ಹೆಚ್ಚು ಐಸ್ ಕ್ರೀಮ್ ತಿಂದರೆ, ಕೆಮ್ಮ ಮತ್ತು ನೆಗಡಿ ಬರುತ್ತದೆ ಅಂತ ಭಾವಿಸುತ್ತೀರಿ. ಎಲ್ಲರೂ ಯೋಚಿಸುವಂತೆ, ಐಸ್ ಕ್ರೀಮ್ ತಿನ್ನುವುದರಿಂದ ಕೆಲವು ಅನಾನುಕೂಲತೆಗಳಿರಬಹುದು ಆದರೆ ಅದರಿಂದ ಕೆಲವು ಪ್ರಯೋಜನಗಳಿವೆ. ವಾಸ್ತವವಾಗಿ ಐಸ್ ಕ್ರೀಮ್ ತಿನ್ನುವುದರಿಂದ ನಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ.
ಹೊಟ್ಟೆ ತುಂಬ ಊಟ ಮಾಡಿದ್ರೂ ಸಹ ಕೊನೆಗೆ ಐಸ್ ಕ್ರೀಂ ತಿನ್ನಲು ಜನ ಇಷ್ಟ ಪಡುತ್ತಾರೆ. ಅಂತಹ ಐಸ್ ಕ್ರೀಮ್ ರುಚಿಯನ್ನು ಮಾತ್ರವಲ್ಲದೆ ಕೆಲವು ಪೌಷ್ಟಿಕಾಂಶದ ಮೌಲ್ಯವನ್ನೂ ಹೊಂದಿದೆ. ಐಸ್ ಕ್ರೀಮ್ ಸಂಪೂರ್ಣ ಪೌಷ್ಟಿಕಾಂಶದ ಆಹಾರವಲ್ಲದಿದ್ದರೂ, ಪ್ರಸಿದ್ಧ ಪೌಷ್ಟಿಕತಜ್ಞ ಲಾರಾ ಎಂ. ಅಲ್ಲೆ ಐಸ್ ಕ್ರೀಮ್ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳುತ್ತಾರೆ.
ಐಸ್ ಕ್ರೀಮ್ ಉತ್ತಮ ಗುಣಮಟ್ಟದ್ದಾಗಿದ್ದರೆ ಮತ್ತು ಅದರ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕಗಳನ್ನು ಸೇರಿಸದಿದ್ದರೆ, ಖಂಡಿತವಾಗಿಯೂ ಆ ಐಸ್ ಕ್ರೀಂ ನಮ್ಮ ದೇಹಕ್ಕೆ ಉಪಯುಕ್ತ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲೂ ಐಸ್ ಕ್ರೀಮ್ ತಿನ್ನುವುದರಿಂದ ಎಂಡಾರ್ಫಿನ್ ಎಂಬ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸಿಗೆ ಒಳ್ಳೆಯದಾಗುತ್ತದೆ. ನಮಗೆ ಗೊತ್ತಿಲ್ಲದೆಯೇ ಸಂತೋಷ ನಮ್ಮೊಳಗೆ ಹುಟ್ಟುತ್ತದೆ.
ಇದಲ್ಲದೆ, ಐಸ್ ಕ್ರೀಮ್ ತಿನ್ನುವುದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಪೂರೈಕೆ ಹೆಚ್ಚಾಗುತ್ತದೆ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಐಸ್ ಕ್ರೀಂ ತಿನ್ನುವುದರಿಂದ ನಮ್ಮ ದೇಹದಲ್ಲಿ ಶಕ್ತಿಯು ಬಹುಬೇಗ ಹೆಚ್ಚುತ್ತದೆ. ಸಾಮಾನ್ಯ ಆಹಾರಕ್ಕೆ ಹೋಲಿಸಿದರೆ ಐಸ್ ಕ್ರೀಮ್ ನಮಗೆ ಬೇಗನೆ ಶಕ್ತಿಯನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹಲ್ಲಿನ ಸಮಸ್ಯೆಗಳ ಸಮಯದಲ್ಲಿ ಐಸ್ ಕ್ರೀಮ್ ಕೂಡ ನಮಗೆ ಉಪಯುಕ್ತವಾಗಿದೆ. ಹಲ್ಲು ತೆಗೆದ ನಂತರ ಐಸ್ ಕ್ರೀಂ ತಿಂದರೆ ಗಾಯ ಬಹುಬೇಗ ವಾಸಿಯಾಗುತ್ತದೆ ಎಂದು ವೈದ್ಯರೂ ಒಪ್ಪುತ್ತಾರೆ. ಆ ಸಮಯದಲ್ಲಿ ಐಸ್ ಕ್ರೀಂ ತಿಂದರೆ ತುಂಬಾ ಒಳ್ಳೆಯದು ಎಂದೂ ಹೇಳಲಾಗುತ್ತದೆ.