ನವರಾತ್ರಿ ದಿನ 9 ದಿನಗಳು ಯಾವ ರೀತಿ ಹೋಸ್ತಿಲ ಪೂಜೆ ಮಾಡುತ್ತಾರೆ ಎನ್ನುವುದನ್ನು ತಿಳಿಸಿಕೊಡುತ್ತೇನೇ. ಮೊದಲು ಹೋಸ್ತಿಲಿಗೆ ಅರಿಶಿನ ನೀರು ಮಿಕ್ಸ್ ಮಾಡಿ ಹಚ್ಚಬೇಕು. ದಿನನಿತ್ಯ ಹಚ್ಚಬೇಕು. ಇದನ್ನು ಸಂಜೆ ಮಾಡಿದರೆ ತುಂಬಾ ಒಳ್ಳೆಯದು ಹಾಗು ಪ್ರತಿದಿನ ಸಂಜೆ ಲಲಿತಾ ಸಹಸ್ರನಾಮ, ಶ್ರೀಸೂಕ್ತವನ್ನು ಓದುವುದನ್ನು ಮರೆಯಬೇಡಿ. ಮದುವೆ ಆಗದೆ ಇರುವ ಹೆಣ್ಣು ಮಕ್ಕಳು ಆದಷ್ಟು ಇದನ್ನು ಹೇಳಿಕೊಂಡರೆ ಒಳ್ಳೆಯದು.
ಹೊಸ್ತಿಲಿಗೆ ಅರಿಶಿನ ಹಚ್ಚಿದ ನಂತರ ಪುಟ್ಟದಾಗಿ 24 ಲೈನ್ ರಂಗೋಲಿ ಹಾಕಬೇಕು. ಮಧ್ಯದಲ್ಲಿ ಸ್ವಸ್ತಿಕ್ ಹಾಗು ಕುಬೇರ ಯಂತ್ರವನ್ನು ಹಾಕಬೇಕು. ಮನೆಯಲ್ಲಿ ಎಷ್ಟು ಹೊಸ್ತಿಲು ಇದೆಯೋ ಅಷ್ಟಕ್ಕೂ ಪೂಜೆಯನ್ನು ಸಂಜೆ ಮಾಡಬೇಕಾಗುತ್ತದೆ. ಹೊಸ್ತಿಲು ಕೆಳಗೆ ಒಂದು ರಂಗೋಲಿ ಹಾಕಿ ಚೌಕಟ್ಟು ಹಾಕಬೇಕು. ದಿನನಿತ್ಯ ಎರಡು ದೀಪ ಹಚ್ಚಿ ಪೂಜೆಯನ್ನು ಮಾಡಬೇಕು. ಜೀವನದಲ್ಲಿ ಎಲ್ಲದು ಬೇಕು ಆಯಸ್ಸು ಅರೋಗ್ಯ ಸುಖ ಶಾಂತಿ ನೆಮ್ಮದಿ ಎಲ್ಲಾನು ಬೇಕು. ಈ ರೀತಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಬೆಳಗ್ಗೆ ಸ್ನಾನ ಮಾಡಿ ಮತ್ತು ಸಂಜೆ ಸಮಯದಲ್ಲಿ ಕೂಡ ಸ್ನಾನವನ್ನು ಮಾಡಬೇಕು. ಇದೆ ರೀತಿ 9 ದಿನ ಪೂಜೆ ಮಾಡಿ ದೀಪ ದೂಪಾ ಬೆಳಗಬೇಕು.