳು ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣೆ ನೀಡುತ್ತವೆ.
ಸೀಮೆ ಬದನೆಕಾಯಿಯ ಒಳ ಭಾಗದಲ್ಲಿ ಹಾಗೂ ಮೇಲ್ಭಾಗದ ಸಿಪ್ಪೆಯಲ್ಲಿ ಮಾರಕ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ಹೋರಾಡುವ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ.ಹಾಗಾಗಿ ಇದು ಚರ್ಮದ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣಾತ್ಮಕ ಹಾಗೂ ಪರಿಣಾಮಕಾರಿ ಪ್ರಭಾವ ಬೀರುತ್ತದೆ.
ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆ. ಕೆಲವೊಮ್ಮೆ ಆನುವಂಶಿಕವಾಗಿಯೂ ಬರುತ್ತದೆ. ಹಾಗಿರುವಾಗ ಮಧುಮೇಹವನ್ನು ಕಂಟ್ರೋಲ್ ಮಾಡಲು ಔಷಧಿಯೊಂದೇ ಸಾಕಾಗುವುದಿಲ್ಲ, ಸೇವಿಸುವ ಆಹಾರದ ಕಡೆಗೆ ನಿಗಾವಹಿಸುವುದರ ಜೊತೆಗೆ ವ್ಯಾಯಾಮವೂ ಮುಖ್ಯವಾಗಿದೆ.
ಕಡಿಮೆ ಕಾರ್ಬೋಹೈಡ್ರೇಟ್ ಆಹಾರ–ಅದರಲ್ಲೂ ಡಯೆಟ್ ಫಾಲೋ ಮಾಡುವುದು ಅತ್ಯಗತ್ಯ. ಏಕೆಂದರೆ ಇದರಲ್ಲಿ ನೀವು ಸೇವಿಸುವ ಪ್ರತಿಯೊಂದೂ ರಕ್ತಕ್ಕೆ ಸಕ್ಕರೆಯನ್ನು ಸೇರಿಸುತ್ತದೆ ಮತ್ತು ಮಧುಮೇಹದ ಕಾಯಿಲೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ.
ಈ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರವನ್ನು ನಿಯಂತ್ರಿಸುವುದು ಮತ್ತು ಕಾರ್ಬೋಹೈಡ್ರೇಟ್ಗಳ ಪ್ರಮಾಣವು ಕಡಿಮೆ ಇರುವಂತಹ ಆಹಾರವನ್ನು ಸೇರಿಸುವುದು ಮುಖ್ಯ. ಅಂತಹ ಆಹಾರದಲ್ಲಿ ಒಂದು ಪನೀರ್. ಹಸಿ ಪನೀರ್ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿದೆ, ಇದರ ಸೇವನೆಯು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
ಮಧುಮೇಹಿಗಳು ಪನೀರ್ ತಿನ್ನುವುದರಿಂದಾಗುವ ಪ್ರಯೋಜನಗಳು, ಪನೀರ್ನಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡಕ್ಸ್ ಇರುವುದರಿಂದ ಮಧುಮೇಹಿಗಳಿಗೆ ಆರೋಗ್ಯಕರ ಆಹಾರವಾಗಿದೆ.ಪನೀರ್ನಲ್ಲಿ ಕಾರ್ಬೋಹೈಡ್ರೇಟ್ಗಳು ಕೂಡಾ ಕಡಿಮೆಯಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನುಒಮ್ಮೆಲೆ ಹೆಚ್ಚಿಸುವುದಿಲ್ಲ.
ಪನೀರ್ ಪ್ರೋಟೀನ್ಗಳು ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ.ಪನೀರ್ ಮೂಳೆಗಳು ಹಲ್ಲು ಮತ್ತು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.
ಮಧುಮೇಹ ರೋಗಿಗಳು ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಪನೀರ್ ತಿನ್ನಬೇಕು?ಮಧುಮೇಹ ರೋಗಿಗಳು ದಿನದಲ್ಲಿ ಅಥವಾ ರಾತ್ರಿಯ ಊಟದಲ್ಲಿ ಪನೀರ್ ಸೇವಿಸಬಹುದು. ಟೋನ್ಡ್ ಹಾಲಿನಿಂದ ತಯಾರಿಸಿದ ಪನೀರ್ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಶುಗರ್ ರೋಗಿಗಳಿಗೆ ದಿನಕ್ಕೆ 80 ರಿಂದ 100 ಗ್ರಾಂ ಪನೀರ್ ಸೇವಿಸಿದರೆ ಸಾಕು.ಅತಿಯಾಗಿ ಪನೀರ್ ತಿನ್ನೋದರ ಅಡ್ಡಪರಿಣಾಮಗಳು,,ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ..ತೂಕ ಹೆಚ್ಚಾಗಬಹುದು
ಪನೀರ್ ಅನ್ನು ಹೇಗೆ ತಿನ್ನಬೇಕು–ಸಕ್ಕರೆ ರೋಗಿಗಳಿಗೆ ಪನೀರ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹ ರೋಗಿಗಳು ಪನೀರ್ ಅನ್ನು ಹಸಿಯಾಗಿ ಮತ್ತು ಬೇಯಿಸಿದ ರೂಪದಲ್ಲಿ ಸೇವಿಸಬಹುದು. ಆದರೆ, ಹಸಿ ಪನೀರ್ನಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ ಶುಗರ್ ರೋಗಿಗಳಿಗೆ ಇದು ಹೆಚ್ಚು ಪ್ರಯೋಜನಕಾರಿ. ಇದಲ್ಲದೆ, ಪನೀರ್ ಅನ್ನು ಪ್ರತ್ಯೇಕ ಭಕ್ಷ್ಯವಾಗಿಯೂ ತಿನ್ನಬಹುದು. ಪನೀರ್ ಅನ್ನು ತರಕಾರಿಗಳು ಮತ್ತು ತಿಂಡಿಗಳ ರೂಪದಲ್ಲಿಯೂ ಸೇವಿಸಬಹುದು. ಮಧುಮೆಹಿಗಳು ಹೆಚ್ಚು ನೀರಿನ ಅಂಶ ಇರುವ ಆಹಾರ ಪದಾರ್ಥ ಸೇವನೆ ಮಾಡುವುದು ಒಳ್ಳೆಯದು.
ಹಿಂದಿನ ಕಾಲದಲ್ಲಿ ಪರಕೀಯರ ಕಾಯಿಲೆ ಎಂದೇ ಹೆಸರು ಪಡೆದಿರುವ ಈ ಸಕ್ಕರೆಕಾಯಿಲೆ, ಇಂದು ಬಡವ ಶ್ರೀಮಂತ, ಮಕ್ಕಳು, ಹಿರಿಯರು, ಗರ್ಭಿಣಿಯರು ಎನ್ನುವ ಯಾವುದೇ ಭೇದ-ಭಾವ ಇಲ್ಲದೆ ಎಲ್ಲರನ್ನೂ ಕಾಡುವ ಮಾರಕ ಕಾಯಿಲೆ ಎಂದು ಹೆಸರು ಪಡೆದುಕೊಂಡಿದೆ!
ಒಮ್ಮೆಈ ಕಾಯಿಲೆ ನಮ್ಮನ್ನು ಆವರಿಸಿಬಿಟ್ಟರೆ ಅದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿಲ್ಲ! ಈ ಬಗ್ಗೆ ವೈದ್ಯರೂ ಕೂಡ ಇದೇ ಮಾತನ್ನು ಹೇಳುತ್ತಾರೆ.. ಆದರೆ ಈ ಸಮಯದಲ್ಲಿ ವೈದ್ಯರು ನೀಡುವ ಔಷಧಿಗಳು, ಸರಿಯಾದ ಆಹಾರ ಪದ್ಧತಿ ಹಾಗೂ ಜೀವನಶೈಲಿ ನಡೆಸಿಕೊಂಡು ಹೋದರೆ ಮಾತ್ರ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಇವೆಲ್ಲಾದರ ಜೊತೆಗೆ ಪ್ರತಿ ತಿಂಗಳು ವೈದ್ಯರ ಬಳಿಗೆ ತೆರಳಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಬೇಕು, ಅಲ್ಲದೆ ವೈದ್ಯರು ನೀಡಿದ ಮಾತ್ರೆಗಳನ್ನು ಅಥವಾ ಔಷಧಿಗಳನ್ನು ಸರಿಯಾದ ಸಮ ಯಕ್ಕೆ ತೆಗೆದುಕೊಳ್ಳಬೇಕು, ಅಷ್ಟೇ ಅಲ್ಲದೆ ಕೆಲವೊಂದು ವ್ಯಾಯಾಮಗಳನ್ನು ಹಾಗೂ ಯೋಗಾಭ್ಯಾಸಗಳನ್ನು ಕೂಡ ಸರಿಯಾಗಿ ಮಾಡುವುದರಿಂದ, ಈ ಕಾಯಿಲೆಯನ್ನು ನಿಯಂತ್ರಿಸಬಹುದು. ಆದರೆ ಇವೆಲ್ಲದರ ನಡುವೆ ಒಂದು ಗ್ಯೂಡ್ ನ್ಯೂಸ್ ಇದೆ ಇದು ಏನು ಗೊತ್ತಾ? ಮಧುಮೇಹ ಕಾಯಿಲೆ ಇದ್ದವರು, ಸೋರೆಕಾಯಿ ಸೇವಿಸುವುದರಿಂದ, ದೇಹದಲ್ಲಿ ಏರಿಕೆ ಕಂಡಿರುವ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತ ದೆಯಂತೆ.
