ತುಳಸಿ ವಿವಾಹ ವಿಶೇಷ :ತುಳಸಿ ಪೂಜೆಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಸಿಕೊಡುತ್ತೇನೆ. ಯಾವ ದಿನದಂದು ತುಳಸಿ ಗಿಡವನ್ನು ಕೀಳಬಾರದು ಮತ್ತು ಈ ಬಾರಿ ಬಂದ ತುಳಸಿ ಹಬ್ಬ ಶುಕ್ರವಾರದ ದಿನ ಮಾಡಬೇಕಾಗುತ್ತದೆ. ಯಾವ ರೀತಿ ಅಲಂಕಾರ ಮಾಡಬೇಕು? ಕೆಲವರು ಕೃಷ್ಣನ ವಿಗ್ರಹ ಇಟ್ಟು ಪೂಜೆ ಮಾಡಬಹುದಾ ಎಂದು ಕೇಳುತ್ತಾರೆ?
ಮೊದಲು ಮಣೆ ಇಡುವ ಸ್ಟ್ಯಾಂಡ್ ಯಿಂದ ಸುಲಭವಾಗಿ ಅಲಂಕಾರವನ್ನು ಮಾಡಬಹುದು.ಇದನ್ನು ಉಪಯೋಗಿಸಿಕೊಂಡು ದೇವರಿಗೆ ಸೀರೆಯನ್ನು ಊಡಿಸಬಹುದು.ಈ ಬಾರಿ ತುಳಸಿ ಹಬ್ಬ ಕಾರ್ತಿಕ ಮಾಸ ಶುಕ್ಲ ಪಕ್ಷ ದ್ವಾದಶಿಯಂದು ತುಳಸಿ ವಿವಾಹವನ್ನು ಆಚರಣೆ ಮಾಡುತ್ತೇವೆ. 24ನೇ ತಾರೀಕು ಶುಕ್ರವಾರ ಶುರು ಆಗುತ್ತಾದೆ. ಗುರುವಾರ ಸಂಜೆ 6:09 ನಿಮಿಷಕ್ಕೆ ಶುರುವಾಗಿ 24ನೇ ತಾರೀಕು ಸಂಜೆ 7:07 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಶುಕ್ರವಾರದ ಬೆಳಗ್ಗೆ ತುಳಸಿ ವಿವಾಹ ಪೂಜೆಯನ್ನು ಮಾಡಬಹುದು ಅಥವಾ ಸೂರ್ಯಾಸ್ತದ ನಂತರ ಪೂಜೆಯನ್ನು ಮಾಡಬಹುದು.
ಶನಿವಾರ ಪೂಜೆ ಮಾಡಿ ಶನಿವಾರ ದಿನ ವಿಸರ್ಜನೆ ಮಾಡುವುದು ಸರಿಯಲ್ಲ. ತುಳಸಿ ವಿವಾಹ ಪೂಜೆಯನ್ನು ತುಂಬ ಸರಳವಾಗಿ ಮಾಡಿದ್ದರೆ ಏನು ವಿಸರ್ಜನೆ ಮಾಡುವುದಕ್ಕೆ ಹೋಗಬೇಡಿ. ತುಳಸಿ ವಿವಾಹ ಪೂಜೆಯನ್ನು ಮಾಡಿದ್ದಾರೆ ಭಾನುವಾರದ ದಿನ ವಿಸರ್ಜನೆ ಮಾಡಬಹುದು. ಇನ್ನು ಕೃಷ್ಣನ ವಿಗ್ರಹವನ್ನು ಇಡಬಹುದು ಆದರೆ ಬಾಲಕೃಷ್ಣನ ವಿಗ್ರಹವನ್ನು ಇಟ್ಟು ಪೂಜೆ ಮಾಡುವುದಕ್ಕೆ ಬರುವುದಿಲ್ಲ.
