ಬೆಣ್ಣೆಯನ್ನು ಮೊಸರನ್ನು ಕಡೆಯುವುದರ ಮೂಲಕ ತೆಗೆಯಲಾಗುತ್ತದೆ. ದೋಸೆಗೆ, ಕೆಲವು ಗ್ರೇವಿ ಹೀಗೆ ಅನೇಕ ಪಾಕ ಪದ್ಧತಿಯಲ್ಲಿ ಬಳಕೆಯಾಗುತ್ತದೆ. ಹಾಗೆ ಕೂಡ ಇದನ್ನು ಚಪಾತಿ, ರೊಟ್ಟಿ, ದೋಸೆಗೆ ಅದ್ದಿಕೊಂಡು ಸಹ ತಿನ್ನಬಹುದು. ಅದರಲ್ಲೂ ಮನೆಯಲ್ಲಿಯೇ ಮೊಸರನ್ನು ಕಡೆದು ತಯಾರಿಸಿದ ಬೆಣ್ಣೆಯಂತೂ ಅತ್ಯದ್ಭುತ ರುಚಿ ನೀಡುತ್ತದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತದೆ.
ಬೆಣ್ಣೆ ಡೈರಿ ಉತ್ಪನ್ನಗಳಲ್ಲಿ ರುಚಿಯಾದ ಒಂದು ಪದಾರ್ಥ. ಭಗವಂತ ಕೃಷ್ಣನಿಗೂ ಬೆಣ್ಣೆ ಅಂದರೆ ಅಚ್ಚುಮೆಚ್ಚಂತೆ. ಕೃಷ್ಣನ ಪ್ರಿಯವಾದ ಆಹಾರ ಪುರಾತನ ಕಾಲದಿಂದಲೂ ಶ್ರೇಷ್ಠತೆ, ಆರೋಗ್ಯಕರ, ರುಚಿಗೆ ಹೆಸರುವಾಸಿ. ಆಗಿನಂತೆ ಬೆಣ್ಣೆ , ಹಾಲು, ತುಪ್ಪ, ಕೆನೆ ಮೊಸರೆಲ್ಲಾ ಈಗ ಪ್ಯಾಕ್ ಆಗಿ ಬರುತ್ತಿದ್ದು, ನಗರದ ಜನ ಇದನ್ನೇ ಬಳಸುತ್ತಿದ್ದಾರೆ. ಎಲ್ಲೋ ಹಳ್ಳಿ ಕಡೆ ಮಾತ್ರ ಮನೆಯಲ್ಲಿ ತಯಾರಿಸಿದ ಬೆಣ್ಣೆ, ಮೊಸರು ಲಭ್ಯವಾಗುತ್ತಿದೆ. ಈ ಡೈರಿ ಉತ್ಪನ್ನಗಳನ್ನು ಮನೆಯಲ್ಲಿ ತಯಾರಿಸಿ ತಿನ್ನುವುದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲಿ ಬೆಣ್ಣೆ ಕೂಡ ಒಂದು. ಯಾವುದೇ ಸಂರಕ್ಷಕಗಳು ಮತ್ತು ಬಣ್ಣಗಳನ್ನು ಸೇರಿಸದೇ ಇದನ್ನು ಮನೆಯಲ್ಲಿಯೇ ಮಾಡಿ ಸೇವಿಸುವುದು ಉತ್ತಮ.
ಬೆಣ್ಣೆಯನ್ನು ಮೊಸರನ್ನು ಕಡೆಯುವುದರ ಮೂಲಕ ತೆಗೆಯಲಾಗುತ್ತದೆ. ದೋಸೆಗೆ, ಕೆಲವು ಗ್ರೇವಿ ಹೀಗೆ ಅನೇಕ ಪಾಕ ಪದ್ಧತಿಯಲ್ಲಿ ಬಳಕೆಯಾಗುತ್ತದೆ. ಹಾಗೆ ಕೂಡ ಇದನ್ನು ಚಪಾತಿ, ರೊಟ್ಟಿ, ದೋಸೆಗೆ ಅದ್ದಿಕೊಂಡು ಸಹ ತಿನ್ನಬಹುದು. ಅದರಲ್ಲೂ ಮನೆಯಲ್ಲಿಯೇ ಮೊಸರನ್ನು ಕಡೆದು ತಯಾರಿಸಿದ ಬೆಣ್ಣೆಯಂತೂ ಅತ್ಯದ್ಭುತ ರುಚಿ ನೀಡುತ್ತದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತದೆ.
ಹೋಮ್ ಮೇಡ್ ಬೆಣ್ಣೆ ತಿಂದರೆ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆ.
