ವಿಷ್ಣುವಿಗೆ ಅತ್ಯಂತ ಪ್ರಿಯವಾದ ಧನುರ್ಮಾಸ ಯಾವಾಗಿಂದ ಆರಂಭ? ಈ ಮಾಸಕ್ಕೆ ಇಷ್ಟೊಂದು ಮಹತ್ವವೇನು?

ಧನುರ್ಮಾಸ ಎನ್ನುವುದು ಒಂದು ವಿಶೇಷ ಮಾಸವಾಗಿದೆ. ಈ ಮಾಸಕ್ಕೆ ಅತ್ಯಂತ ಮಹತ್ವವನ್ನು ಕೊಟ್ಟಿದ್ದಾರೆ. ಧನುರ್ಮಾಸದಲ್ಲಿ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪೂಜೆಯನ್ನು ಮಾಡುವುದು, ಅಶ್ವತ್ ವೃಕ್ಷದ ಪೂಜೆಯನ್ನು ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳುತ್ತಾರೆ.ಸ್ವತಃ ಶ್ರೀ ಕೃಷ್ಣ ಪರಮಾತ್ಮನೆ ನನಗೆ ಧನುರ್ಮಾಸ ಬಹಳ ಮುಖ್ಯವಾದದ್ದು ಜೊತೆಗೆ ನಾನೆ ಈ ಧನುರ್ಮಾಸ ಎಂದು ಭಗವದ್ಗೀತೆಯಲ್ಲಿ ಹೇಳಿದ್ದಾನೆ.

ಧನುರ್ಮಾಸ ಡಿಸೆಂಬರ್ 14 ಶನಿವಾರದಿಂದ ಶುರುವಾಗಿ ಹಾಗು 2024 ಜನವರಿ 14ನೇ ತಾರೀಕು ಶನಿವಾರದ ದಿನನೇ ಅಂತ್ಯವಾಗುತ್ತದೆ. ಈ ಒಂದು ಮಾಸದಲ್ಲಿ ಯಾವುದೇ ಒಂದು ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಈ ಧನುರ್ಮಾಸವನ್ನು ದೇವತ ಆರಾಧನೇಗೆ ಅಂತಾನೆ ಮೀಸಲಾಗಿ ಇಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಭಗವನ್ ವಿಷ್ಣುವಿನ ಪೂಜೆಯನ್ನು ಈ ಮಾಸದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಮಾಡಲಾಗುತ್ತದೆ.

ಸೂರ್ಯ ಉದಯ ಆಗುವುದಕ್ಕೂ ಮುಂಚೆ ಸ್ನಾನ ಮಾಡಿಕೊಂಡು ಮನೆಯಲ್ಲಿ ಪೂಜೆ ಮುಗಿಸಿ ಅಶ್ವತ್ ವೃಕ್ಷದದ ಹತ್ತಿರ ಹೋಗೀ ಪೂಜೆ ಮಾಡಿ ಪ್ರದಕ್ಷಿಣೆ ಮಾಡಿ ಮನೆಗೆ ಬರಬಹುದು. ಒಂದು ವೇಳೆ ಆಗದೆ ಇದ್ದರೆ ಧನುರ್ಮಾಸದಲ್ಲಿ ಶನಿವಾರ ದಿನ ಪೂಜೆ ಮಾಡಬಹುದು. ಈ ಪೂಜೆ ಮಾಡುವವರಿಗೆ ನಿಮ್ಮ ಇಷ್ಟರ್ಥಗಳು ಬೇಗ ಸಿದ್ದಿ ಆಗುತ್ತದೆ. ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಮತ್ತು ಸಂತಾನ ಭಾಗ್ಯ ಇಲ್ಲದೆ ಇರುವವರಿಗೆ ಸಂತಾನ ಭಾಗ್ಯವನ್ನು ಕರುಣಿಸುತ್ತಾನೆ. ನಿಮಗೆ ಯಾವುದೇ ಒಂದು ದೋಷ ಇದ್ದರು ಸಹ ಅದರಿಂದ ಮುಕ್ತಿಯನ್ನು ನೀವು ಹೊಂದಬಹುದು.

Related Post

Leave a Comment