ದೀಪಾವಳಿ ಹಬ್ಬ ಬರುವುದಕ್ಕೂ ಮುಂಚೆ ನವಂಬರ್ 10ಕ್ಕೆ ಧನತ್ರಯೋದೇಶಿ ಹಬ್ಬ ಇತ್ತು .ಧನತ್ರಯೋದೇಶಿಯಾ ದಿನ ಬಹಳಷ್ಟು ವಿಶೇಷವಾದ ದಿನ. ಈ ಹಬ್ಬದಲ್ಲಿ ಆಭರಣಗಳನ್ನು ಖರೀದಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯದಾಗುತ್ತದೆ ಮತ್ತು ಲಕ್ಷ್ಮಿ ನಿಮ್ಮ ಮನೆಗೆ ಬಂದು ನೆಲೆಸುತ್ತಾರೆ. ಈ ಸಮಯದಲ್ಲಿ ಕಬ್ಬಿಣ ಸ್ಟೀಲ್ ಗಳನ್ನು ಖರೀದಿ ಮಾಡಬಾರದು. ಯಾಕೆಂದರೆ ರಾಹು ಗೆ ಸಂಬಂಧಪಟ್ಟ ಮೆಟಲ್ ಆಗಿರುವುದರಿಂದ ಈ ವಸ್ತುಗಳನ್ನು ಖರೀದಿ ಮಾಡುವುದರಿಂದ ಕೆಟ್ಟದ್ದು ಆಗುವ ಸಾಧ್ಯತೆ ಇದೆ.
ಇನ್ನು ಹಬ್ಬದ ದಿನ ಕಪ್ಪು ಬಟ್ಟೆಗಳನ್ನು ಧರಿಸಬಾರದು. ಇದರಿಂದ ಸಾಕಷ್ಟು ಕೆಟ್ಟ ಪ್ರಭಾವ ಬೀರುತ್ತದೆ.ಇನ್ನು ಕಪ್ಪು ಏಳ್ಳು ಕೂಡ ಖರೀದಿ ಮಾಡಬಾರದು. ಇನ್ನು ಧನತ್ರಯೋದೇಶಿಯಾ ದಿನ ಪೊರಕೆ ತಂದರೆ ತುಂಬಾ ಒಳ್ಳೆಯದು. ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ.ಇನ್ನು ಕೋತುಂಬರಿ ಬೀಜವನ್ನು ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು.
ಇನ್ನು ಧನತ್ರಯೋದೇಶಿಯಾ ದಿನ ಯಾರಿಗೂ ಸಾಲವನ್ನು ಕೊಡಬಾರದು ಮತ್ತು ತೆಗೆದುಕೊಳ್ಳಬಾರದು.ಇದರಿಂದ ನಿಮ್ಮ ಮನೆಯಲ್ಲಿ ಕೆಟ್ಟ ಪ್ರಭಾವ ಬೀರುತ್ತದೆ.ಇನ್ನು ಮನೆಯಲ್ಲಿ ಇರುವ ಅಕ್ಕಿಯನ್ನು ಇನ್ನೊಬ್ಬರಿಗೆ ಕೊಡಬಾರದು.ಇನ್ನು ಧನತ್ರಯೋದೇಶಿಯಾ ದಿನ ಕನ್ನಡಿ, ಚಾಕು, ಚೂರಿಗಳನ್ನು ಖರೀದಿ ಮಾಡಬಾರದು. ಇದರಿಂದ ಮನೆಯಲ್ಲಿ ಸಾಕಷ್ಟು ಕಷ್ಟಗಳನ್ನು ನೋಡಬಹುದು ಆದ್ದರಿಂದ ಇಂತಹ ವಸ್ತುಗಳನ್ನು ಖರೀದಿ ಮಾಡಬೇಡಿ.
ಇನ್ನು ಧನತ್ರಯೋದೇಶಿಯಾ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಮಾಡಿದ ಅಡುಗೆಯನ್ನು ತಿನ್ನಬಾರದು.ಇದರಲ್ಲಿ ರಾಹು ಕೇತುವಿನ ಪ್ರೆಸೆಂನ್ಸ್ ಇರುತ್ತದೆ. ಹಾಗಾಗಿ ಇದನ್ನು ಮಾಡದೇ ಇದ್ದಾರೆ ಒಳ್ಳೆಯದಾಗುತ್ತದೆ. ಇನ್ನು ಈ ದಿನದಲ್ಲಿ ಮಾಂಸಾಹಾರ, ಮದ್ಯಸೇವನೆ, ಸ್ಮೋಕಿಂಗ್ ಕೊಡ ಮಾಡಬಾರದು. ಇನ್ನು ಈ ಸಮಯದಲ್ಲಿ ಮನೆಗೆ ನವಿಲುಗರಿಯನ್ನು ತೆಗೆದುಕೊಂಡು ಬಂದರೆ ಸಾಕಷ್ಟು ಒಳ್ಳೆಯ ಲಾಭವಾಗುತ್ತದೆ. ಇನ್ನು ನೀವು ಕೈಲಾದಷ್ಟು ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು. ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.