ಈ ಒಂದು ಸೀಕ್ರೆಟ್ ವಸ್ತು ಹಾಕಿದರೆ ತಿಂಗಳು ಆದರೂ ಹೂವು ಫ್ರೆಶ್ ಆಗಿ ಇರುತ್ತದೆ.ಹೀಗೆ ಇಟ್ಟರೆ ಒಂದು ತಿಂಗಳು ಆದರೂ ಹೂವು ಹಾಳಾಗುವುದಿಲ್ಲ ಮತ್ತು ಫ್ರೆಶ್ ಆಗಿ ಇರುತ್ತದೆ.ಹೂವು ತೆಗೆದುಕೊಂಡು ಬಂದ ತಕ್ಷಣ ಒಂದು ಬಟ್ಟೆಯ ಮೇಲೆ ಹರಡಿ ಅದರಲ್ಲಿ ಇರುವ ತೇವಂಶವನ್ನು ತೆಗೆಯಿರಿ. ನಂತರ ಒಂದು ಬಾಕ್ಸ್ ತೆಗೆದುಕೊಂಡು ಅದರ ಒಳಗೆ ಪೇಪರ್ ಅನ್ನು ಹಾಕಿ. ನಂತರ ಹೂವು ಹಾಕಿ ಮತ್ತು ಅಕ್ಕಿಯನ್ನು ಹಾಕಿ. ಅಕ್ಕಿ ಹೂವಿನ ಮೇಲೆ ಇರುವ ತೇವಂಶವನ್ನು ಹಿರಿಕೊಳ್ಳುತ್ತದೆ. ಇದರಿಂದ ಹೂವು ತುಂಬಾ ದಿನದವರೆಗೆ ಫ್ರೆಶ್ ಆಗಿ ಇರುತ್ತದೆ.ಇನ್ನು ಡಬ್ಬವನ್ನು ಕ್ಲೋಸ್ ಮಾಡಿ ಫ್ರಿಜ್ ನಲ್ಲಿ ಇಟ್ಟರೆ ಒಂದು ತಿಂಗಳವರೆಗೆ ಹೂವು ಹಾಳಾಗುವುದಿಲ್ಲ ಮತ್ತು ಫ್ರೆಶ್ ಆಗಿ ಇರುತ್ತದೆ.
ಇನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸ್ಟೋರ್ ಮಾಡುವುದಾದರೆ ಹೂವಿನಲ್ಲಿ ನೀರು ಇರಬಾರದು ಮತ್ತು ಅಕ್ಕಿಯನ್ನು ಹಾಕಬೇಕು. ನಂತರ ಫ್ರಿಜ್ ನಲ್ಲಿ ಇಡಬೇಕು. ಈ ರೀತಿ ಇಡುವುದರಿಂದ ತುಂಬಾ ದಿನದವರೆಗೂ ಹೂವು ಇಟ್ಟರು ಸಹ ಹಾಳಾಗುವುದಿಲ್ಲ.ಫ್ರಿಜ್ ಇಲ್ಲಾದವರು ಒಂದು ಕಾಟನ್ ಬಟ್ಟೆ ತೆಗೆದುಕೊಂಡು ನೀರಿನಿಂದ ವದ್ದೆ ಮಾಡಿ ಹೂವನ್ನು ಹಾಕಿ ಇಡಬೇಕು.ನಂತರ ಒಂದು ಪಾತ್ರೆಗೆ ನೀರು ಹಾಕಿ. 3 ದಿನಕ್ಕೆ ಒಮ್ಮೆ ನೀರು ಮತ್ತು ಬಟ್ಟೆ ಬದಲಾಯಿಸಿದರೆ ಸಾಕು ತಿಂಗಳು ಆದರೂ ಹೂವು ಫ್ರೆಶ್ ಆಗಿರುತ್ತದೇ ಮತ್ತು ಹಾಳಾಗುವುದಿಲ್ಲ. ಈ ರೀತಿ ಸ್ಟೋರ್ ಮಾಡಿದರೇ ಹೂವು ಬಾಡಿ ಹೋಗುವುದಿಲ್ಲ.