ರುದ್ರಾಭಿಷೇಕಕ್ಕೆ ತುಂಬಾನೇ ಮಹತ್ವವಿದೆ. ಇದು ನಿಮ್ಮ ಸುತ್ತಲಿರುವ ಋಣಾತ್ಮಕ ಶಕ್ತಿ ತೊಡೆದು ಹಾಕುತ್ತದೆ, ನಿಮ್ಮ ಸಂಕಲ್ಪ ನೆರವೇರಿಸುತ್ತದೆ. ರುದ್ರಾಭಿಷೇಕ ಮಾಡುವುದರಿಂದ ಶಿವನ ಮೆಚ್ಚುಗೆಗೆ ಪಾತ್ರರಾಗಬಹುದು. ರುದ್ರಾಭಿಷೇಕವನ್ನು ನೀವು ಮನೆಯಲ್ಲಿಯೇ ಮಾಡಬಹುದು, ರುದ್ರಾಭಿಷೇಕ ಮಾಡುವುದು ಹೇಗೆ? ರುದ್ರಾಭಿಷೇಕಕ್ಕೆ ಬೇಕಾದ ಸಾಮಗ್ರಿಗಳೇನು ಎಂದು ನೋಡೋಣ ಬನ್ನಿ: ರುದ್ರಾಭಿಷೇಕ ಯಾರು ಮಾಡಿದರೆ ಒಳ್ಳೆಯದು
- ಜೀವನದಲ್ಲಿ ತುಂಬಾ ಕಷ್ಟಗಳಿದ್ದರೆ, ಮನೆಯಲ್ಲಿ ನೆಮ್ಮದಿ ಇಲ್ಲದಿದ್ದರೆ ಈ ರುದ್ರಾಭಿಷೇಕ ಮಾಡುವುದರಿಂದ ಪರಿಹಾರ ಸಿಗುವುದು.
- ಮನೆಯ ಸದಸ್ಯರಿಗೆ ಆರೋಗ್ಯ ಸರಿಯಿಲ್ಲದಿದ್ದರೆ ರುದ್ರಾಭಿಷೇಕ ಮಾಡಿದರೆ ಒಳ್ಳೆಯದು.
- ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ರುದ್ರಾಭಿಷೇಕ ಮಾಡಿಸಿದರೆ ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಹೆಚ್ಚಾಗು ಸುಖ ಸಂಸಾರ ನಡೆಸುತ್ತಾರೆ.
- ಅಕಾಲಿಕ ಮೃತ್ಯ ತಡೆಗಟ್ಟಲು ರುದ್ರಾಭಿಷೇಕ ಮಾಡಲಾಗುವುದು.
ರುದ್ರಾಭಿಷೇಕ ಯಾವಾಗ ಮಾಡಬೇಕು?
ರುದ್ರಾಭಿಷೇಕಕ್ಕೆ ಸೋಮವಾರ ತುಂಬಾ ಶ್ರೇಷ್ಠವಾದ ದಿನ. ಏಕೆಂದರೆ ಸೋಮವಾರ ಶಿವನ ಪೂಜೆಗೆ ಮೀಸಲಾದ ದಿನ, ಈ ದಿನದಂದು ಶಿವನ ಮಂತ್ರಗಳನ್ನು ಹೇಳುತ್ತಾ ರುದ್ರಾಭಿಷೇಕ ಮಾಡಿಸಬೇಕು. ಇನ್ನು ಶಿವರಾತ್ರಿಯಂದು ರುದ್ರಾಭಿಷೇಕ ಮಾಡಿದರೆ ತುಂಬಾ ಒಳ್ಳೆಯದು. ಇನ್ನು ಶ್ರಾವಣ ಮಾಸದಲ್ಲಿ ಯಾವ ದಿನ ಬೇಕಾದರೂ ರುದ್ರಾಭಿಷೇಕ ಮಾಡಬಹುದು.
