ನಮ್ಮ ಹಿಂದೂ ಸಂಪ್ರದಾಯದಲ್ಲಿ ದೀಪರಾಧನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅಂದರೆ ಅಂಧಕಾರವನ್ನು ಹೋಗಲಾಡಿಸಿ ಬೆಳಕಿನ ಕಡೆಗೆ ಸಾಗುವ ಈ ಒಂದು ಸಂಕೇತವನ್ನು ಈ ಒಂದು ದೀಪರಾಧನೆ ಸಾರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಕೂಡ ದೇವರ ಪೂಜೆಗಳಲ್ಲಿ ದೀಪರಾಧನೇ ಪ್ರಧಾನವಾಗಿರುತ್ತದೆ. ಇದು ಕೂಡ ನಮ್ಮ ಜೀವನದ ಕತ್ತಲನ್ನು ದೂರ ಮಾಡಿ ಬೆಳಗಿನ ಸಾಗುವ ಅಂತಹ ಒಂದು ಮಾರ್ಗ ಎಂದು ನಂಬಲಾಗಿದೆ.
ಮಹಾಶಿವರಾತ್ರಿ ದಿನ ಮಹಾಶಿವನಿಗೆ ಬಹಳ ಪ್ರಿಯವಾದ ಬಹಳ ವಿಶೇಷವಾದ ದೀಪರಾಧನೆಗಳನ್ನು ಅರ್ಪಿಸುವುದರಿಂದ ಶಿವನ ಒಂದು ಸಂಪೂರ್ಣ ಫಲ ಲಭಿಸುವುದರ ಜೊತೆಗೆ ನಮ್ಮ ಜೀವನದಲ್ಲಿ ಇರುವ ಕತ್ತಲೆ ದೂರವಾಗುತ್ತದೆ ಮತ್ತು ಅಂಧಕಾರ ದೂರವಾಗುತ್ತದೆ. ನಮ್ಮ ಬದುಕು ಬೆಳಕಾಗುತ್ತದೆ ಎಂದು ನಂಬಲಾಗಿದೆ.
ಬೆಲ್ಲದ ದೀಪರಾಧನೆ
ಶಿವನಿಗೆ ಬೆಲ್ಲದ ದೀಪರಾಧನೆ ಮಾಡಿದರೆ ಶಿವನಿಗೆ ತುಂಬಾ ಇಷ್ಟವಾಗುತ್ತದೆ. ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಾಕಿ ಓಂ ಎಂದು ಬರೆದು. ಅದಕ್ಕೆ ಅರಿಶಿನ ಕುಂಕುಮ ಹಾಕಿ ಎರಡು ಹಚ್ಚು ಬೆಲ್ಲವನ್ನು ಹಾಕಿ ಬತ್ತಿ ತುಪ್ಪವನ್ನು ಹಾಕಿ ಬೆಲ್ಲದ ದೀಪರಾಧನೆ ಮಾಡಿ ಶಿವನಿಗೆ ಆರತಿ ಮಾಡುವುದರಿಂದ ಜೀವನದಲ್ಲಿ ಅಂಧಕಾರ ದೂರವಾಗಿ ಕಷ್ಟಗಳು ದೂರವಾಗುತ್ತದೆ. ಶಿವನ ಅನುಗ್ರಹದಿಂದ ಜೀವನದಲ್ಲಿ ಸುಖ ನೆಮ್ಮದಿ ನೆಲೆಸುತ್ತದೆ.ಮಾರನೇ ದಿನ ಈ ಒಂದು ಬೆಲ್ಲವನ್ನು ಹಸುವಿಗೆ ನೀಡುವುದು ಬಹಳ ಒಳ್ಳೆಯದು.