ಹೆಚ್ಚಾಗಿ ಅಡುಗೆಯಲ್ಲಿ ಇಂಗು ಬಳಕೆ ಮಾಡುವುದು ಆಹಾರಕ್ಕೆ ರುಚಿ ನೀಡಲು ಹಾಗೂ ಅಸಿಡಿಟಿಯಂತಹ ಸಮಸ್ಯೆಗಳನ್ನು ದೂರ ಮಾಡಲು. ಬೇಳೆಸಾರು, ಸಾಂಬಾರು ಮತ್ತು ಕೆಲವೊಂದು ತರಕಾರಿ ಪದಾರ್ಥಗಳಿಗೆ ಇಂಗು ಹಾಕುವರು.ಇದು ರುಚಿ ಹಾಗೂ ಸುವಾಸನೆ ನೀಡುವುದು. ಕೆಲವರು ಉಪ್ಪಿನಕಾಯಿ ತಯಾರಿಸುವ ವೇಳೆ ಕೂಡ ಇಂಗು ಬಳಕೆ ಮಾಡುವರು. ಆಹಾರಕ್ಕೆ ಇದನ್ನು ಸೇರ್ಪಡೆ ಮಾಡಿದರೆ ಅದರಿಂದ ಸಂಪೂರ್ಣ ದೇಹಾರೋಗ್ಯವನ್ನು ಕಾಪಾಡಬಹುದು ಮಾತ್ರವಲ್ಲದೆ, ಹಲವಾರು ರೀತಿಯ ಆರೋಗ್ಯ ಲಾಭಗಳು ಇದರಿಂದ ಸಿಗುವುದು.
ಅಜೀರ್ಣ ಹಾಗೂ ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳ ನಿವಾರಣೆ ಮಾಡಲು ಹಿಂದಿನಿಂದಲೂ ಇಂಗನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ.ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಆಂಟಿಆಕ್ಸಿಡೆಂಟ್ ಗುಣಗಳಿದ್ದು, ಹೊಟ್ಟೆಗೆ ಶಮನ ನೀಡುವುದು, ಗ್ಯಾಸ್ ನಿವಾರಿಸುವುದು, ಕರುಳಿನ ಹುಳದ ಸಮಸ್ಯೆ ನಿವಾರಿಸುವುದು ಮತ್ತು ಐಬಿಎಸ್ ಸಮಸ್ಯೆಯನ್ನು ತಗ್ಗಿಸುವುದು.
ಋತುಚಕ್ರದ ಸಂದರ್ಭದಲ್ಲಿ ಕಂಡುಬರುವಂತಹ ಸ್ನಾಯು ಸೆಳೆತ, ಅನಿಯಮಿತ ಋತುಚಕ್ರ ಹಾಗೂ ಇತರ ಸಮಸ್ಯೆಗಳಿಗೆ ಇದನ್ನು ಬಳಸಬಹುದು. ಇದರ ಹೊರತಾಗಿ ಇದು ಕ್ಯಾಂಡಿಡಾ ಸೋಂಕಿನಿಂದಲೂ ಪರಿಹಾರ ನೀಡುವುದು.ಪುರುಷರಲ್ಲಿ ಕಂಡುಬರುವಂತಹ ಶೀಘ್ರ ಸ್ಖಲನ ಇತ್ಯಾದಿ ಲೈಂಗಿಕ ಸಮಸ್ಯೆಗಳನ್ನು ಇಂಗು ದೂರ ಮಾಡುವುದು.
ಒಂದು ಚಿಟಿಕೆ ಇಂಗನ್ನು ನೀವು ಆಹಾರ ತಯಾರಿಕೆ ವೇಳೆ ಬಳಕೆ ಮಾಡಿದರೆ, ಅದರಿಂದ ಹಲವಾರು ವಿಧದ ಸಮಸ್ಯೆಗಳು ದೂರವಾಗುವುದು.ಇದರ ಹೊರತಾಗಿ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಇಂಗು ಹಾಕಿಕೊಂಡು ಕುಡಿದರೆ ಕಾಮಾಸಕ್ತಿ ವೃದ್ಧಿಸುವುದು.ಉತ್ತೇಜಕ ಗುಣ ಹೊಂದಿರುವಂತಹ ಇದು ಕಫವನ್ನು ಬಿಡುಗಡೆ ಮಾಡುವುದು ಮತ್ತು ಎದೆ ಕಟ್ಟುವಿಕೆ ಸಮಸ್ಯೆ ನಿವಾರಿಸುವುದು. ಒಣ ಕೆಮ್ಮು, ಉಬ್ಬಸ ಮತ್ತು ಇತರ ಉಸಿರಾಟದ ಸಮಸ್ಯೆಯನ್ನು ದೂರ ಮಾಡಲು ಇಂಗು, ಜೇನುತುಪ್ಪ ಮತ್ತು ಶುಂಠಿ ಮಿಶ್ರಣ ಸೇವನೆ ಮಾಡಿ.