ಪೋಷಕಾಂಶ-ಭರಿತ ಆಹಾರ–ಮನೆಯಲ್ಲಿ ತಯಾರಿಸಿದ ಬಿಳಿ ಬಣ್ಣದ ಬೆಣ್ಣೆ ಎ, ಡಿ, ಇ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ಈ ಪೋಷಕಾಂಶಗಳು ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತವೆ.
ಆರೋಗ್ಯಕರ ಕೊಬ್ಬುಗಳು–ಇದು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತದೆ.
ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ--ಮನೆಯಲ್ಲಿ ತಯಾರಿಸಿದ ಬೆಣ್ಣೆಯು ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಮೂಳೆಗಳು ಗಟ್ಟಿಗೊಂಡು ಬಲಗೊಳ್ಳುತ್ತವೆ.
ಚರ್ಮವನ್ನು ಪೋಷಿಸುತ್ತದೆ–ಬೆಣ್ಣೆಯಲ್ಲಿನ ಅಗತ್ಯವಾದ ಜೀವಸತ್ವಗಳು ಮತ್ತು ಆರೋಗ್ಯಕರ ಕೊಬ್ಬಿನ ಸಂಯೋಜನೆಯು ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಇದನ್ನು ನಿಯಮಿತವಾಗಿ ತಿನ್ನುವುದರಿಂದ ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪು ಬರುತ್ತದೆ. ಮುಖಕ್ಕೆ ಕೂಡ ಇದನ್ನು ನೇರವಾಗಿ ಹಚ್ಚಿ ಸ್ವಲ್ಪ ಹೊತ್ತು ತೊಳೆಯಬಹುದು, ಇದು ಮಾಯ್ಚಿರೈಸರ್ ನೀಡುತ್ತದೆ.
ಜೀರ್ಣಕ್ರಿಯೆಗೆ ಸಹಾಯ–ಬೆಣ್ಣೆಯು ನಮ್ಮ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತು ಗ್ಯಾಸ್, ಹೊಟ್ಟೆಯುಬ್ಬರ ಇವುಗಳನ್ನು ದೂರ ಮಾಡಿ ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ.
ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ–ಬೆಣ್ಣೆ ತಿಂದರೆ ದಪ್ಪಾ ಆಗುತ್ತೇವೆ ಎಂಬ ನಂಬಿಕೆ ಹಲವರಲ್ಲಿದೆ, ಆದರೆ ಮನೆಯಲ್ಲಿ ತಯಾರಿಸಿದ ಬೆಣ್ಣೆಯ ಮಿತವಾದ ಸೇವನೆ ನಿಜವಾಗಿಯೂ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.
ಹಾರ್ಮೋನ್ ಬ್ಯಾಲೆನ್ಸ್–ಹೋಮ್ಮೇಡ್ ಬೆಣ್ಣೆಯು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ಹಾರ್ಮೋನ್ ಸಮತೋಲನಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆಯರಲ್ಲಿ, ಅವರ ಸಂತಾನೋತ್ಪತ್ತಿ ಆರೋಗ್ಯವನ್ನು ಬೆಂಬಲಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ–ವಿಟಮಿನ್ ಎ ಸೇರಿದಂತೆ ಮನೆಯಲ್ಲಿ ಮಾಡಿದ ಬೆಣ್ಣೆಯು ಹಲವು ಪೋಷಕಾಂಶಗಳನ್ನು ಹೊಂದಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಒತ್ತಡ ಕಡಿಮೆ ಮಾಡುತ್ತದೆ–ಬೆಣ್ಣೆಯಲ್ಲಿನ ಒಮೆಗಾ-3 ನರಗಳನ್ನು ಸುಧಾರಿಸುತ್ತದೆ ಮತ್ತು ನಮ್ಮಲ್ಲಿನ ಒತ್ತಡವನ್ನು ನಿವಾರಣೆ ಮಾಡುತ್ತದೆ. ಹೀಗಾಗಿ ಮನೆಯಲ್ಲಿ ಮಾಡಿದ ಬೆಣ್ಣೆ ಮೆದುಳು ಮತ್ತು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.
ಶಕ್ತಿಯ ಹೆಚ್ಚಳ–ಪೋಷಕಾಂಶಗಳ ಜೊತೆ ಕ್ಯಾಲೋರಿ ಹೊಂದಿರುವ ಬೆಣ್ಣೆಯು ದಿನದ ಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕ ಕೆಲಸಗಳನ್ನು ಮಾಡಲು ಶಕ್ತಿ ಪೂರೈಸುತ್ತದೆ.