ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ ಬೀಜವನ್ನು ಸೇವನೆ ಮಾಡಿ!

ಬೇಸಿಗೆ ಕಾಲದಲ್ಲಿ ಕಂಡು ಬರುವ ಮಧ್ಯಾಹ್ನದ ಮಟ ಮಟ ಬಿಸಿಲು, ಎಂತಹ ಸದೃಢ ಆರೋಗ್ಯ ಹೊಂದಿರುವವರನ್ನು ಕೂಡ, ಒಂದು ಕ್ಷಣಕ್ಕೆ ಅವರನ್ನು ಹೈರಾಣಾಗಿಸಿ ಬಿಡುತ್ತದೆ! ಈ ಸಮಯದಲ್ಲಿ ವಿಪರೀತ ಬಾಯಾರಿಕೆ ಒಂದು ಕಡೆಯಾದರೆ, ಉರಿ ಬಿಸಿಲಿನಿಂದ, ಆಯಾಸ, ಸುಸ್ತು, ವಿಪರೀತ ಬೆವರುವಿಕೆ ಕೂಡ ಮನುಷ್ಯರನ್ನು ಹಿಂಡಿಹಿಪ್ಪೆ ಮಾಡಿಬಿಡುತ್ತದೆ.

ಇನ್ನು ಬಿಸಿಲ ಝಳಕ್ಕೆ ದೇಹದಲ್ಲಿ ಬೆವರುವಿಕೆ ಸಮಸ್ಯೆ ಅತಿಯಾಗಿ ಕಂಡು ಬರುವುದರಿಂದ, ದೇಹದಲ್ಲಿ ನೀರಿನಾಂಶ ಕೊರತೆ ಉಂಟಾಗಿ, ನಿರ್ಜಲೀಕರಣ ಸಮಸ್ಯೆ ಕೂಡ ಕಂಡು ಬರಲು ಶುರುವಾಗುತ್ತದೆ. ಆದರೆ ಈ ಸಮಯದಲ್ಲಿ ಮನಸ್ಸು ಕೃತಕ ಸಿಹಿ ಅಂಶ ಇರುವ ತಂಪು ಪಾನೀಯ ಗಳ ಕಡೆಗೆ ಹೆಚ್ಚು ಒಲವು ತೋರುವುದರಿಂದ, ಆದಷ್ಟು ಇದರಿಂದ ದೂರವಿದ್ದು, ಕೆಲವೊಂದು ನೈಸರ್ಗಿಕ ಪಾನೀಯಗಳನ್ನು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

ಜೀರಿಗೆ

ಪ್ರತಿನಿತ್ಯದ ಅಡುಗೆಯಲ್ಲಿ ಬಳಸುವ ಈ ಜೀರಿಗೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಹೆಚ್ಚು- ಕಮ್ಮಿ ಎಲ್ಲರಿಗೂ ಗೊತ್ತೇ ಇದೆ. ದೇಹವನ್ನು ತಂಪಾಗಿಡುವ ಎಲ್ಲಾ ಗುಣ ಲಕ್ಷಣಗಳನ್ನು ಹೊಂದಿರುವ ಈ ಪುಟ್ಟ ಕಾಳಿನಲ್ಲಿ, ಕೆಲ ವೊಂದು ಬಗೆಯ ಅನಾರೋಗ್ಯವನ್ನು ದೂರವಿಡುವ ಎಲ್ಲಾ ಗುಣಲಕ್ಷಣಗಳು ಕೂಡ ಇದರಲ್ಲಿ ಕಂಡುಬರುತ್ತದೆ.

