ಕಾರ್ತಿಕ ಮಾಸದಲ್ಲಿ ಬಂದಿರುವ ಗೌರಿ ಹುಣ್ಣಿಮೆ ದಿನ ಹೊರಣದ ಆರತಿ ಯಾವ ರೀತಿ ಮಾಡಬೇಕು ಎಂದೂ ತಿಳಿಸಿಕೊಡುತ್ತೇವೆ. ಈ ಬಾರಿ ಬಂದಿರುವ ಗೌರಿ ಹುಣ್ಣಿಮೆ ನವೆಂಬರ್ 27ನೆ ತಾರೀಕು ಸೋಮವಾರ ಬಂದಿರುವುದು. ಅಂದಿನಿ ದಿನ ಹೊರಣದ ಆರತಿ ಮಾಡುವುದು ತುಂಬಾ ವಿಶೇಷವಾಗಿರುತ್ತದೆ. ಅದರಲ್ಲೂ ಈ ಕಾರ್ತಿಕ ಮಾಸದಲ್ಲಿ ಈ ದೀಪಗಳ ಹಬ್ಬ ಎಂದೂ ಹೇಳಬಹುದು. ಮೊದಲು ಒಂದು ಹಿತ್ತಾಳೆ ಪ್ಲೇಟ್ ತೆಗೆದುಕೊಳ್ಳಿ. ಇದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಬೇಕು. ಗೌರಿ ಹುಣ್ಣಿಮೆ ದಿನ ಸಾಮಾನ್ಯವಾಗಿ ಹೋಳಿಗೆನೆ ಮಾಡುವುದು. ಅಂದಿನಾ ದಿನ ಪ್ರಸಾದಕ್ಕೆ ಎಷ್ಟು ಹೋಳಿಗೆ ಬೇಕೋ ಅಷ್ಟು ಮಾಡಿ ನಂತರ ಸ್ವಲ್ಪ ಹೊರಣವನ್ನು ತೆಗೆದು ಇಟ್ಟುಕೊಳ್ಳಿ.
ಹೊರಣದಲ್ಲಿ ಒಂಬತ್ತು ದೀಪವನ್ನು ಸಿದ್ಧತೆ ಮಾಡಿಕೊಳ್ಳಿ. ಇದಕ್ಕೆ ತುಪ್ಪವನ್ನು ಹಾಕಿ ಎರಡು ಹೂವು ಬತ್ತಿಯನ್ನು ಹಾಕಬೇಕು. ನಂತರ ಊದಿನಕಡ್ಡಿಯಿಂದ ದೀಪರಾಧನೆ ಮಾಡಬೇಕು. ಗೌರಿ ಹುಣ್ಣಿಮೆ ದಿನ ವಿಶೇಷವಾಗಿ ಗೌರಮ್ಮನ ಪೂಜೆ ಮಾಡಿರುತ್ತಿರೀ. ಕಳಸ ಮುಂದೆ ಇಟ್ಟು ದೀಪವನ್ನು ಬೆಳಗಬೇಕು. ಇದನ್ನು ಸೋಮವಾರ ರಾತ್ರಿ ಕೂಡ ಪ್ರಸಾದವಾಗಿ ತೆಗೆದುಕೊಳ್ಳಬಹುದು.