ಅಕ್ಷಯ ತೃತೀಯ ಪ್ರಯುಕ್ತ ಶುಭ ಮುಹೂರ್ತಗಳನ್ನು ತಿಳಿಸಿಕೊಡುತ್ತೇವೆ.ಈ ಬಾರಿ ಶುಕ್ರವಾರ ಮೇ 10ನೇ ತಾರೀಕಿ ಬಂದಿರುವುದು. ಅಕ್ಷಯ ತೃತೀಯವನ್ನು ಅಬುಜ ಮುಹೂರ್ತ ಎಂದು ಕರೆಯಲಾಗುತ್ತದೆ. ಅಬುಜ ಮುಹೂರ್ತ ಎಂದರೆ ಯಾವುದೇ ಶುಭ ಮುಹೂರ್ತಗಳನ್ನು ನೋಡದೆ ಅವತ್ತಿನ ದಿನ ಎಲ್ಲಾ ಶುಭ ಕಾರ್ಯಗಳನ್ನು ಮಾಡಬಹುದು. ಲಕ್ಷ್ಮಿ ದೇವಿಗೆ ಪ್ರಿಯವಾದ ಚಿನ್ನ ಬೆಳ್ಳಿ ಖರೀದಿ ಮಾಡುತ್ತೇವೆ. ಒಂದು ಪ್ಯಾಕೆಟ್ ಉಪ್ಪನ್ನು ತೆಗೆದುಕೊಂಡು ಬಂದು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿಕೊಂಡು ನಂತರ ಆಡುಗೆಗೆ ಬಳಸಬಹುದು. ಇದು ತುಂಬಾ ವಿಶೇಷವಾಗಿ ಫಲವನ್ನು ಕೊಡುತ್ತದೆ.
ಈ ಬಾರಿ 100 ವರ್ಷಗಳಲ್ಲಿ ಬಂದಿರುವ ಅಕ್ಷಯ ತೃತೀಯ ಇದು. ಗಜಕೇಸರಿ ರಾಜಯೋಗದಲ್ಲಿ ರೂಪುಗೊಳ್ಳುತ್ತಿದೆ. ಇದರ ಜೊತೆ 5 ಯೋಗಗಳು ರೂಪುಗೊಳ್ಳುತ್ತದೆ. ಶುಕ್ರದಿತ್ಯಯೋಗ, ಧನಯೋಗ, ಶಾಶಯೋಗ ಬಂದಿದೆ.
ಅಕ್ಷಯ ಮಾಸ ಬಂದಿರುವುದು ವೈಶಾಖಾ ಮಾಸ ಶುಕ್ಲ ಪಕ್ಷ ತೃತೀಯ ತಿಥಿ ಬೆಳಗಿನ ಜಾವಾ 4:18 ನಿಮಿಷಕ್ಕೆ ಪ್ರಾರಂಭವಾಗಿರುವುದು ಮತ್ತು ಬೆಳಗಿನ ಜಾವಾ 2:11 ಮುಕ್ತಯವಾಗುತ್ತದೆ. ಇದರಲ್ಲಿ ಶುಭ ಯೋಗ ಮೇ 10ನೇ ತಾರೀಕು ಬೆಳಗ್ಗೆ 5:33 ನಿಮಿಷದಿಂದ ಮಧ್ಯಾಹ್ನ 12:18 ನಿಮಿಷದವರೆಗೂನು ಮಂಗಳಕರವಾಗಿರುತ್ತದೆ. ಆದಷ್ಟು ನೀವು 10 ಗಂಟೆ ಒಳಗೆ ಪೂಜೆ ಮಾಡಿದರೆ ಒಳ್ಳೆಯದು. ಹೊಸ್ತಿಲು ಮತ್ತು ತುಳಸಿ ಮುಂದೆ ತುಪ್ಪದ ದೀಪವನ್ನು ಹಚ್ಚಿಡುವುದು ತುಂಬಾ ಒಳ್ಳೆಯದು. 101ರೂ ಇಟ್ಟು ಸಂಕಲ್ಪ ಮಾಡಿ ಪೂಜೆ ಮಾಡುತ್ತ ಬನ್ನಿ ಅದು ನಿಮಗೆ ಅಕ್ಷಯ ಆಗುತ್ತ ಹೋಗುತ್ತದೆ.