ಇವಾಗಿನ ದಿನಗಳಲ್ಲಿ ಬಾಳೆ ಎಲೆಯ ಊಟ ಎಂದು ತುಂಬಾ ವಿಶೇಷವಾಗಿ ಮಾಡುತ್ತಾರೆ. ಅದರೆ ಇದು ಹಿಂದಿನ ಕಾಲದಿಂದ ನಡೆದುಕೊಂಡು ಬಂದಿದೆ.ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ಬಾಳೆ ಎಲೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅತ್ಯಧಿಕವಾಗಿದೆ–ಗ್ರೀನ್ ಟೀಯಲ್ಲಿರುವ ಪಾಲಿಫೆನಾಲ್ಸ್ ಅಂಶ ಬಾಳೆಲೆಯಲ್ಲಿದೆ. ಇದು ಬೇಗನೆ ಮುಪ್ಪಾಗುವುದನ್ನು, ಜೀವನಶೈಲಿ ಸಂಬಂಧಿ ಕಾಯಿಲೆಗಳನ್ನು ಹಾಗೂ ಕೆಲ ಬಗೆಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಬಾಳೆ ಎಲೆ ರಾಸಾಯನಿಕ ಮುಕ್ತ–ಯಾವುದೇ ವಾಶಿಂಗ್ ಪೌಡರ್, ಸೋಪು ಹಾಕಿ ಇದನ್ನು ತೊಳೆಯಬೇಕಾಗಿಲ್ಲ. ಸ್ವಲ್ಪ ನೀರು ಹಾಕಿ ತೊಳೆದರೆ ಅಷ್ಟೇ ಸಾಕು. ಯಾವುದೇ ರಾಸಾಯನಿಕವಿಲ್ಲದಿರುವುದರಿಂದ ಬಾಳೆ ಎಲೆ ಊಟ ಅತ್ಯಂತ ಶುಚಿ ಆಹಾರವಾಗಿದೆ.
ಆಹಾರದ ರುಚಿ ಹೆಚ್ಚಿಸುವ ಬಾಳೆ ಎಲೆ–ಒಂದೇ ಆಹಾರವನ್ನು ತಟ್ಟೆಗೆ ಹಾಗೂ ಬಾಳೆ ಎಲೆಗೆ ಹಾಕಿ ತಿಂದರೆ ರುಚಿಯಲ್ಲಿ ವ್ಯತ್ಯಾಸ ಅನಿಸುವುದು. ಬಾಳೆ ಎಲೆ ಆಹಾರದ ರುಚಿ ಹೆಚ್ಚಿಸುವುದು.
ಪರಿಸರಕ್ಕೆ ಯಾವುದೇ ಹಾನಿಯಿಲ್ಲ–ಬಾಳೆ ಎಲೆಯಲ್ಲಿ ಊಟ ಮಾಡಿ ಹಾಗೇ ಎಸೆದರೂ ಅದರಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಬಾಳೆ ಎಲೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಬಾಳೆ ಎಲೆ ಊಟ ಶುಚಿ, ರುಚಿ ಹಾಗೂ ಇದನ್ನು ಬಿಸಾಡಿದರೆ ಗೊಬ್ಬರವಾಗುವುದರಿಂದ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ.
ನೀರು, ಶ್ರಮ ಉಳಿಸುತ್ತದೆ–ಬಾಳೆ ಎಲೆಯನ್ನು ತೊಳೆಯಲು ಹೆಚ್ಚು ನೀರು ಬೇಕಾಗಿಲ್ಲ, ತಿಂದಾದ ಬಳಿಕ ಬಿಸಾಡಿದರೆ ಸಾಕು. ಆದ್ದರಿಂದ ನೀರು ಮತ್ತು ಶ್ರಮ ಉಳಿಸುತ್ತದೆ.