ಮಾಂಗಲ್ಯ ಸರ ಹೆಣ್ಣು ಮಕ್ಕಳಿಗೆ ಮುಖ್ಯವಾದ ವಸ್ತು ಎಂದು ಹೇಳಬಹುದು. ವಿಶೇಷವಾಗಿ ಗಂಡ ಹೆಂಡತಿ ಮಧ್ಯ ಜಗಳ ಆಗುತ್ತಿದೆ ಎಂದರೆ ಅಥವಾ ಸಣ್ಣ ಪುಟ್ಟ ಕಲಹಗಳು ಆಗುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಏನು ಎಂದರೆ ಹೆಣ್ಣು ಮಕ್ಕಳು ತಾಳಿ ಧರಿಸುವಾಗ ಮಾಡುವ ತಪ್ಪುಗಳು. ತುಂಬಾ ಮಹಿಳೆಯರು ತಾಳಿ ಸರಕ್ಕೆ ಸೇಫ್ಟಿ ಪಿನ್ ಹಾಕಿಕೊಳ್ಳುತ್ತಾರೆ. ಅದರೆ ಈ ರೀತಿ ಸೇಫ್ಟಿ ಪಿನ್ ಅನ್ನು ತಾಳಿ ಸರಕ್ಕೆ ಹಾಕಿಕೊಳ್ಳಬಾರದು. ಏಕೆಂದರೆ ಸೇಫ್ಟಿ ಪಿನ್ ಅನ್ನು ಕಬ್ಬಿಣದಿಂದ ಮಾಡಿರುತ್ತಾರೆ. ಕಬ್ಬಿಣ ಶನಿಗೆ ಇಷ್ಟ ಆಗದೆ ಇರುವ ವಸ್ತು. ಅದಕ್ಕಾಗಿ ಈ ಒಂದು ಪಿನ್ ಅನ್ನು ತಾಳಿ ಸರಕ್ಕೆ ಹಾಕಿದರೆ ಸಂಸಾರದಲ್ಲಿ ಜಗಳಗಳು ಹೆಚ್ಚಾಗುತ್ತದೆ ಹಾಗು ಸಾಕಷ್ಟು ಕಷ್ಟಗಳು ಬರಬಹುದು.ಹಾಗಾಗಿ ಈ ಒಂದು ತಪ್ಪನ್ನು ಎಂದಿಗೂ ಮಾಡಬೇಡಿ.
ವಿಶೇಷವಾಗಿ ಹೆಣ್ಣು ಮಕ್ಕಳು ಮಾಂಗಲ್ಯ ಸರವನ್ನು ಯಾವಾಗಲು ತೆಗೆಯುತ್ತ ಇರಬಾರದು.ಮುಖ್ಯವಾಗಿ ಮಂಗಳವಾರ ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ಮಾಂಗಲ್ಯ ಸರವನ್ನು ತೆಗೆಯಬಾರದು. ಗಂಡನ ಆಯಸ್ಸು ಎನ್ನುವುದು ಕಡಿಮೆ ಆಗುತ್ತದೆ.
ಹೆಣ್ಣು ಮಕ್ಕಳು ತಾಳಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟೇ ಮರ್ಯಾದೆಯನ್ನು ಗಂಡಸರು ಕೂಡ ಕೊಡಬೇಕಾಗುತ್ತದೆ. ವಿಶೇಷವಾಗಿ ಕರೀ ಮಣಿ ಮತ್ತು ತಾಳಿಯನ್ನು ಕಾಲಿನಿಂದ ಸ್ಪರ್ಶ ಮಾಡುವುದು ಮತ್ತು ಮರ್ಯಾದೆ ಕೊಡದೆ ಇರುವ ಹಾಗೆ ಮಾಡುವುದರಿಂದ ನಿಮ್ಮ ಆಯಸ್ಸಿಗೆ ತೊಂದರೆ ಆಗುವುದು. ಈ ತಾಳಿ ಎನ್ನುವುದು ತುಂಬಾ ಶಕ್ತಿಶಾಲಿ. ಇದಕ್ಕೆ ಮರ್ಯಾದೆ ಕೊಡದೆ ಇದ್ದರೆ ನಿಮ್ಮ ಸಂಸಾರ ಕೂಡ ಚೆನ್ನಾಗಿ ಇರುವುದಿಲ್ಲ.ಇದರ ಜೊತೆ ಆಯಸ್ಸು ಕೂಡ ಕಡಿಮೆ ಆಗುತ್ತದೆ.
ಹೆಣ್ಣು ಮಕ್ಕಳು ಬೆಳಗ್ಗೆ ಎದ್ದು ಮಾಂಗಲ್ಯ ಸರವನ್ನು ಸ್ಪರ್ಶ ಮಾಡಿ ಕಣ್ಣಿಗೆ ಮುಟ್ಟಿಸಿ ದೇವರನ್ನು ಸ್ಮರಿಸಿ ದಿನವನ್ನು ಶುರು ಮಾಡಿದರೆ ಹೆಣ್ಣು ಮಕ್ಕಳಿಗೆ ಸಾಕಷ್ಟು ಒಳ್ಳೆಯದು ಮತ್ತು ನಿಮ್ಮ ಗಂಡದಿರಿಗೂ ಒಳ್ಳೆಯದು.