ನೋಡಲು ಸಣ್ಣಗೆ ದೊಣ್ಣೆಯಾಕಾರದಲ್ಲಿರುವ ಈ ಸೋರೆಕಾಯಿ, ತನ್ನಲ್ಲಿ ಹಲವಾರು ಬಗೆಯ ಪೋಷಕಾಂಶಗಳನ್ನು ಒಳಗೊಂಡಿದೆ. ಈ ತರಕಾರಿ, ನೀರಿನಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳ ಗೊಂಡಿರುವ ಜೊತೆಗೆ ಕಡಿಮೆ ಕ್ಯಾಲೋರಿ ಹಾಗೂ ನಾರಿನಾಂಶವು ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ, ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ನಮ್ಮ ರಕ್ತದಲ್ಲಿನ ಸಕ್ಕರೆಮಟ್ಟ ಏರಿಕೆ ಆಗದಂತೆ ನೋಡಿಕೊಳ್ಳುವುದರ ಜೊತೆಗೆ, ದೇಹದ ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುವುದು
ಹೀಗಾಗಿ ಮಧುಮೇಹ ಇರುವ ರೋಗಿಗಳು ನಿಯಮಿತವಾಗಿ ಸೋರೆಕಾಯಿಯನ್ನು ವಾರಕ್ಕೆ ಒಮ್ಮೆ ಯಾದರೂ, ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರ ಜೊತೆಗೆ ಇಲ್ಲಾಂದರೆ ಇದರಿಂದ ಮಾಡಿದ ಜ್ಯೂಸ್ನ್ನು ದಿನಕ್ಕೆ ಒಂದು ಲೋಟ ಕುಡಿಯುತ್ತಾ ಬರುವುದರಿಂದ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿಇಟ್ಟುಕೊಳ್ಳಬಹುದು.
ಇದರ ಪ್ರಯೋಜನಗಳು ಇಷ್ಟಕ್ಕೆ ನಿಂತಿಲ್ಲ, ದೇಹದಲ್ಲಿ ರಕ್ತದಲ್ಲಿನ ಸಕ್ಕರೆಮಟ್ಟವನ್ನು ನಿಯಂತ್ರಿ ಸುವುದರ ಜೊತೆಗೆ, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಿ, ದೇಹದ ತೂಕ ವನ್ನು ಕೂಡ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.
ಮುಖ್ಯವಾಗಿ ಈ ತರಕಾರಿಯಲ್ಲಿ, ಯಥೇಚ್ಛವಾಗಿ ನೀರಿನಾಂಶ ಇರುವುದರ ಜೊತೆಗೆ, ನಾರಿನಾಂಶ ಕೂಡ ಸಿಗುವುದರಿಂದ, ಇದು ದೇಹದ ಚಯಾಪಚಯ ಸುಧಾರಣೆಗೆ ಸಹಾಯ ಮಾಡುವುದು, ಹಾಗೂ ಜೀರ್ಣಕ್ರಿಯೆ ಮತ್ತು ದೇಹದ ತೂಕ ಇಳಿಕೆ ಮಾಡುಲು ಕೂಡ ಸಹಾಯಕ್ಕೆ ನಿಲ್ಲುವುದು.