ವರಮಹಾಲಕ್ಷ್ಮಿ ಹಬ್ಬ ಮಾಡುವವರು ಈ ಕೆಲವೊಂದು ಕಪ್ಪುಗಳನ್ನು ಮನೆಯಲ್ಲಿ ಮಾಡಬಾರದು. ಸಾಕ್ಷತ್ ಮಹಾಲಕ್ಷ್ಮಿ ದೇವಿಯನ್ನು ವರವನ್ನು ಬೇಡಿಕೊಂಡು ಈ ವ್ರತವನ್ನು ಆಚರಣೆ ಮಾಡುತ್ತ ಇರುವುದರಿಂದ ಮನೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇಂತಹ ತಪ್ಪುಗಳನ್ನು ಮಾಡುವುದರಿಂದ ಬಹಳಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಮನೆಯಲ್ಲಿ ಲಕ್ಷ್ಮಿಯನ್ನು ಆಹ್ವಾನೇ ಮಾಡಿ ಪೂಜೆಯನ್ನು ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವ ವ್ಯಕ್ತಿಗಳು ಜನಗಳು ಯಾವುದೇ ಕಾರಣಕ್ಕೂ ಎಂತದ್ದೇ ಪರಿಸ್ಥಿತಿಯಲ್ಲೂ ಕೂಡ ಮನೆಯಲ್ಲಿ ಜಗಳವನ್ನು ಆಡಬಾರದು. ಈ ರೀತಿ ಜಗಳವನ್ನು ಆಡುವುದರಿಂದ ಮಹಾಲಕ್ಷ್ಮಿ ದೇವಿಗೆ ಕೋಪ ಬಂದು ನಿಮ್ಮ ಮನೆಯಿಂದ ಹೊರಟು ಹೋಗುತ್ತಾಳೆ ನಂಬಿಕೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಹಬ್ಬದ ದಿನಾ ಮಾತ್ರ ಜಗಳವನ್ನು ಆಡಬೇಡಿ.
ಹಬ್ಬದ ದಿನ ಮನೆಯ ಮುಖ್ಯದ್ವಾರದ ಬಾಗಿಲನ್ನು ಹಾಕಬಾರದು. ಈ ರೀತಿಯಾಗಿ ಮುಖ್ಯದ್ವಾರದ ಬಾಗಿಲನ್ನು ಹಾಕುವುದರಿಂದ ಮನೆಗೆ ಬರುವ ಲಕ್ಷ್ಮಿಗೆ ಅವಮಾನ ಆಗುತ್ತದೆ.
ಇನ್ನು ಮನೆಯಲ್ಲಿ ಲಕ್ಷ್ಮಿಯ ಪ್ರತಿಷ್ಟಾಪನೆ ಆದಮೇಲೆ ಯಾವುದೇ ಕಾರಣಕ್ಕೂ ಪೊರಕೆಯಲ್ಲಿ ಕಸವನ್ನು ಗುಡಿಸಬಾರದು. ಪೊರಕೆಗೆ ದೇವರಿಗೆ ತಾಗಿಸುವುದು ಕೂಡ ಬಹಳಷ್ಟು ಕೆಟ್ಟದ್ದು. ಹಾಗಾಗಿ ದೇವರನ್ನು ಕದಲಿಸುವ ತನಕ ಪೊರಕೆಯಿಂದ ಗುಡಿಸಬೇಡಿ.
ಇನ್ನು ವರಮಹಾಲಕ್ಷ್ಮಿ ಹಬ್ಬದ ದಿನಾ ಯಾರೇ ಮನೆಗೆ ಬಂದರು ಕೂಡ ಅವರನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು. ಒಂದು ಹಣ್ಣು ಅಥವಾ ಸಿಹಿಯನ್ನು ಕೊಟ್ಟು ಕಳುಹಿಸಬೇಕು.
ಇನ್ನು ಹಬ್ಬದ ದಿನ ಯಾವುದೇ ಕಾರಣಕ್ಕೂ ಮಾಂಸಹರವನ್ನು ಮಾಡಬಾರದು ಹಾಗು ಮಧ್ಯಾಪನ ಧೂಮಪಾನವನ್ನು ಸಹ ಮಾಡಬಾರದು.
ಈ ದಿನ ಯಾವುದೇ ಕಾರಣಕ್ಕೂ ಸಾಲವನ್ನು ಕೊಡಬಾರದು ಮತ್ತು ತೆಗೆದುಕೊಳ್ಳಬಾರದು. ಇನ್ನು ವರಮಹಾಲಕ್ಷ್ಮಿ ಪೂಜೆ ಮಾಡುವವರು ಮನಸ್ಸಿನಲ್ಲಿ ಅಶಾಂತಿ ಇಟ್ಟುಕೊಂಡು ಮಾಡಬಾರದು. ಆದಷ್ಟು ನೆಮ್ಮದಿ ಭಕ್ತಿಯಿಂದ ಶಾಂತಿಯಿಂದ ಪೂಜೆ ಮಾಡಿ ನೋಡಿ ಒಳ್ಳೆಯದಾಗುತ್ತದೆ. ಇನ್ನು ಬೇರೆಯವರಿಗೆ ಕೆಟ್ಟದ್ದು ಬಯಸುವುದನ್ನು ಮಾಡಬೇಡಿ. ಇದರಿಂದ ಪೂಜೆ ಮಾಡಿದರು ಸಹ ಯಾವುದೇ ಕಾರಣಕ್ಕೂ ಫಲ ಎನ್ನುವುದು ಲಭಿಸುವುದಿಲ್ಲ.