ಪ್ರತಿದಿನ ಅಡುಗೆ ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಲೇ ಇರುತ್ತೀವಿ. ಬೇರೆ ಬೇರೆ ರೀತಿಯ ಅಡುಗೆ ಮಾಡುವಾಗ ಒಂದೊಂದು ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತೀವಿ.ಚಕ್ರ ಮೊಗ್ಗನ್ನು ರುಚಿಗೆ ಮಾತ್ರವಲ್ಲ ಈ ಸಮಸ್ಸೆ ಇರುವವರು ಕೂಡ ಇದನ್ನು ಬಳಸಬಹುದು. ಚಕ್ರ ಮೊಗ್ಗು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಜೀರ್ಣ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಐದು ತುಂಬಾ ಒಳ್ಳೆಯದು.
ಅಧಿಕ ರಕ್ತದೊತ್ತಡ (ಹೈ ಬಿಪಿ) ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸ್ಟಾರ್ ಹೂವು ಸಹಾಯಕವಾಗಿದೆ ಎಂದು ಇತ್ತೀಚೆಗೆ ತಿಳಿದುಬಂದಿದೆ. ಇಷ್ಟೇ ಅಲ್ಲದೇ ಈ ಸ್ಟಾರ್ ಹೂವು ಉತ್ಕರ್ಷಣ ನಿರೋಧಕಗಳ ಜೊತೆಗೆ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇವು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ಕೊಲೆಸ್ಟ್ರಾಲ್, ಉರಿಯೂತ, ಸಂಧಿವಾತ, ಬ್ರಾಂಕೈಟಿಸ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಇದರಿಂದ ಗುಣಪಡಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಜೀರ್ಣಕಾರಿ ಸಮಸ್ಯೆ ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಈ ಸಮಸ್ಯೆಯನ್ನು ಸ್ಟಾರ್ ಹೂವಿನ ಮೂಲಕ ಪರಿಹಾರಿಸಿಕೊಳ್ಳಬಹುದು. ಇದನ್ನು ಅಡುಗೆಯಲ್ಲಿ ಬಳಸಿದರೆ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ.
ಲೈಂಗಿಕ ಆರೋಗ್ಯದ ಸಮಸ್ಯೆಯಿದ್ದರೆ ಸ್ಟಾರ್ ಹೂವು ತುಂಬಾ ಉಪಯುಕ್ತವಾಗಿದೆ. ಇದನ್ನು ಸೇವಿಸುವುದರಿಂದ ಪುರುಷರಲ್ಲಿ ಲೈಂಗಿಕ ಬಯಕೆ ಹೆಚ್ಚಾಗುತ್ತದೆ. ಈ ಹೂವಿನಿಂದ ಟೀ ಮಾಡಿಯೂ ಕುಡಿಯಬಹುದು. ಈ ಸಿಂಪಲ್ ಟೀ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.
ಒಂದು ಲೋಟದಲ್ಲಿ ಸ್ವಲ್ಪ ನೀರಿಗೆ ಸ್ಟಾರ್ ಹೂವು ಸೇರಿಸಿ. ಮರುದಿನ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ ಲೈಂಗಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು