ನಮ್ಮ ಹಿರಿಯರು ಹಿಂದಿನಿಂದಲೂ ಹೇಳಿಕೊಂಡು ಬಂದಿರುವ ಪ್ರಕಾರ ಮನೆಯಲ್ಲಿ ಕನ್ನಡ ಹೊಡೆಯಬಾರದು ಇದು ಅಪಶಕುನವೆಂದು, ಅದೇ ರೀತಿಯಾಗಿ ಈಗಲೂ ಕೂಡ ಪ್ರತಿಯೊಬ್ಬರ ಮನೆಯಲ್ಲಿ ಹಿರಿಯರು ಹೇಳುತ್ತಾರೆ ಕನ್ನಡಿಗರು ಜೋಪಾನವಾಗಿರಬೇಕು ಕನ್ನಡಿಗೆ ಕಡೆಗೆ ವಿರಬಾರದು ಮನೆಯಲ್ಲಿ ಕನ್ನಡಿ ಹೊಡೆಯಬಾರದು ಮನೆಗೆ ಒಳ್ಳೆಯದಾಗುವುದಿಲ್ಲ ಎಂದು. ಆದರೆ ಯಾರೂ ಕೂಡ ಬೇಕು ಅಂತ ಕನ್ನಡಿಯನ್ನು ಹೊಡೆದು ಹಾಕುವುದಿಲ್ಲ, ಅದು ಆಕಸ್ಮಿಕವಾಗಿ ಆಗುವಂತಹದ್ದು, ಹಾಗಾದ್ರೆ ಆಕಸ್ಮಿಕವಾಗಿ ಏನಾದರೂ ಮನೆಯಲ್ಲಿ ಕನ್ನಡಿ ಹೊಡೆದು ಹೋದರೆ ಇದರಿಂದ ಅಪಶಕುನ ಉಂಟಾಗುತ್ತದೆಯಾ? ಸಮಸ್ಯೆಗಳು ಎದುರಾಗುತ್ತವೆಯಾ? ಕನ್ನಡಿ ಹೊಡೆದು ಹೋದರೆ ಏನು ಮಾಡಬೇಕು ಎಂದು ನೋಡೋಣ.
ಕನ್ನಡಿ ಎಂದರೆ ಹೆಣ್ಣುಮಕ್ಕಳಿಗೆ ಬಹಳ ಅಚ್ಚುಮೆಚ್ಚು, ಮನೆಯಲ್ಲಿ ಓಡಾಡುವ ಹಾಗಿಲ್ಲ ಕನ್ನಡಿಯಿಂದ ನೋಡಿಕೊಂಡು ತಮ್ಮ ಸೌಂದರ್ಯವನ್ನು ಸವಿಯುತ್ತಾರೆ, ಹಬ್ಬ ಹರಿದಿನ ಮತ್ತು ವಿಶೇಷ ದಿನಗಳಲ್ಲಿ ಒಂದು ಹೆಣ್ಣು ಮಕ್ಕಳು ಕನ್ನಡಿಯನ್ನು ಬಿಡುವುದೇ ಇಲ್ಲ,
ದೇವಾಲಯಗಳಲ್ಲೂ ಕೂಡ ಕನ್ನಡಿಯ ಮೂಲಕ ದೇವರ ದರ್ಶನವನ್ನು ಮಾಡುವುದು ಶ್ರೇಷ್ಠವೆಂದು ಹೇಳಲಾಗುತ್ತದೆ ಹಾಗಾಗಿಯೇ ದೇವಾಲಯಗಳಲ್ಲಿ ಗರ್ಭಗುಡಿಯ ದೇವರ ಮೂರ್ತಿಗಳು ಹಾಗೂ ಕನ್ನಡಿಯನ್ನು ಇಡುವುದು, ಅಷ್ಟೇ ಅಲ್ಲದೆ ಕನ್ನಡಿಯಲ್ಲಿ ಮಹಾಲಕ್ಷ್ಮಿ ದೇವಿಯ ವಾಸಸ್ಥಳ ಇರುತ್ತದೆ ಎಂದು ಸಹ ಹೇಳಲಾಗುತ್ತದೆ. ಇನ್ನು ನಂಬಿಕೆಗಳ ಪ್ರಕಾರ ಕನ್ನಡಿಯು ಮನೆಯಲ್ಲಿ ಆಕಸ್ಮಿಕವಾಗಿ ಹೊಡೆದು ಹೋದರೆ ಅದು ಭವಿಷ್ಯದಲ್ಲಿ ಮನೆಯಲ್ಲಿ ತೊಂದರೆಗಳು ಆಗಬಹುದು ಎಂಬ ಸೂಚನೆಯನ್ನು ನೀಡುತ್ತದೆ ಎಂಬ ನಂಬಿಕೆಯಿದೆ, ಇದರಿಂದ ಮನೆಯವರು ಸಾಕಷ್ಟು ಭಯವನ್ನು ಪಡುತ್ತಾರೆ,
ಇನ್ನು ಹೊಡೆದ ಕನ್ನಡಿಯಲ್ಲಿ ಅಥವಾ ಭಿನ್ನವಾಗಿರುವ ಕನ್ನಡಿಯಲ್ಲಿ ಮುಖವನ್ನು ಕೂಡ ನೋಡಿಕೊಳ್ಳಬಾರದು ಎಂದು ಹೇಳುತ್ತಾರೆ, ಇನ್ನು ಹೊಡೆದ ಕನ್ನಡಿಯನ್ನು ಕೂಡ ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಹೇಳುತ್ತಾರೆ. ಪುರಾಣಗಳ ಪ್ರಕಾರ ಕನ್ನಡಿ ಮತ್ತು ಮಹಾಲಕ್ಷ್ಮಿ ದೇವಿಗೆ ಉತ್ತಮವಾದ ಸಂಬಂಧವಿದೆ, ಕನ್ನಡಿಯಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾರೆ ಎಂದು ಸಹ ಹೇಳಲಾಗುತ್ತದೆ. ಇನ್ನು ಪುರಾಣಗಳ ಪ್ರಕಾರ ಮನೆಯಲ್ಲಿ ಕನ್ನಡಿ ಹೊಡೆದು ಹೋದರೆ ಅದು ಭವಿಷ್ಯದಲ್ಲಿ ನಷ್ಟಗಳು ಉಂಟಾಗುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ,
ಒಮ್ಮೆ ಮನೆಯಲ್ಲಿ ಕನ್ನಡಿ ಹೊಡೆದು ಹೋದರೆ ಅದರ ಪರಿಣಾಮ ಏಳು ವರ್ಷಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಮನೆಯಲ್ಲಿ ಕನ್ನಡಿಯು ಹೊಡೆಸಬಾರದು ಎಂದು ಹೇಳುವುದು ಹಾಗಾಗಿ ಮನೆಯಲ್ಲಿ ಕನ್ನಡಿಗ ವಿಷಯದಲ್ಲಿ ಅತ್ಯಂತ ಜಾಗರೂಕತೆಯಿಂದ ಇರುವುದು ಒಳ್ಳೆಯದು, ಕನ್ನಡಿ ಕೆಳಗೆ ಜಾರದಂತೆ ಎಚ್ಚರಿಕೆಯನ್ನು ವಹಿಸಬೇಕು, ಒಂದು ವೇಳೆ ಬಿದ್ದರೂ ಅದನ್ನು ತಕ್ಷಣ ಸ್ವಚ್ಛಗೊಳಿಸಿ ಮನೆಯಿಂದ ಹೊರಗೆ ಹಾಕಬೇಕು.