ಇಂದು ನಾಗರ ಪಂಚಮಿ ಪ್ರಯುಕ್ತ ಸರಳ ಪೂಜೆ ಪೂಜಾ ಸಮಯ, ನೈವೇದ್ಯ ಮಂತ್ರ ರಂಗೋಲಿ ಯಾವುವು!

ನಾಗರ ಪಂಚಮಿ ಹಬ್ಬ ಆಚರಣೆ ಮಾಡಬೇಕು ಎಂದರೆ ಮನೆಯಲ್ಲಿ ಎರಡು ಜೋಡಿ ನಾಗಪ್ಪನ ರಂಗೋಲಿಯನ್ನು ಹಾಕಬೇಕು. ನಂತರ ಒಂದು ಪೀಠದ ಮೇಲೆ ನಾಗಪ್ಪನ ವಿಗ್ರಹ ವನ್ನು ಇಡಬೇಕು. ಮೊದಲು ಶ್ರೀ ಗಂಧ ಅರಿಶಿಣ ಕುಂಕುಮವನ್ನು ಹಚ್ಚಬೇಕು. ಗೆಜ್ಜೆ ವಸ್ತ್ರ ಹಾಕಿ ಹೂವಿನಿಂದ ಅಲಂಕಾರ ಮಾಡಬೇಕು. ಮೊದಲು ಗಣೇಶನ ಪೂಜೆಯನ್ನು ಸಹ ಮಾಡಬೇಕು. ಇನ್ನು ನಾಗರ ಪಂಚಮಿ ಹಬ್ಬ ಯಾವಾಗಲೂ ಅಮವಾಸ್ಯೆ ಆಗಿ 5ನೇ ದಿವಸಕ್ಕೆ ಪಂಚಮಿ ಹಬ್ಬವು ಬರುವುದು. ಹಾಗಾಗಿ ಸೋಮವಾರ ನಮಗೆ ನಾಗರ ಪಂಚಮಿ ಹಬ್ಬ ಬಂದಿರುತ್ತದೆ. ಆ ದಿನ ಮನೆಯಲ್ಲಿ ವಿಶೇಷವಾಗಿ ಮನೆಯಲ್ಲಿ ವಿಷೇಷವಾಗಿ ಆಚರಣೆ ಮಾಡಬೇಕು. ಜೊತೆಗೆ ದೇವಸ್ಥಾನಕ್ಕೆ ಹೋಗಿ ನಾಗರ ಕಟ್ಟೆಗೂ ಕೂಡ ಹಾಲನ್ನು ಎರೆಯಬೇಕು.

ನಾಗರ ಪಂಚಮಿ ತಿಥಿ ಆಗುವುದು ಆಗಸ್ಟ್ 21ನೇ ತಾರೀಕು ಬೆಳಗ್ಗೆ 12:21ನಿಮಿಷಕ್ಕೆ ಪ್ರಾರಂಭವಾಗಿ ಆಗಸ್ಟ್ 22 ನೇ ತಾರೀಕು ಬೆಳಗಿನ ಜಾವಾ 2:00 ಗಂಟೆಗೆ ಅಂತ್ಯ ಆಗುತ್ತದೆ. ಹಾಗಾಗಿ ಸೋಮವಾರದ ದಿನ ಪಂಚಮಿ ತಿಥಿಯನ್ನು ಮಾಡಬೇಕು. ಪೂಜಾ ಸಮಯ ಸೋಮವಾರ ಬೆಳಗ್ಗೆ 5:25 ನಿಮಿಷದಿಂದ 7:00 ಗಂಟೆವರೆಗೆ ಇದೆ. ಈ ಸಮಯದಲ್ಲಿ ಪೂಜೆ ಮಾಡಬಹುದು.

