ಆಚಾರ್ಯ ಚಾಣುಕ್ಯರು ಹೇಳುವ ಮಾಹಿತಿ ಜೀವನದಲ್ಲಿ ತುಂಬಾ ಅನ್ವಯವಾಗುತ್ತದೆ. ಚಾಣಕ್ಯರ ಒಂದೊಂದು ಮಾತು ಸಹ ಬದುಕಲ್ಲಿ ಬೆಳಕನ್ನು ತೋರುತ್ತದೆ. ಮನುಷ್ಯನು ಈ 4 ಕಡೆ ಎಂದಿಗೂ ನಿಲ್ಲಬಾರದು ಎಂದು ಹೇಳಿದ್ದಾರೆ.ಮನುಷ್ಯ ಯಶಸ್ಸು ಕಾಣಲು ಅಥವಾ ಆನಂದದಿಂದ ಬದುಕಲು ಈ 4 ಜಾಗದಲ್ಲಿ ನಿಲ್ಲಬಾರದು.
1, ಗೌರವ ಸಿಗದ ಜಾಗದಲ್ಲಿ ಮನುಷ್ಯ ಯಾವುದೇ ಕಾರಣಕ್ಕೂ ನಿಲ್ಲಬಾರದು. ಮನುಷ್ಯನಿಗೆ ಆತ್ಮಭೀಮನ ಗೌರವ ತುಂಬಾ ಮುಖ್ಯವಾದದ್ದು.ವ್ಯಕ್ತಿ ಯಶಸ್ಸು ಗಳಿಸಬೇಕು ಎಂದರೆ ಸಮಾಜದಲ್ಲಿ ಗೌರವಯುತವಾಗಿ ಎತ್ತರಕ್ಕೆ ಬೆಳೆಯಬೇಕು ಎಂದರೆ ಮೊದಲು ಅವನ ಸ್ವಾಭಿಮಾನ ಮತ್ತು ಗೌರವವನ್ನು ಕಾಪಾಡಿಕೊಂಡು ಬರಬೇಕು. ನಿಮಗೆ ಗೌರವ ಸಿಗದ ಜಾಗದಲ್ಲಿ ನಿಲ್ಲದೆ ಇರುವುದು ಅದು ನಿಮಗೆ ತುಂಬಾ ಸೂಕ್ತ.
2, ನೀವು ಎಲ್ಲಿ ಹೊಸ ವಿಷಯ ಕಲಿಯಲು ಆಗದೆ ಇಲ್ಲವೋ ಅಲ್ಲಿ ನೀವು ನಿಲ್ಲಬಾರದು. ಮನುಷ್ಯ ನಿಂತ ನಿರಂತೆ ಇರಕೂಡದು. ದಿನವೂ ಹೊಸದು ಎನ್ನುವಂತೆ ಕಲಿಯಬೇಕು. ಇದು ಕೇವಲ ಯಶಸ್ಸನ್ನು ಗಳಿಸುವುದಕ್ಕೆ ಮಾತ್ರವಲ್ಲ ನಿಮ್ಮ ಜೀವನವನ್ನು ನವೀನವಾಗಿ ಸುಂದರವಾಗಿ ಇರಲು ಕಾರಣವಾಗುತ್ತದೆ. ಕಲಿಯಬೇಕು ಬೇರೆಯವರಿಗೂ ಕಲಿಸಬೇಕು. ಇದರಿಂದ ನಿಮ್ಮ ಹೊಸ ಪೀಳಿಗೆಗೆ ಒಳ್ಳೆಯದು.
3, ಪ್ರೀತಿ ಪಾತ್ರರು ಇಲ್ಲದ ಜಾಗದಲ್ಲಿ ಇರಬಾರದು. ಮನುಷ್ಯ ಸಂತೋಷವಾಗಿ ಇರಬೇಕು ಎಂದರೆ ತನ್ನ ಆಗು ಹೋಗುಗಳನ್ನು ಹಂಚಿಕೊಳ್ಳಬೇಕು. ಇಲ್ಲವಾದರೆ ಮನಸ್ಸು ಕುಗ್ಗುತ್ತದೆ. ನೀವು ಇರುವ ಜಾಗದಲ್ಲಿ ನಿಮಗೆ ಒಳಿತು ಬಯಸುವವರು ಅಥವಾ ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ಅಥವಾ ನೀವು ಹೇಳಿದ್ದನ್ನು ಮನಸಾರೆ ಕೇಳುವವರು ಇಲ್ಲದ ಸ್ಥಳದಲ್ಲಿ ಯಾವತ್ತಿಗೂ ನಿಲ್ಲಬೇಡಿ.
4, ನಿಮಗೆ ನಿಮ್ಮ ಕೆಲಸದಲ್ಲಿ ಖುಷಿ ಕೊಡದೆ ಇರುವ ಕಡೆ.
ನೀವು ಮಾಡುವ ಕೆಲಸದಲ್ಲಿ ತೃಪ್ತಿ ಸಿಗುತ್ತಿಲ್ಲ ಎಂದರೆ ಆನಂದ ಸಿಗುತ್ತಿಲ್ಲ ಎಂದರೆ ನೀವು ಅಲ್ಲಿ ಇರುವುದು ಅವಶ್ಯಕತೆ ಇಲ್ಲಾ. ನೀವು ಒಂದು ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಮಾತ್ರವೆ ಆ ಕ್ಷೇತ್ರದಲ್ಲಿ ಉನ್ನತಿ ಗಳಿಸಲು ಸಾಧ್ಯ. ಇತ್ತೀಚಿನ ದೀನಗಳಲ್ಲಿ ಕೆಲಸ ಸಿಗುವುದು ಕಷ್ಟ. ಹಾಗಾಗಿ ಮಾಡುವ ಕೆಲಸವನ್ನು ಆದಷ್ಟು ಶ್ರದ್ದೆ ಮತ್ತು ಖುಷಿಯಿಂದ ಮಾಡಿ. ನೀವು ಮಾಡುವ ಕೆಲಸದಲ್ಲೇ ತೃಪ್ತಿಯನ್ನು ಕಾಣಲು ಪ್ರಯತ್ನಿಸಿ. ಸ್ನೇಹಿತರೆ ಈ 4 ಕಡೆ ಯಾವುದೇ ಕಾರಣಕ್ಕೂ ನಿಲ್ಲಬೇಡಿ. ಏಕೆಂದರೆ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಗೌರವ ತುಂಬಾ ಮುಖ್ಯವಾಗಿರುತ್ತದೆ.