ದಾನಗಳಲ್ಲಿ ಅತೀ ಶ್ರೇಷ್ಠವಾದ ದಾನ ನೇತ್ರಾದಾನ, ರಕ್ತದಾನ, ಅನ್ನದಾನ ಮತ್ತು ವಿದ್ಯಾದಾನ. ಈ ದಾನವನ್ನು ಮಾಡುವುದರಿಂದ ನಿಮ್ಮ ಜೀವನ ಉದ್ದಾರ ಆಗುವುದಲ್ಲದೆ ನಿಮ್ಮ ಮುಂದಿನ ಪೀಳಿಗೆಗೂ ಕೂಡ ದೇವರ ಆಶೀರ್ವಾದ ನಿಮಗೆ ಸಿಗುತ್ತದೆ.ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ದಾರಿದ್ರ ಬರುತ್ತಾದೆ. ಹಾಗಾಗಿ ಈ ನಾಲ್ಕು ವಸ್ತುಗಳನ್ನು ಯಾರೇ ಕೇಳಿದರು ಸಹ ದಾನ ಮಾಡಬೇಡಿ.
1, ಗಡಿಯಾರ
ಯಾವುದೇ ಕಾರಣಕ್ಕೂ ಗಡಿಯಾರನ್ನು ಉಡುಗೊರೆ ರೀತಿಯಲ್ಲಿ ಕೊಡಬಾರದು. ಏಕೆಂದರೆ ನಿಮ್ಮ ಒಳ್ಳೆಯ ಸಮಯವನ್ನು ಇನ್ನೊಬ್ಬರಿಗೆ ಕೊಟ್ಟಂತೆ ಆಗುತ್ತದೆ.ಗಡಿಯಾರ ಶ್ರೀ ಮಹಾಲಕ್ಷ್ಮಿ ಸಂಕೇತವಾಗಿದೆ.
2, ಕಸ ಪೊರಕೆ
ಪೊರಕೆಯನ್ನು ಮನೆ ಕೆಲಸ ಮಾಡುವವರಿಗೆ ದಾನವಾಗಿ ಕೊಡುತ್ತಾರೆ ಆದರೆ ಇದನ್ನು ಕೊಡುವುದರಿಂದ ನೀವು ನಿಮ್ಮ ಮನೆಯಲ್ಲಿ ಇರುವ ಲಕ್ಷ್ಮಿಯನ್ನು ಬೇರೆಯವರಿಗೆ ದಾನ ಕೊಟ್ಟಂತೆ ಆಗುತ್ತದೆ. ಹೊಸ ಪೊರಕೆ ಆಗಿರಲಿ ಅದನ್ನು ನಿಮ್ಮ ಮನೆಗೆ ತಂದ ಮೇಲೆ ಅದನ್ನು ಬೇರೆಯವರಿಗೆ ದಾನ ಕೊಡಬಾರದು ಮತ್ತು ಗುಡಿಸುವಾಗ ನಿಮ್ಮ ಮನೆಯ ಜನರು ಮಾತ್ರ ಈ ಪೊರಕೆಯನ್ನು ಗುಡಿಸಬಹುದು.ಹೊರಗಡೆ ಯಿಂದ ಬಂದ ಅತಿಥಿಗಳು ಈ ಪೊರಕೆಯಿಂದ ಗುಡಿಸಿದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಉದ್ಭವಿಸುತ್ತದೆ.
3, ಹರಿದ ಬಟ್ಟೆ
ಇನ್ನೊಂದು ಪ್ರಮುಖವಾದ ವಸ್ತು ಯಾವುದು ಎಂದರೆ ಬಟ್ಟೆ ಈ ಹರಿದ ಬಟ್ಟೆಯನ್ನು ದಾನ ಮಾಡಿದರೆ ನಿಮ್ಮ ಮನೆಯಲ್ಲಿ ದರಿದ್ರ ಆವರಿಸುವ ಸಂದರ್ಭಗಳು ಇರುತ್ತದೆ .
4, ಉಪ್ಪು
ಉಪ್ಪನ್ನು ಸಹಾ ಯಾರಿಗೂ ದಾನವಾಗಿ ಕೊಡಬೇಡಿ ಉಪ್ಪು ಆಗಲಿ ಉಪ್ಪಿನ ಕಾಯಿ ಆಗಲಿ ನಿಮ್ ಮನೆಯಲ್ಲಿ ಇರುವ ಖಾರದ ಪುಡಿ ಅಥವಾ ಮೆಣಸಿನ ಪುಡಿ ಸಹಾ ದಾನವಾಗಿ ಕೊಡಬಾರದು ಕೊಟ್ಟಲ್ಲಿ ನಿಮ್ಮ ಮನೆಯಲ್ಲಿ ದರಿದ್ರ ಆವರಿಸುವ ಸಂದರ್ಭ ಇರುತ್ತದೆ. ಈ ರೀತಿ ನೀವು ದಾನ ಮಾಡದೆ ಕೆಲವೊಂದು ವಸ್ತುಗಳನ್ನು ನಿರ್ಭಂಧ ಇರುವ ವಸ್ತುಗಳನ್ನು ದಾನವಾಗಿ ಕೊಡದೆ ಇದ್ದರೆ ಬಹಳ ಒಳ್ಳೆಯದು ಈ ರೀತಿಯಾಗಿ ನೀವು ಕೂಡ ಒಂದು ನಿಯಮ ಪಾಲಿಸಿ ನಿಮ್ಮ ಜೀವನವನ್ನು ಕೂಡ ಸುಖಮಯವಾಗಿ ಇರಿಸಿ.