ತನ್ನಲ್ಲಿ ಹೇರಳವಾಗಿ ನಾರಿನಾಂಶವನ್ನು ಹೊಂದಿರುವ ಈ ಪುಟ್ಟಕಾಳು, ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಅಚ್ಚುಕ ಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆಯುರ್ವೇದದಲ್ಲಿ ಕೂಡ ಇದೊಂದು ಆರೋಗ್ಯಕಾರಿ ಪಾನೀಯ ಎಂದು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಇದಕ್ಕಾಗಿ ಎರಡು ಟೇಬಲ್ ಚಮಚ ಆಗುವಷ್ಟು ಜೀರಿಗೆಯನ್ನು ರಾತ್ರಿ ಪೂರ್ತಿ ನೆನೆಸಿಟ್ಟು, ಮರುದಿನ ಕೊಂಚ ಬೆಲ್ಲ ಸೇರಿಸಿ, ಬಾಯಾರಿಕೆ ಆದಾಗ ಕುಡಿಯುತ್ತಾ ಬಂದರೆ, ದೇಹವು ತಂಪಾಗಿರುವುದು, ಆರೋಗ್ಯಕ್ಕೂ ಒಳ್ಳೆಯದು.

ಕೊತ್ತಂಬರಿ ಬೀಜ

ಬೆಳಿಗ್ಗೆ ಕೊತ್ತಂಬರಿ ನೀರನ್ನು  ಕಲ್ಲುಸಕ್ಕರೆಯೊಂದಿಗೆ ಕುಡಿದರೆ, ಅದು ದೇಹದಲ್ಲಿ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ನಿಮಗೆ ಮೂತ್ರವಿಸರ್ಜನೆಯ ಸಮಯದಲ್ಲಿ ಬರ್ನಿಂಗ್ ಸೆನ್ಸೇಶನ್, ಕೈ ಮತ್ತು ಕಾಲುಗಳ ಕಾಲ್ಬೆರಳುಗಳಲ್ಲಿ ಉರಿ, ಆಮ್ಲೀಯತೆ ಸಮಸ್ಯೆಗಳು, ಹೊಟ್ಟೆಯ ಕಿರಿಕಿರಿ ಸಮಸ್ಯೆ ಹೊಂದಿದ್ದರೆ, ಅಂತಹ ಸಂದರ್ಭದಲ್ಲಿ ಕೊತ್ತಂಬರಿ ನೀರು ಸೇವಿಸೋದು ಉತ್ತಮ.

ಕಾಮಕಸ್ತೂರಿ ಬೀಜ

ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಹಲವರು ಇದನ್ನು ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ. ತೂಕ ನಿಯಂತ್ರಣ ಮಾಡುವ ಉದ್ದೇಶದಿಂದಲೂ ಇದನ್ನು ಸೇವಿಸುತ್ತಾರೆ.

ಕಾಮಕಸ್ತೂರಿ ಬೀಜವನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದು ಅಥವಾ ಇದರಿಂದ ಪಾನೀಯಗಳನ್ನು ತಯಾರಿಸಿ ಕುಡಿಯುವುದರಿಂದ ಬೇಸಿಗೆಯ ಸುಡುವ ಶಾಖದಿಂದ ದೇಹವನ್ನು ರಕ್ಷಿಸುತ್ತದೆ. ಇದು ನೈಸರ್ಗಿಕವಾಗಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಹೊಟ್ಟೆಗೂ ಹಿತವನ್ನುಂಟು ಮಾಡುತ್ತದೆ. ಇದನ್ನು ನಿಂಬೆಪಾನಕ, ಎಳನೀರು, ಮಿಲ್ಕ್‌ಶೇಕ್‌, ಮೊಸರಿನ ಜೊತೆ ಮಿಶ್ರಣ ಮಾಡಿ ಕುಡಿಯುವುದು ಉತ್ತಮ.

ಬೇಸಿಗೆಯಲ್ಲಿ ಮೆಂತೆ ಕಾಳು, ಸೋಂಪು ಕಾಳು, ಅಗಸೆ ಬೀಜ ವನ್ನು ಸೇವನೆ ಮಾಡಿದರೆ ದೇಹ ತಂಪಾಗಿರುತ್ತದೆ.

Related Post

Leave a Comment