ಅಡುಗೆ ಮನೆಯಲ್ಲಿ ಕ್ಲೀನಿಂಗ್ ಮಾಡುವಾಗ ಮತ್ತು ಪಾತ್ರೆ ತೊಳೆಯುವಾಗ, ಸಿಂಕ್ ಅನ್ನು ಕ್ಲೀನ್ ಮಾಡುವಾಗ ಮೈ ಮೇಲೆ ಹಾಗೆ ಕಿಚನ್ ಕೌಂಟರ್ ಟಾಪ್ ಮೇಲೆ ನೀರು ಬೀಳುತ್ತದೆ. ಇದರಿಂದ ನೀವು ಕೂಡ ವದ್ದೆ ಆಗುತ್ತೀರಿ ಹಾಗು ಕಿಚನ್ ಕೂಡ ಗಲೀಜು ಆಗುತ್ತದೆ. ಅದಕ್ಕಾಗಿ ಮಾರ್ಕೆಟ್ ಗಳಲ್ಲಿ ವಾಟರ್ ಫಾಲ್ಸ್ ಸಿಗುತ್ತದೆ. ಅದರೆ ಇದು ತುಂಬಾನೇ ದುಬಾರಿ. ಈ ರೀತಿ ಇದ್ದರೆ ಇದರಿಂದ ಆರಾಮವಾಗಿ ಪಾತ್ರೆಗಳನ್ನು ತೊಳೆಯಬಹುದು. ಒಂದು ವೇಳೆ ಇದು ಇಲ್ಲವಾದರೆ ಬಲೂನ್ ಬಳಸಿಕೊಂಡು ನಿಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು.
ಒಂದು ಬಲೂನ್ ತೆಗೆದುಕೊಂಡು ಟಾಪ್ ಮೇಲೆ ಹಾಕಿ. ಈ ರೀತಿ ಬಲೂನ್ ಅನ್ನು ಒಂದು ತುದಿಯಲ್ಲಿ ಕಟ್ ಮಾಡಿದರೆ ಸಾಕು. ಇದು ನಿಟ್ ಆಗಿ ಎಲ್ಲಾ ಕಡೆ ರೋಟೆಟ್ ಆಗುತ್ತದೆ. ಇದರಿಂದ ಪಾತ್ರೆಯನ್ನು ಸುಲಭವಾಗಿ ತೊಳೆದುಕೊಳ್ಳಬಹುದು ಹಾಗು ಸಿಂಕ್ ಅನ್ನು ಕ್ಲೀನ್ ಮಾಡುವುದಕ್ಕೂ ಕೂಡ ಇದು ತುಂಬಾನೇ ಸುಲಭವಾಗಿ ಸಹಾಯ ಮಾಡುತ್ತದೆ. ಇದನ್ನು ಬಳಸಿದರೆ ನಿಮ್ಮ ಮೇಲೆ ನೀರು ಸಹ ಬೀಳುವುದಿಲ್ಲ.