ಜೇನುತುಪ್ಪ ಬಳಸುವ ವಿಷಯದಲ್ಲಿ ಎಂದು ಈ ತಪ್ಪು ಮಾಡಬೇಡಿ!

ಮಧುಮೇಹಿಗಳಿಗೆ ಜೇನುತುಪ್ಪ ತುಂಬಾ ಹಾನಿಕಾರಕ. ಆದರೆ ಅನೇಕರು ಸಕ್ಕರೆ ಬದಲು ಜೇನನ್ನು ಬಳಸುತ್ತಾರೆ. ಆದರೆ ಜೇನುತುಪ್ಪವನ್ನು ಅಧಿಕವಾಗಿ ಸೇವಿಸುವುದರಿಂದ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ.

ಜೇನು ತುಪ್ಪವನ್ನು ಬಿಸಿ ಮಾಡಬಾರದು, ಮಾಡಿದರೆ ಅದು ವಿಷಯುಕ್ತವಾಗುತ್ತದೆ ಎಂಬುವುದು ಅತ್ಯಂತ ದೊಡ್ಡ ತಪ್ಪು ಕಲ್ಪನೆ. ಜೇನು ತುಪ್ಪವನ್ನು ಬಿಸಿ ಮಾಡಿದಾಗ ಅದರಿಂದ ವಿಷ ಹೊರಬರುವುದಿಲ್ಲ, ಏಕೆಂದರೆ ಅವು ಮೊದಲಿನಿಂದಲೂ ಜೇನಿನಲ್ಲಿ ಇರುವುದೇ ಇಲ್ಲ. ಆದರೆ ಕೆಲವು ಪೌಷ್ಟಿಕ ಅಂಶಗಳು ಕಳೆದುಹೋಗಬಹುದು, ಹಾಗಾಗಿ ಜೇನುತುಪ್ಪ ಹೆಚ್ಚು ಬಿಸಿ ಆಗದಂತೆ ಗಮನ ಹರಿಸಿ.

ಜೇನು ತುಪ್ಪಕ್ಕೆ ಬೇರೆ ಬೇರೆ ಬಣ್ಣ ಮತ್ತು ರುಚಿ ಇರುತ್ತದೆ. ಎಲ್ಲಾ ರೀತಿಯ ಜೇನುತುಪ್ಪದ ರುಚಿ ಮತ್ತು ಬಣ್ಣ ಒಂದೇ ರೀತಿ ಇರುತ್ತದೆ ಎಂಬುವುದು ಸುಳ್ಳು. ಜೇನು ಎಲ್ಲಿಂದ ಬರುತ್ತದೆ? .ಹೂವಿನಿಂದ. ಜೇನು ತುಪ್ಪದ ಬಣ್ಣ ಮತ್ತು ಪರಿಮಳ, ಜೇನು ಹುಳಗಳು ಯಾವ ರೀತಿಯ ಹೂವಿನಿಂದ ಮಧುವನ್ನು ಹೀರಿಕೊಂಡಿವೆ ಎಂಬುದನ್ನು ಅವಲಂಬಿಸಿರುತ್ತದೆ. ಎಲ್ಲಾ ಹೂಗಳು ಒಂದೇ ರೀತಿ ಇರುತ್ತವೆಯೇ? ಹಾಗೆಯೇ ಜೇನು ತುಪ್ಪದ ಬಣ್ಣ, ರುಚಿ ಮತ್ತು ಪರಿಮಳ ಕೂಡ, ಅದರ ಮೂಲವನ್ನು ಅವಲಂಬಿಸಿರುತ್ತದೆ.

ಸರಿಯಾಗಿ ಸಂರಕ್ಷಿಸಿ ಇಡದಿದ್ದರೆ ಜೇನು ತುಪ್ಪ ಅದರ ಪರಿಮಳ ಮತ್ತು ಸ್ವಾದ ಕಳೆದುಕೊಳ್ಳಬಹುದು. ಅದು ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ, ಆದರೆ ಮೊದಲಿನ ಸ್ವಾದ ಮತ್ತು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ಜೇನುತುಪ್ಪವನ್ನು ತಾಜಾವಾಗಿದ್ದಾಗಲೇ ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಕಾಲ ಕಳೆದಂತೆ ಅದರ ಬಣ್ಣವು ಕೂಡ ಗಾಢವಾಗುತ್ತದೆ.

ಇಲ್ಲಿಯವರೆಗೆ ನೀವು ಜೇನುತುಪ್ಪದ ಸೇವನೆಯಿಂದ ಸಿಗುವ ಪ್ರಯೋಜನಗಳ ಬಗ್ಗೆ ಕೇಳಿರಬಹುದು. ಆದರೆ ಹೊಸ ಸಂಶೋಧನೆಯು, ಅತಿಯಾದರೆ ಅಮೃತವು ವಿಷ ಎಂಬಂತೆ ಜೇನುತುಪ್ಪವು ಸಹ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಬಹಿರಂಗಪಡಿಸಿದೆ.

ಹರಳುಗಟ್ಟುವುದು ಜೇನುತುಪ್ಪವನ್ನು ಸಂರಕ್ಷಿಸುವ ನಿಸರ್ಗದ ಒಂದು ವಿಧಾನ. ಆದರೆ ಹರಳುಗಟ್ಟುವಿಕೆಯ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಜೇನುತುಪ್ಪ ಹರಳುಗಟ್ಟಿದರೆ ಅದು ಹಾಳಾಯಿತು ಎಂದು ಅರ್ಥವಲ್ಲ. ಬಿಸಿ ನೀರಿನಲ್ಲಿ ಅದರ ಬಾಟಲಿಯನ್ನು ನಿಲ್ಲಿಸಿಟ್ಟು, ಅದನ್ನು ನಿಧಾನವಾಗಿ ಬಿಸಿ ಮಾಡಿದರೆ ಮತ್ತು ನಿಧಾನವಾಗಿ ಕಲಕಿದರೆ ಅದು ಮೊದಲಿನ ರೂಪಕ್ಕೆ ಮರಳುತ್ತದೆ. ಹರಳುಗಟ್ಟಿದ ನಂತರವೂ ಜೇನುತುಪ್ಪದ ರುಚಿ ಮತ್ತು ಅದರಲ್ಲಿನ ಪೌಷ್ಟಿಕಾಂಶಗಳು ಹಾಗೆಯೇ ಇರುತ್ತವೆ.

Related Post

Leave a Comment