ಬೆಳಗ್ಗೆ ಬೇಗಾ ಎದ್ದು ಮನೆಯನ್ನು ಸ್ವಚ್ಛ ಮಾಡಿ ಹೊಸ್ತಿಲ ಪೂಜೆ ಮಾಡಿಕೊಂಳ್ಳಬೇಕು. ಪ್ರತಿದಿನ ಮಾಡುವ ಹಾಗೆ ಪೂಜೆ ಮಾಡಿ. ನಾಗಪ್ಪನನ್ನು ಪ್ರತಿಷ್ಟಪಾನೇ ಮಾಡಬೇಕು. ಹಣ್ಣುಗಳನ್ನು ಇಡಬೇಕು.ಈ ನಾಗರ ಪಂಚಮಿ ಗೇ ಪ್ರಸಾದ ಏನು ಎಂದರೆ ಚಿಗಳಿ ತಂಬಿಟ್ಟು ಮಾಡಬೇಕು. ಆ ದಿನ ಯಾವುದೇ ಕಾರಣಕ್ಕೂ ರೊಟ್ಟಿ ಮತ್ತು ಬಜ್ಜಿ ಬೋಂಡವನ್ನು ಮಾಡಬಾರದು. ಆದಷ್ಟು ಉಪವಾಸ ಇದ್ದು ಪೂಜೆ ಮಾಡಿದರೆ ಒಳ್ಳೆಯದು.

ನಾಗಪ್ಪನಿಗೆ 5 ಎಳೆ ಅಂಗನೂಲು ಮತ್ತು ಗೆಜ್ಜೆ ವಸ್ತ್ರವನ್ನು ಹಾಕಬೇಕು. ನಂತರ ಹೂವಿನಿಂದ ಅಲಂಕಾರ ಮಾಡಬೇಕು. ಎರಡು ದೀಪ ಹಚ್ಚಬೇಕು ಮತ್ತು ವ್ರತದ ದಾರವನ್ನು ಕೂಡ ಸಿದ್ಧತೆ ಮಾಡಬೇಕು. ಅದನ್ನು ನಾಗಪ್ಪನ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ಮನೆಯಲ್ಲಿ ಇರುವ ಸದಸ್ಯರಿಗೇ ಕಟ್ಟಬೇಕು.ನಂತರ ಪೂಜೆಯನ್ನು ಪ್ರಾರಂಭ ಮಾಡಬೇಕು. ವ್ರತದ ದಾರವನ್ನು ಕಟ್ಟಿ ಹಾಲನ್ನು ಹಾಕಬೇಕು.ಹಸಿ ಹಾಲಿಗೆ ತುಪ್ಪವನ್ನು ಹಾಲನ್ನು ಎರೆಯಬೇಕು.

ಇನ್ನು ಹುತ್ತಕೆ ಪೂಜೆಯನ್ನು ಮಾಡಿ ನಮಸ್ಕಾರ ಮಾಡಿಕೊಂಡು ಬರಬೇಕು.ಈ ರೀತಿಯಾಗಿ ಹಾಲು ತುಪ್ಪ ಹಾಕುವುದರಿಂದ ಮನೆ ಕೂಡ ಶಾಂತವಾಗಿ ಇರುತ್ತದೇ. ಈ ರೀತಿ ಮಾಡಿದರೆ ನಿಮಗೆ ಇರುವ ಚರ್ಮದ ಕಾಯಿಲೆ ಕೂಡ ವಾಸಿ ಮಾಡಿಕೊಳ್ಳಬಹುದು.ಸಂತಾನ ಅಪೇಕ್ಷೆವುಳ್ಳವರು ಈ ನಾಗರ ಪಂಚಮಿ ಮಾಡುವುದರ ಜೊತೆಯಲ್ಲಿ ಷಷ್ಠಿ ಪೂಜೆ ಮಾಡುತ್ತ ಬನ್ನಿ.ಇದೆ ರೀತಿ ಮನೆಯಲ್ಲಿ ಮತ್ತು ದೇವಸ್ಥಾನದಲ್ಲಿ ಆಚರಣೆ ಮಾಡಬೇಕು.ಸುಬ್ರಮಣ್ಯ ಪೂಜೆ ಮಾಡುವುದರಿಂದ ನಿಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಬಹುದು.

Related Post

Leave a Comment