ಇಂದು ಅನೇಕ ಜನರು ಸಂಧಿವಾತ ಸಮಸ್ಸೆಯಿಂದ ಬಳಲುತ್ತಿದ್ದರೆ. ಇದಕ್ಕೆ ಮುಖ್ಯ ಕಾರಣಕ್ಕೂ ಯುರಿಕ್ ಆಮ್ಲದ ಶೇಖರಣೆ. ಯೂರಿಕ್ ಆಮ್ಲವು ರಕ್ತದಲ್ಲಿನ ತ್ಯಾಜ್ಯ ಉತ್ಪನ್ನವಾಗಿದೆ. ಹೆಚ್ಚಿದ ಯೂರಿಕ್ ಆಮ್ಲದ ಮಟ್ಟವು ಪ್ಯೂರಿನ್ ಸಮೃದ್ಧ ಆಹಾರಗಳ ಅತಿಯಾದ ಸೇವನೆ, ಅಧಿಕ ತೂಕ, ಮಧುಮೇಹ ಕಾಯಿಲೆ, ಕೆಲವು ಮೂತ್ರವರ್ಧಕ ಔಷಧಗಳು ಮತ್ತು ಅತಿಯಾದ ಮದ್ಯಪಾನ ಯೂರಿಕ್ ಆಮ್ಲ ಹೆಚ್ಚಿಸಲು ಪ್ರಮುಖ ಕಾರಣಗಳು ಆಗಿವೆ. ಹೆಚ್ಚು ಬಿಯರ್, ಆಲ್ಕೋಹಾಲ್, ಹಿಟ್ಟು ಅಥವಾ ಮಾಂಸ ಬಳಸಿದರೆ ನೀವು ಈ ಸಮಸ್ಯೆ ಎದುರಿಸಬಹುದು.
ಯೂರಿಕ್ ಆಮ್ಲವನ್ನು ದೇಹದಿಂದ ತೆಗೆದು ಹಾಕಲಾಗಿದ್ದರೂ ಸಹ ಕೆಲವೊಮ್ಮೆ ಮೂತ್ರಪಿಂಡಗಳು ಅದನ್ನು ಮೂತ್ರದ ಮೂಲಕ ತೆಗೆದು ಹಾಕಲು ಸಾಧ್ಯ ಆಗಿರುವುದಿಲ್ಲ
ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಯೂರಿಕ್ ಆಮ್ಲದ ಸಾಮಾನ್ಯ ವ್ಯಾಪ್ತಿ ಪುರುಷರಲ್ಲಿ 2.5 ರಿಂದ 7.0 mg/dL ಮತ್ತು ಮಹಿಳೆಯರಲ್ಲಿ 1.5 ರಿಂದ 6.0 mg/dL ಆಗಿರಬೇಕು. ಇದರ ಮಟ್ಟವು ಪುರುಷರಲ್ಲಿ 7.0 mg/dl ಮತ್ತು ಮಹಿಳೆಯರಲ್ಲಿ 6.0 mg/dl ಇದ್ದರೆ ಇದು ಆರೋಗ್ಯಕ್ಕೆ ಉತ್ತಮ.
ಬಿಯರ್ ಯೂರಿಕ್ ಆಮ್ಲ ಹೆಚ್ಚಿಸಬಹುದು
ನೀವು ಅತೀಹೆಚ್ಚು ಬಿಯರ್ ಕುಡಿಯುತ್ತಿದ್ದರೆ ನಿಮ್ಮ ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಎನ್ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸಂಶೋಧನೆಯಲ್ಲಿ ಒಳಗೊಂಡಿರುವ ಹೆಚ್ಚಿನ ಗೌಟ್ ರೋಗಿಗಳು ಹೆಚ್ಚು ಬಿಯರ್ ಅಥವಾ ಆಲ್ಕೋಹಾಲ್ ಸೇವಿಸಿರುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ. ಬಿಯರ್ನಲ್ಲಿ ಪ್ಯೂರಿನ್ಗಳು ಅಧಿಕವಾಗಿ ಇರುವುದೇ ಇದಕ್ಕೆ ಕಾರಣ.
ಕೆಲವು ಮೂತ್ರವರ್ಧಕ ಔಷಧಗಳು, ಹೆಚ್ಚು ಮದ್ಯಪಾನ, ಜೆನೆಟಿಕ್ಸ್ ಅನುವಂಶಿಕ ಕಾಯಿಲೆ, ಹೈಪೋಥೈರಾಯ್ಡಿಸಮ್, ಬೊಜ್ಜು, ಸೋರಿಯಾಸಿಸ್, ಪ್ಯೂರಿನ್ಗಳಲ್ಲಿ ಸಮೃದ್ಧವಾಗಿರುವ ಆಹಾರ ಹೆಚ್ಚು ತಿನ್ನುವುದು, ಮೂತ್ರಪಿಂಡ ವೈಫಲ್ಯ ಯೂರಿಕ್ ಆಮ್ಲದ ಹೆಚ್ಚಳಕ್ಕೆ ಕಾರಣ ಆಗುತ್ತದೆ.
ಯೂರಿಕ್ ಆಮ್ಲದ ಹೆಚ್ಚಳವಿದ್ದಾಗ ಈ ರೋಗಲಕ್ಷಣಗಳು ಕಂಡು ಬರುತ್ತವೆ
ಕೀಲು ನೋವು, ಊದಿಕೊಂಡ ಕೀಲುಗಳು, ಕೀಲುಗಳ ಸ್ಪರ್ಶಿಸಲು ಬಿಸಿಯಾವಗುವುದು, ಕೀಲುಗಳ ಸುತ್ತಲಿನ ಚರ್ಮದ ಹೊಳೆಯುವ ಬಣ್ಣ, ಬೆನ್ನು ನೋವು, ನೋವು, ಆಗಾಗ್ಗೆ ಮೂತ್ರ ವಿಸರ್ಜನೆ, ವಾಂತಿ ಅಥವಾ ವಾಕರಿಕೆ ರೋಗ ಲಕ್ಷಣಗಳು ಕಂಡು ಬರುತ್ತವೆ.