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬೇಕಾದರೆ ಆಗ ನೀವು ಪ್ರತಿನಿತ್ಯವೂ ಇಂಗಿನ ಬಳಕೆ ಮಾಡಬೇಕು. ಇದು ಮೇದೋಗ್ರಂಥಿಗಳನ್ನು ಉತ್ತೇಜಿಸುವುದು ಮತ್ತು ಹೆಚ್ಚು ಇನ್ಸುಲಿನ್ ಬಿಡುಗಡೆ ಮಾಡಲು ಸಹಕರಿಸುವುದು.ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಕುಸಿಯುವುದು. ಇದರ ಹೊರತಾಗಿ ಕೆಲವು ಆಹಾರಗಳು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಕರಿಯಾಗಿದೆ.
ಇಂಗಿನಲ್ಲಿ ಇರುವಂತಹ ಕೂಮರಿನ್ ಎನ್ನುವ ಅಂಶವು ರಕ್ತ ಸಂಚಾರವನ್ನು ಉತ್ತಮ ಪಡಿಸುವುದು ಮತ್ತು ರಕ್ತವನ್ನು ತೆಳುವಾಗಿಸಿ, ರಕ್ತ ಹೆಪ್ಪುಗಟ್ಟದಂತೆ ತಡೆಯುವುದು.ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು.ಋತುಚಕ್ರ, ಹಲ್ಲುನೋವು, ಮೈಗ್ರೇನ್ ಮತ್ತು ತಲೆನೋವು ನಿವಾರಣೆಗೆ ಇಂಗು ತುಂಬಾ ಸಹಕಾರಿ. ಇದರಲ್ಲಿ ಪರಿಣಾಮಕಾರಿ ಆಂಟಿಆಕ್ಸಿಡೆಂಟ್ ಗಳಿವೆ ಮತ್ತು ನೋವು ನಿವಾರಣೆ ಮಾಡಲು ಸಹಕಾರಿ.
ಇಂಗನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ಅದರಿಂದ ತಲೆನೋವು ಮತ್ತು ಮೈಗ್ರೇನ್ ಕಡಿಮೆ ಆಗುವುದು. ಹಲ್ಲು ನೋವು ಇದ್ದರೆ ಆಗ ಇಂಗಿನ ದಪ್ಪಗಿನ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಲಿಂಬೆರಸ ಹಾಕಿ ಹಲ್ಲಿಗೆ ಇಟ್ಟುಬಿಡಬೇಕು.
ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿನ ಫ್ರೀ ರ್ಯಾಡಿಕಲ್ ನಿಂದ ರಕ್ಷಣೆ ನೀಡುವುದು.
ಇದು ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುವುದು. ಕ್ಯಾನ್ಸರ್ ವಿರೋಧಿ ಗುಣ ಹೊಂದಿರುವ ಇಂಗು ಕ್ಯಾನ್ಸರ್ ಗಡ್ಡೆಗಳು ಬೆಳೆಯದಂತೆ ತಡೆಯುವುದು ಹಾಗೂ ಅದರಿಂದ ರಕ್ಷಣೆ ನೀಡುವುದು.ಪ್ರಬಲ ಉರಿಯೂತ ಶಮನಕಾರಿ ಗುಣ ಹೊಂದಿರುವಂತಹ ಇಂಗು ಚರ್ಮದ ರಕ್ಷಣೆ ಮಾಡುವುದು. ಇದು ಚರ್ಮದ ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡುವುದು ಹಾಗೂ ಸುಟ್ಟ ಚರ್ಮಕ್ಕೂ ಇದು ಒಳ್ಳೆಯದು.
ಇದನ್ನು ಚರ್ಮಕ್ಕೆ ಹಚ್ಚಿಕೊಂಡರೆ ಆಗ ತಂಪಾದ ಅನುಭವ ನೀಡುವುದು. ಇದು ಚರ್ಮದಲ್ಲಿ ಬ್ಯಾಕ್ಟೀರಿಯಾ ಬೆಳೆದಂತೆ ತಡೆಯುವುದು.ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚ ಇಂಗು ಹಾಕಿ ಮತ್ತು ಇದನ್ನು ಕಲಸಿಕೊಂಡು ಸೇವನೆ ಮಾಡಿದರೆ ಅದರಿಂದ ಹೊಟ್ಟೆಗೆ ಪರಿಹಾರ ಸಿಗುವುದು.
ಸಣ್ಣ ತುಂಡುಗಳನ್ನು ಮಜ್ಜಿಗೆಗೆ ಹಾಕಿಕೊಂಡು ಕೂಡ ಕುಡಿಯಬಹುದು.ಇಂಗನ್ನು ನೀರಿನಲ್ಲಿ ಕರಗಿಸಿ ಮತ್ತು ಅದರಲ್ಲಿ ಬಟ್ಟೆ ಅದ್ದಿಕೊಂಡು ಅದು ಹುದುಗು ಬರಲು ಬಿಡಿ.ಇದನ್ನು ಅಡುಗೆಗೆ ಬಳಕೆ ಮಾಡಿದರೆ ಅದರಿಂದ ರುಚಿ ಹಾಗೂ ಸುವಾಸನೆಯು ಹೆಚ್ಚಾಗುವುದು.