ಇನ್ನು ಆದಷ್ಟು ತುಳಸಿ ಪೊಟ್ ಅನ್ನು ಮನೆಯ ಒಳಗೆ ತೆಗೆದುಕೊಂಡು ಸಾಲಿಗ್ರಾಮವನ್ನು ಇಟ್ಟು ಪೂಜೆಯನ್ನು ಮಾಡಬಹುದು. ಇನ್ನು ತುಳಸಿ ವಿವಾಹ ಪೂಜೆಯನ್ನು ಈಶಾನ್ಯ ಮತ್ತು ಉತ್ತರ ದಿಕ್ಕಿನಲ್ಲಿ ತುಳಸಿ ಪೊಟ್ ಇಟ್ಟು ಪೂಜೆ ಮಾಡಬಹುದು. ಪ್ರತಿದಿನವೂ ಕೂಡ ಈಶಾನ್ಯ ಮತ್ತು ಉತ್ತರ ದಿಕ್ಕಿನ ಕಡೆ ತುಳಸಿ ಪೊಟ್ ಇಟ್ಟು ಬೆಳೆಸಬಹುದು. ಆದಷ್ಟು ಮನೆಯ ಮುಖ್ಯದ್ವಾರ ತೆರೆದಾಗ ತುಳಸಿಗಿಡ ಕಾಣುವ ರೀತಿ ತುಳಸಿ ಗಿಡವನ್ನು ಇಡಬೇಕು.ಆದಷ್ಟು ಒಂದು ಕಟ್ಟೆ ಮೇಲೆ ತುಳಸಿ ಗಿಡ ಇಟ್ಟು ಬೆಳೆಸಬೇಕು.
ತುಳಸಿ ಗಿಡ ಒಣಗಲು ಈ ಕಾರಣ
ಹಿಂದೂ ಧರ್ಮದ ಪ್ರಕಾರ, ತುಳಸಿಯನ್ನು ಹುಟ್ಟಿನಿಂದ ಸಾವಿನವರೆಗೆ ಒಂದು ಸಸ್ಯವೆಂದು ಪರಿಗಣಿಸಲಾಗುತ್ತದೆ. ಸೌಮ್ಯವಾಗಿ ಕಾಣುವ ಈ ತುಳಸಿ ಸಸ್ಯವು ನಮ್ಮ ಮನೆಯ ಎಲ್ಲಾ ದೋಷಗಳನ್ನು ತೆಗೆದುಹಾಕುತ್ತದೆ. ನಿಮ್ಮ ಮನೆಯಲ್ಲಿ ಆರೋಗ್ಯ, ಸಮೃದ್ಧಿ ಎರಡೂ ತುಳಸಿ ಗಿಡದ ಸ್ಥಿತಿಯ ಮೇಲೆ ನಿಂತಿರುತ್ತದೆ. ಒಂದು ವೇಳೆ ಅವು ಸರಿಯಾಗಿಲ್ಲ ಎಂದರೆ ತುಳಸಿ ಗಿಡ ಒಣಗುತ್ತದೆ.
ಒಣಗಿರುವ ತುಳಸಿ ಗಿಡವನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಹಾಗೆ ಒಣಗಿದ ತುಳಸಿ ಗಿಡವನ್ನು ಬಾವಿ ಅಥವಾ ಪವಿತ್ರ ಸ್ಥಳದಲ್ಲಿ ಹಾಕಬೇಕು. ಮತ್ತೆ ನಿಮ್ಮ ಮನೆಯ ತುಳಸಿ ಕಟ್ಟೆಯಲ್ಲಿ ಹೊಸ ಸಸಿಯನ್ನು ನೆಡಬೇಕು.
ಜ್ಯೋತಿಷಿಗಳ ಪ್ರಕಾರ ಬುಧನ ವಕ್ರ ದೃಷ್ಟಿಯ ಕಾರಣದಿಂದಾಗಿ ತುಳಸಿ ಗಿಡ ಒಣಗುತ್ತದೆ. ಏಕೆಂದರೆ ಬುಧ ಗ್ರಹವು ಹಸಿರು ಬಣ್ಣವನ್ನು ಸೂಚಿಸುತ್ತದೆ. ಮರಗಳು ಮತ್ತು ಸಸ್ಯಗಳು ಹಸಿರನ್ನು ಪ್ರತಿನಿಧಿಸುತ್ತವೆ. ಬುಧವು ಇತರ ಗ್ರಹಗಳ ಶುಭ ಮತ್ತು ಅಶುಭ ಪರಿಣಾಮಗಳಿಗೆ ಸ್ಥಳೀಯರನ್ನು ತಲುಪಿಸುವ ಗ್ರಹವಾಗಿದೆ. ಬುಧನ ಪರಿಣಾಮದಿಂದಾಗಿ ತುಳಸಿ ಗಿಡದಲ್ಲಿ ಹೂ ಬಿಡುತ್ತದೆ. ವಾಸ್ತು ವಿಜ್ಞಾನದ ಪ್ರಕಾರ ತುಳಸಿಯನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇದು ಯಾವಾಗಲೂ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ.