ಸೊಳ್ಳೆಗಳನ್ನು ಹೊಡಿಸುವುದಕ್ಕೆ ಒಂದು ಕಾಫಿ ಕಪ್ ಅಥವಾ ಟೀ ಕಪ್ ಇದ್ದರೆ ಸಾಕು. ಒಂದೇ ಒಂದು ಸೊಳ್ಳೆ ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ.ಮಳೆಗಾಲದಲ್ಲಿ ಸೊಳ್ಳೆ ಕಾಟ ಜಾಸ್ತಿ ಎಂದು ಹೇಳಬಹುದು.ಸೊಳ್ಳೆಗಳ ಕಡಿತವು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ರಾಸಾಯನಿಕ ಕೀಟನಾಶಕಗಳ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಉತ್ಪನ್ನಗಳನ್ನು ಬಳಸಿ ಈ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.
ಮಳೆಗಾಲ ಶುರುವಾಯಿತೆಂದರೆ, ಸೊಳ್ಳೆಗಳ ಕಾಟವು ಶುರುವಾಗಿದೆ ಎಂದರ್ಥ. ಏಕೆಂದರೆ ಈ ಮಳೆಗಾಲವು ಸೊಳ್ಳಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಸೊಳ್ಳೆಗಳು ಹೆಚ್ಚಿರುತ್ತವೆ. ಸಂಜೆಯಾಗುತ್ತಿದ್ದಂತೆ ಮನೆಗೆ ಮುತ್ತಿಗೆಯಿಡುತ್ತ, ತನ್ನದೇ ರಾಜ್ಯಬಾರ ಎಂಬಂತೆ ಮನುಷ್ಯರಿಗ ಕಡಿಯುತ್ತ, ರಕ್ತವನ್ನು ಹೀರುತ್ತ ಕಾಟ ಕೊಡುತ್ತಿರುತ್ತವೆ.
ಸೊಳ್ಳೆ ಕಡಿತವು ಫೈಲೇರಿಯಾ, ಎನ್ಸೆಫಾಲಿಟಿಸ್, ಚಿಕನ್ ಗೂನ್ಯಾ, ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳ ಹರಡುವಿಕಗೆ ಕಾರಣವಾಗುತ್ತದೆ. ಕೆಲವು ವಿಧದ ಸೊಳ್ಳೆಗಳ ಕಡಿತವು ಗುಳ್ಳೆಗಳು ಮತ್ತು ತೀವ್ರವಾದ ಉರಿಯೂತವನ್ನು ಉಂಟುಮಾಡಬಹುದು. ಸೊಳ್ಳೆಗಳ ಕಾಟವನ್ನು ನಿವಾರಿಸಲು ಹಲವಾರು ಪರಿಣಾಮಕಾರಿ ರಾಸಾಯನಿಕಯುಕ್ತ ಕೀಟನಾಶಕಗಳಿದ್ದರೂ, ಅದು ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಹಾಗಾಗಿ ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಆರೋಗ್ಯಕರ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು.
ಮೊದಲು ಒಂದು ಕಪ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ ಸಿಪ್ಪೆಯನ್ನು ಹಾಕಿ. ನಂತರ 7-8 ಲವಂಗವನ್ನು ಜಜ್ಜಿ ಪುಡಿ ಮಾಡಿ ಇದಕ್ಕೆ ಹಾಕಿ ಮತ್ತು ಇದಕ್ಕೆ ತೆಂಗಿನ ನಾರು ಹಾಕಿ ಒಂದು ಕರ್ಪೂರ ಹಚ್ಚಿದರೆ ಹೊಗೆ ಬರುತ್ತದೆ. ಈ ಹೊಗೆ ಸೊಳ್ಳೆಗಳಿಗೆ ಆಗುವುದಿಲ್ಲ ಮತ್ತು ಸೊಳ್ಳೆಗಳು ಸಹ ಮನೆಯಿಂದ ಓಡಿ ಹೋಗುತ್ತದೆ.ತುಂಬಾನೇ ಎಫೆವ್ಟ್ ಆಗಿರುವ ಮನೆಮದ್ದು ಒಮ್ಮೆಯಾದರೂ ಟ್ರೈ ಮಾಡಿ ನೋಡಿ.