ಈ ಒಂದು ಪೊಂಗಲ್ ರಂಗೋಲಿ ಅನ್ನು ಮನೆಯ ಗೇಟ್ ಮುಂಭಾಗದಲ್ಲಿ ಇದನ್ನು ಹಾಕಿದರೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಮೊದಲು 13 ಚುಕ್ಕಿ ಮೂರು ಸಾಲು ಸಮವಾಗಿ ಇಡಬೇಕು. ನಂತರ ಒಂದೊಂದು ಚುಕ್ಕಿ ಕಡಿಮೆ ಮಾಡಿ ಮೂರು ಬರುವ ಹಾಗೆ ಚುಕ್ಕಿ ಇಡಬೇಕು. ನಂತರ ಎರಡು ಕಮಲ ಬರುತ್ತದೆ ಹಾಗು ಎರಡು ದೀಪ ಬರುತ್ತದೆ. ನಂತರ ನಾಲ್ಕು ಕಬ್ಬು ಹಾಗು ಒಂದು ಪೊಂಗಲ್ ಪಾರ್ಟ್ ಬರುತ್ತದೆ. ಚುಕ್ಕಿ ಸರಿಯಾಗಿ ಹಾಕಿದರೆ ರಂಗೋಲಿ ಅನ್ನು ಸಹ ಸರಿಯಾಗಿ ಹಾಕಿಕೊಳ್ಳಬಹುದು.
ಇನ್ನು ರಂಗೋಲಿ ಹಾಕಿದ ನಂತರ ಗುಲಾಬಿ, ಹಸಿರು,ಬಿಳಿ ಬಣ್ಣವನ್ನು ಉಪಯೋಗಿಸಿಕೊಂಡಿದ್ದೇನೆ. ಈ ರೀತಿ ರಂಗೋಲಿ ಹಾಕಿದರೆ ಮನೆ ಮುಂದೆ ಚೆನ್ನಾಗಿ ಕಾಣಿಸುತ್ತದೆ ಹಾಗು ಹಬ್ಬದಲಂ ವಾತಾವರಣ ಕೂಡ ಚೆನ್ನಾಗಿ ಇರುತ್ತದೆ.