ಧಾರ್ಮಿಕ ಗ್ರಂಥಗಳಲ್ಲಿ ದೇವರ ಪೂಜೆ ವಿಧಾನದ ಕುರಿತು ಕೆಲವು ನಿಯಮಗಳನ್ನು ಸೂಚಿಸಲಾಗಿದೆ. ಅದರಲ್ಲಿ ಪೂಜೆಗೆ ಬಳಸು ಸಾಮಾಗ್ರಿ ಬಗ್ಗೆ ಕೂಡ ಮಾಹಿತಿ ನೀಡಲಾಗಿದೆ. ಇದರಲ್ಲಿ ಪೂಜೆಯಲ್ಲಿ ಬಳಸುವ ಪಾತ್ರೆಗಳ ಬಗ್ಗೆಯೂ ವಿಶೇಷ ಗಮನವನ್ನು ನೀಡಬೇಕು. ಸಾಮಾನ್ಯವಾಗಿ ಪೂಜೆಯ ಸಮಯದಲ್ಲಿ ಯಾವ ಲೋಹದ ಪಾತ್ರೆಗಳನ್ನು ಬಳಸಬೇಕು ಎಂದು ನಮಗೆ ತಿಳಿದಿರುವುದಿಲ್ಲ. ಆದ್ದರಿಂದ ಪೂಜೆಯಲ್ಲಿ ಯಾವ ಲೋಹವನ್ನು ಬಳಸುವುದು ಶುಭವೆಂದು ಪರಿಗಣಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ
ಹಿಂದೂ ಪುರಾಣಗಳಲ್ಲಿ, ತಾಮ್ರವನ್ನು ಶುದ್ಧ ಲೋಹವೆಂದು ಪರಿಗಣಿಸಲಾಗುತ್ತದೆ. ತಾಮ್ರವು ದೇವರಿಗೆ ತುಂಬಾ ಪ್ರಿಯವಾಗಿದೆ ಎಂಬ ನಂಬಿಕೆ ಇದೆ. ಆದ್ದರಿಂದ ಯಾವುದೇ ದೇವರ ಪೂಜೆ ಮಾಡುವಾಗ ತಾಮ್ರದ ಪಾತ್ರೆಗಳನ್ನು ಮಾತ್ರ ಬಳಸಬೇಕು. ಪೂಜೆಯ ಸಮಯದಲ್ಲಿ ಬೆಳ್ಳಿಯಿಂದ ಮಾಡಿದ ಪಾತ್ರೆಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.
ಬೆಳ್ಳಿಯು ಚಂದ್ರನ ದೇವರನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಚಂದ್ರನ ದೇವರ ಪೂಜೆಯನ್ನು ಬೆಳ್ಳಿಯ ಪಾತ್ರೆ ಬಳಕೆ ಮಾಡಬಹುದು, ಆದರೆ ಇತರ ಪೂಜಾ ಗ್ರಂಥಗಳಲ್ಲಿ ಬೆಳ್ಳಿಯ ಬಳಕೆಯನ್ನು ನಿಷೇಧಿಸಲಾಗಿದೆ. ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಲು ಬೆಳ್ಳಿಯ ಪಾತ್ರೆಗಳನ್ನು ಬಳಸಲಾಗುವುದಿಲ್ಲ. ಆದುದರಿಂದ ಪೂಜೆಯ ಸಮಯದಲ್ಲಿ ಬಳಸುವುದಿಲ್ಲ
ಹಿಂದೂ ಧರ್ಮದಲ್ಲಿ ಪೂಜೆಯ ಸಮಯದಲ್ಲಿ ಮಡಕೆಯನ್ನು ಎಂದಿಗೂ ಬಳಸಬಾರದು. ಸ್ಟೀಲ್ ಪಾತ್ರೆಗಳನ್ನು ಕೂಡ ಬಳಕೆ ಮಾಡದಿರುವುದು ಒಳಿತು.
ಕಬ್ಬಿಣದ ತುಕ್ಕು ಹಿಡಿಯುವುದರಿಂದ, ಇದು ಶುದ್ಧ ಲೋಹ ಎಂದು ತಿಳಿದಿಲ್ಲ. ಆದ್ದರಿಂದ, ಯಾವುದೇ ಪೂಜೆಯಲ್ಲಿ ಕಬ್ಬಿಣದ ಪಾತ್ರೆಗಳ ಬಳಕೆಯನ್ನು ನಿಷೇಧಿಸಲಾಗಿದೆ..
ಕಬ್ಬಿಣವು ಶನಿ ದೇವನ ಜೊತೆಯಲ್ಲಿ ಕಂಡುಬರುತ್ತದೆ. ಆದ್ದರಿಂದ ಶನಿ ದೇವರ ಪೂಜೆಯ ಸಮಯದಲ್ಲಿ ಕಬ್ಬಿಣದ ಪಾತ್ರೆಗಳನ್ನು ಬಳಸಬಹುದು. ಇದರ ಹೊರತಾಗಿ ಉಕ್ಕು, ಅಲ್ಯೂಮಿನಿಯಂ ಮೊದಲಾದ ಇತರ ಲೋಹಗಳನ್ನು ಪೂಜೆಯಲ್ಲಿ ಯಾವುದೇ ರೀತಿಯಲ್ಲಿ ಬಳಸಬಾರದು
ಸ್ಟೀಲ್ ಪಾತ್ರೆಗಳಂತಹ ಲೋಹಗಳನ್ನೂ ಸಹ ಕೇವಲ ಅಡುಗೆ ಮಾಡುವ ಉದ್ದೇಶಗಳಿಗಾಗಿ ಬಳಸಬಹುದು ಪೂಜೆಯ ಉದ್ದೇಶಗಳಿಗಾಗಿ ಅಲ್ಲ
ಹಿತ್ತಾಳೆ ಕಂಚಿನ ಲೋಹಕ್ಕೆ ವಿಶೇಷ ಮಾನ್ಯತೆ ಇದೆ. ಈ ಹಿನ್ನಲೆ ಈ ಲೋಹದ ಪಾತ್ರೆಗಳನ್ನು ಪೂಜೆಯಲ್ಲಿ ಬಳಕೆ ಮಾಡಬಹುದು