ಸಿಹಿ ಗೆಣಸು ಈ ಕಾಯಿಲೆ ಇದ್ದವರು ಇವತ್ತೇ ತಿನ್ನಿ ಯಾಕೆಂದ್ರೆ!

ಸಿಹಿಗೆಣಸು ಒಂದು ಜಾತಿಯ ಗೆಡ್ಡೆ. ಗೆಣಸಿನಲ್ಲಿ ನೂರಾರು ಬಗೆಗಳು ಇವೆ. ಇದರಲ್ಲಿ ಯಥೇಚ್ಛವಾದ ಪೋಷಕಾಂಶಗಳು ಇವೆ.ಗೆಣಸನ್ನು ವಿಶೇಷವಾಗಿ ಸಂಕ್ರಾಂತಿ ಹಬ್ಬದಂದು ಮಾತ್ರ ಸೇವಿಸದೆ ಚಳಿಗಾಲದ ಸಮಯದಲ್ಲಿಯು ಸೇವನೆ ಮಾಡಬೇಕು. ಯಾಕೆಂದರೆ ಇದರಲ್ಲಿ ಇರುವ ಪೌಷ್ಟಿಕ ಸತ್ವವು ದೇಹಕ್ಕೆ ಮತ್ತು ಚರ್ಮಕ್ಕೆ ಬೇಕಾಗುವ ತೇವಾಂಶವನ್ನು ನೀಡುತ್ತದೆ. ಶ್ರೀಮಂತ ಗೆಣಸಿನಲ್ಲಿ ಬಿ1, ಬಿ2,ಬಿ3, ಬಿ6,ಬಿ9 ಕ್ಯಾಲ್ಸಿಯಂ ಸೋಡಿಯಂ ಝೀಕ್ ಮೆಗ್ನೀಷಿಯಂ ಇನ್ನೂ ಅನೇಕ ಪೋಷಕಾಂಶಗಳು ತನ್ನಲ್ಲಿ ಅಡಗಿಸಿಕೊಂಡಿದೆ.

ಸಿಹಿಗೆಣಸು ಆರೋಗ್ಯಕ್ಕೆ ಹೇಗೆಲ್ಲಾ ಪ್ರಯೋಜನಕಾರಿ?

1, ಸಿಹಿ ಗೆನಸಿನಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಾಗೂ ಕಡಿಮೆ ಕ್ಯಾಲೊರಿ ಹೊಂದಿರುವ ಈ ಗೆಣಸು ನಿಮ್ಮ ತೂಕ ಇಳಿಕೆಗೆ ಪ್ರಯೋಜನಕಾರಿಯಾಗುತ್ತದೆ.

2, ಇನ್ನು ಸಿಹಿಗೆಣಸಿನ ಲಿ ಫೈಬರ್ ಅಧಿಕವಾಗಿ ಇರುವುದರಿಂದ ಕಡಿಮೆ ಗ್ಲೈಸೆಮಿಕ್ ಅಂಶವನ್ನು ಹೊಂದಿದೆ.ಇದು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಿಹಿಗೆಣಸು ನೈಸರ್ಗಿಕವಾಗಿಯೇ ಸಕ್ಕರೆ ಅಂಶ ಹೊಂದಿರುವುದರಿಂದ ಮಧುಮೇಹ ಹೊಂದಿರುವವರು ನಿಯಮಿತವಾಗಿ ಸೇವಿಸುವುದು ಉತ್ತಮ.ಒಮ್ಮೆ ವೈದ್ಯರ ಸಲಹೆ ಪಡೆದು ಸೇವಿಸಿ.

3, ಸಿಹಿ ಗೆಣಸು ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು.

4, ಇನ್ನು ಸಿಹಿಗೆಣಸನ್ನು ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಹೃದಯದ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ6 ಹೃದಯಾಘಾತ ತಡೆಗಟ್ಟುವ ರಾಸಾಯನಿಕ ಹೋಮೋಸಿಸ್ಟನ್ ಅನ್ನು ಕಡಿಮೆ ಮಾಡುತ್ತದೆ.

5, ಸಿಹಿ ಗೆಣಸು ಮಕ್ಕಳಿಗೆ ಬಹಳ ಒಳ್ಳೆಯದು.ಇದು ಮೂಳೆ ಹಾಗೂ ಹಲ್ಲುಗಳನ್ನು ಬಲಪಡಿಸುತ್ತದೆ. ಚರ್ಮವನ್ನು ಒಳಗಿನಿಂದ ಸಂರಕ್ಷಣೆ ಮಾಡುತ್ತದೆ. ಮಕ್ಕಳಿಗೆ ತಯಾರಿಸಿ ಅಡುಗೆಯಲ್ಲಿ ಸಿಹಿಗೆಣಸನ್ನು ಮಿಶ್ರಣ ಮಾಡಿ ತಿನ್ನಲು ಕೊಡಬಹುದು. ಇದು ದೃಷ್ಟಿಯ ತೊಂದರೆಯನ್ನು ಕೂಡ ಕಡಿಮೆ ಮಾಡುತ್ತದೆ.ಇದು ಕಣ್ಣಿನ ಪೊರೆ ದೃಷ್ಟಿ ದೋಷ ಕಣ್ಣುಗಳಲ್ಲಿ ಉರಿ ಇನ್ನು ಅನೇಕ ಸಮಸ್ಸೆಗಳಿಂದ ಪಾರು ಮಾಡುತ್ತದೆ.ಅಷ್ಟೇ ಅಲ್ಲದೆ ದೇಹದಲ್ಲಿ ಬಿಳಿ ಹಾಗೂ ಕೆಂಪು ರಕ್ತ ಕಣವನ್ನು ಹೆಚ್ಚಿಸುತ್ತದೆ. ಯಾವುದೇ ರೋಗಗಳು ಹತ್ತಿರ ಸುಳಿಯದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Related Post

Leave a Comment