ಬಾಳೆಗಿಡವನ್ನು ಮನೆಯಲ್ಲಿ ಬೆಳೆಸಬಹುದೇ!ವಾಸ್ತು ರಹಸ್ಯವೇನು!

ಬಾಳೆಗಿಡದಲ್ಲಿ ಸಾಕ್ಷಾತ್ ವಿಷ್ಣು ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶುಭ ಸಮಾರಂಭಗಳಲ್ಲಿ ಬಾಳೆಗಿಡವನ್ನು ಬಳಸಲಾಗುತ್ತದೆ. ಮನೆ ಬಳಿ ಬಾಳೆ ಗಿಡವನ್ನು ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಬಾಳೆ ಮರವನ್ನು ತಪ್ಪಾದ ಸ್ಥಳದಲ್ಲಿ ನೆಟ್ಟರೆ ಅದು ಅನೇಕ ಅನರ್ಥಗಳಿಗೆ ಕಾರಣವಾಗಬಹುದು.

ಮನೆ ಸುತ್ತ ಮುತ್ತ ಸ್ವಲ್ಪ ಜಾಗ ದೊರೆತರೆ ಸಾಕು ನಮಗಿಷ್ಟವಾದ ಗಿಡಗಳನ್ನು ನೆಟ್ಟು, ಪ್ರೀತಿಯಿಂದ ಪೋಷಿಸುತ್ತೇವೆ. ಆದರೆ ದೇವರ ಸ್ವರೂಪವಾದ ಕೆಲವೊಂದು ಗಿಡಗಳನ್ನು ನೆಡಲು ನಿರ್ದಿಷ್ಟ ಸ್ಥಾನ ಇದೆ. ಎಲ್ಲೆಂದರಲ್ಲಿ ಆ ಗಿಡಗಳನ್ನು ನೆಡುವುದರಿಂದ ಮನೆಗೆ ವಿವಿಧ ರೀತಿಯಲ್ಲಿ ಸಮಸ್ಯೆ ಉಂಟಾಗಬಹುದು.

 ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದರ ಬಗ್ಗೆ ವಾಸ್ತು ಸಲಹೆ ಇದೆ. ಸೂಕ್ತ ದಿಕ್ಕಿನಲ್ಲಿ ಬಾಳೆಗಿಡ ನೆಟ್ಟರೆ ಮನೆಯಲ್ಲಿ ಸುಖ, ಸಂತಸ, ಸಮೃದ್ಧಿ ನೆಲೆಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಬಾಳೆ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿ ಅಂದರೆ ಅಗ್ನಿ ಮೂಲೆಯಲ್ಲಿ ನೆಡಬಾರದು. ಅಗ್ನಿ ಮೂಲೆಯಲ್ಲಿ ಬಾಳೆ ಮರವನ್ನು ನೆಡುವುದು ಅಶುಭ. ಪ್ರಾಣಿಗಳು ತಿನ್ನಬಾರದು ಎಂಬ ಕಾರಣಕ್ಕೆ ಕೆಲವರು ಬಾಳೆ ಮರದ ಸುತ್ತ ಮುಳ್ಳಿನ ಬೇಲಿ ಹಾಕುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು, ಸಾಕ್ಷಾತ್ ವಿಷ್ಣುವನ್ನು ಮುಳ್ಳಿನಿಂದ ಚುಚ್ಚಿದಂತೆ ಆಗುತ್ತದೆ. ವಾಸ್ತು ಪ್ರಕಾರ ಹೀಗೆ ಮಾಡುವುದರಿಂದ ಮನೆಯಲ್ಲಿ ಜಗಳ ಉಂಟಾಗಿ ಸಂಬಂಧ ಕೆಡುತ್ತದೆ. ಬಾಳೆಮರದ ಬಳಿ, ಕಳ್ಳಿ ಅಥವಾ ಇತರ ಗಿಡಗಳನ್ನು ನೆಡುವುದು ಒಳ್ಳೆಯದಲ್ಲ. ಆದರೆ ಬಾಳೆಮರದ ಬಳಿ ತುಳಸಿ ಗಿಡ ಇದ್ದರೆ ಒಳ್ಳೆಯದು. ಅದು ನೀವು ಪೂಜಿಸುವ ತುಳಸಿ ಕಟ್ಟೆ ಆಗಿರಬೇಕು ಎಂದೇನಿಲ್ಲ. ಮನೆಯ ಮುಖ್ಯದ್ವಾರದ ಮುಂದೆ ಬಾಳೆಗಿಡವನ್ನು ನೆಡುವುದು ಸೂಕ್ತವಲ್ಲ. ಮುಖ್ಯ ದ್ವಾರಕ್ಕೆ ಎಲೆಗಳು ಬಾಗುವಂತೆ ಬಾಳೆಗಿಡವನ್ನು ನೆಡುವುದು ಅಶುಭ. ಮುಖ್ಯದ್ವಾರದಲ್ಲಿ ನೆಟ್ಟ ಬಾಳೆ ಮರವು ಸಮೃದ್ಧಿಗೆ ಅಡ್ಡಿಯಾಗುತ್ತದೆ.

ಸಾಮಾನ್ಯವಾಗಿ ಪೂಜೆಗೆ ಈಶಾನ್ಯ ದಿಕ್ಕು ಶುಭ ಎನ್ನಲಾಗಿದೆ. ಆದ್ದರಿಂದ ಬಾಳೆಮರವನ್ನು ಕೂಡಾ ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು ಎನ್ನುತ್ತಾರೆ ವಾಸ್ತುತಜ್ಞರು. ಅಥವಾ ಪೂರ್ವ ದಿಕ್ಕಿನಲ್ಲಿ ಕೂಡಾ ನೆಡಬಹುದು. ಆದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಬಾಳೆಗಿಡ ನೆಡಬಾರದು. ಮನೆಯ ಹಿಂಭಾಗ ಅಕ್ಕ ಪಕ್ಕ ಗಿಡ ನೆಡಬೇಕು. ಮುಂಭಾಗದಲ್ಲಿ ಬೇಡ. ಹಾಗೆ ಬಾಳೆ ಗಿಡಕ್ಕೆ ಕೊಳಕು ನೀರು ಹಾಕದೆ, ಶುದ್ಧವಾದ ನೀರನ್ನು ಹಾಕಿ ಬೆಳೆಸಿದರೆ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ.

Related Post

Leave a Comment