ಆಕರ್ಷಕವಾಗಿ ಕಾಣಲು ತ್ವಚೆ ಆರೈಕೆಗೆ ಪುರುಷರೂ ಗಮನ ಕೊಡಬೇಕು. ಜೇಡಿ ಮಣ್ಣಿನ ಮಾಸ್ಕ್ ಅಥವಾ ಕ್ಲೇ ಮಾಸ್ಕ್ ಪುರುಷರ ಮುಖದ ಕಾಂತಿ ಹೆಚ್ಚಿಸುವಲ್ಲಿ ಸಹಕಾರಿ. ಇದನ್ನು ಹೇಗೆ ಬಳಸಿದರೆ ಹೆಚ್ಚು ಸೂಕ್ತ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:
ಪುರುಷರಿಗೆ ಸೂಕ್ತವಾದ ಫೇಸ್ ಮಾಸ್ಕ್‌ಗಳಲ್ಲೊಂದು ಕ್ಲೇ ಮಾಸ್ಕ್. ಇದನ್ನು ಎಂದಾದರೂ ಕ್ಲೇ ಮಾಸ್ಕ್ ಟ್ರೈ ಮಾಡಿದ್ದೀರಾ? ಮುಖದ ಕಾಂತಿ ಹೆಚ್ಚಿಸುವ ಈ ಮಾಸ್ಕ್ ಎಲ್ಲಾ ಬಗೆಯ ತ್ವಚೆಯವರಿಗೆ ಒಪ್ಪುವಂಥದ್ದು.
ಕ್ಲೇ ಮಾಸ್ಕ್ ಹಚ್ಚಿದರೆ ಮುಖದ ಕಾಂತಿ ಅಧಿಕವಾಗುವುದು, ಕ್ಲೇ ಮಾಸ್ಕ್ ಹಚ್ಚುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು:
- ಮುಖದಲ್ಲಿ ಗಾಯ ಅಥವಾ ಕಜ್ಜಿ ಇದ್ದರೆ ಇದನ್ನು ಹಚ್ಚುವ ಮುನ್ನ ತ್ವಚೆ ಪರಿಣಿತರ ಸಲಹೆ ಪಡೆಯಿರಿ.
- ಕ್ಲೇ ಪೇಸ್ಟ್ ಕಲಿಸಲು ತಣ್ಣನೆಯ ನೀರನ್ನು ಬಳಸಿ.
- ಇದನ್ನು ಎಕ್ಸ್‌ಫೋಲೆಟ್‌ಗೆ ಬಳಸಬಾರದು.
- ಕ್ಲೇಯನ್ನು ತಾಮ್ರ ಅಥವಾ ಸ್ಟೀಲ್ ಪಾತ್ರೆಯಲ್ಲಿ ಇಡಬೇಡಿ. ಇದನ್ನು ಗಾಜಿನ ಪಾತ್ರದಲ್ಲಿ ಇಡಿ.
- ಕ್ಲೇ ಮಾಸ್ಕ್ ಮಿಕ್ಸ್ ಮಾಡಲು ರೋಸ್ ವಾಟರ್ ಬಳಸಬಹುದು. ಇದರಿಂದ ಮುಖದ ಕಾಂತಿ ಮತ್ತಷ್ಟು ಹೆಚ್ಚುವುದು.
ಕ್ಲೇ ಮಾಸ್ಕ್ ಬಳಸುವುದು ಹೇಗೆ?
- ಕ್ಲೇಯನ್ನು ನೀರು ಅಥವಾ ರೋಸ್ ವಾಟರ್ ಜತೆ ಕಲೆಸಿ.
- ನಂತರ ಮುಖದ ಮೇಲೆ ಹಚ್ಚಿ 10 ನಿಮಿಷ ಬಿಡಿ.
- ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ.
ಕ್ಲೇ ಬಾತ್
ಇದನ್ನು ಮೈ ಪೂರ್ತಿ ಹಚ್ಚಿ ಅರ್ಧಗಂಟೆಯ ಬಳಿಕ ಸ್ನಾನ ಮಾಡಿ, ಇದರಿಂದ ಸ್ನಾಯುಗಳು ವಿಶ್ರಾಂತಿಯನ್ನು ಪಡೆಯುವುದು, ದೇಹದಲ್ಲಿ ಹುರುಪು ಮೂಡುವುದು.