ಟೀ ಕಪ್ ಕೈ ಮುರಿದರೆ ಎಲ್ಲಾರು ಕಸಕ್ಕೆ ಎಸೆಯುತ್ತಾರೆ. ಈ ರೀತಿ ಮಾಡಬೇಡಿ ಏಕೆಂದರೆ ಇದು ನಿಮ್ಮ ಮನೆಯ ದೊಡ್ಡ ಕೆಲಸಕ್ಕೆ ಬರುತ್ತದೆ. ರಾತ್ರಿ ಅದರೆ ಸಾಕು ಸೊಳ್ಳೆ ಕಾಟ ಹೆಚ್ಚಾಗಿದೆ. ಸೊಳ್ಳೆ ಕಾಟದಿಂದ ಮಲಗುವುದಕ್ಕೂ ಆಗುವುದಿಲ್ಲ. ಇದಕ್ಕೆ ಹಾನಿಕಾರಕ ಸ್ಪ್ರೇ ಗಳನ್ನು ಹಾಗು ಕಾಯಿಲ್ ಅನ್ನು ಹಚ್ಚುತ್ತೇವೆ. ಇದರಿಂದ ಅರೋಗ್ಯಕ್ಕೂ ಕೂಡ ಹಾನಿಕಾರಕ. ಇದಕ್ಕೆ ಹ್ಯಾಂಡಲ್ ಕಟ್ ಆಗಿರುವ ಟೀ ಕಪ್ ಇದ್ದರೆ ಸಾಕು.
ಮೊದಲು ಟೀ ಕಪ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ಜುಟ್ಟನ್ನು ಹಾಕಿ. ಇದಕ್ಕೆ ಎರಡು ಕರ್ಪುರ,5 ಲವಂಗ ಹಾಕಿ ಬೆಂಕಿ ಹಾಕಬೇಕು. ಪೂರ್ತಿಯಾಗಿ ಬರ್ನ್ ಆಗುವ ತನಕ ಚೆನ್ನಗಿ ಉರಿಸಬೇಕು. ಇದರಿಂದ ಹೊಗೆ ಬರಬೇಕು ಎಂದರೆ ಇದು ಚೆನ್ನಾಗಿ ಉರಿಬೇಕು.ಈ ಹೊಗೆಯಿಂದ ಸೊಳ್ಳೆಗಳು ಓಡಿ ಹೋಗುತ್ತವೆ. ಈ ರೀತಿ ಮಾಡಿದರೆ ಸೊಳ್ಳೆಗಳ ಕಾಟ ಇರುವುದಿಲ್ಲ.