ರುದ್ರಾಭಿಷೇಕ ಪೂಜಾ ವಿಧಿಗಳೇನು?
- ರುದ್ರಾಭಿಷೇಕ ಪೂಜೆಯಲ್ಲಿ ಶಿವ, ಪಾರ್ವತಿ ಹಾಗೂ ಇತರೆ ದೇವತೆಗಳು, ನವಗ್ರಹಗಳಿಗೆ ಆಸನವನ್ನು ಸಿದ್ಧಪಡಿಸಬೇಕು.
- ಪೂಜೆಯನ್ನು ಗಣೇಶನ ಪೂಜೆಯೊಂದಿಗೆ ಪ್ರಾರಂಭಿಸಬೇಕು.
- ನಂತರ ಸಂಕಲ್ಪ ಕೈಗೊಳ್ಳಿ
- ಶಿವಲಿಂಗವನ್ನು ಬಲಿಪೀಠದ ಮೇಲೆ ಇರಿಸಬೇಕು.
- ಅಭಿಷೇಕ ಮಾಡಿದ ನೀರು, ಹಾಲು ಮುಂತಾದ ಸಾಮಗ್ರಿ ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು.
- ಅಭಿಷೇಕದ ಬಳಿಕ ಶಿವಲಿಂಗಕ್ಕೆ ಅಲಂಕಾರ ಮಾಡಿ, ಪೂಜೆಯನ್ನು ಮಾಡಿ ಆರತಿ ಮಾಡಬೇಕು.
- ಶಿವಲಿಂಗ ಅಭಿಷೇಕಕ್ಕೆ ಬಳಸಿದ ನೀರನ್ನು ಮನೆಯ ಮೇಲೆ, ಮನೆಯವರ ಮೇಲೆ ಸಿಂಪಡಿಸಿ
- ಈ ಪೂಜೆ ಮಾಡುವಾಗ ಓಂ ನಮಃ ಶಿವಾಯ ಎಂದು ಜಪಿಸುತ್ತಲೇ ಇರಿ. ಪೂಜೆಗೆ ಬೇಕಾದ ಸಾಮಗ್ರಿಗಳು ಕುಂಕುಮ ಪ್ಯಾಕೆಟ್ ಧೂಪ 2 ಲೀಟರ್ ಹಾಲು ಅರಿಶಿಣ ಪುಡಿ ಶ್ರೀಗಂಧ ಪೇಸ್ಟ್ ಕರ್ಪೂರ ಹೂಮಾಲೆ ಜೇನು ಮೊಸರು ರುದ್ರಾಭಿಷೇಕ ಪೂಜೆಯ ವಿಧಗಳು 6 ವಿಧದಲ್ಲಿ ರುದ್ರಾಭಿಷೇಕ ಪೂಜೆ ಮಾಡಲಾಗುವುದು.
- ಜಲ ಅಭಿಷೇಕ: ಜಲಾಭಿಷೇಕ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು.
- ಹಾಲಿನ ಅಭಿಷೇಕ: ದೀರ್ಘಾಯುಷ್ಯ ಸಿಗುವುದು
- ಜೇನು ತುಪ್ಪದ ಅಭಿಷೇಕ: ಜೀವನದಲ್ಲಿ ನೆಮ್ಮದಿ, ಸಂತೋಷ ಸಿಗಲಿದೆ
- ಪಂಚಾಮೃತದ ಅಭಿಷೇಕ: ಸಂಪತ್ತು, ಸಮೃದ್ಧಿ ಹೆಚ್ಚುವುದು
- ತುಪ್ಪದ ಅಭಿಷೇಕ: ಒಳ್ಳೆಯ ಆರೋಗ್ಯ ಸಿಗುವುದು
- ಮೊಸರಿನ ಅಭಿಷೇಕ: ಸಂತಾನಭಾಗ್ಯ ದೊರೆಯುವುದು ರುದ್ರಾಭಿಷೇಕದ ಪೂಜಾವಿಧಿಗಳು
- ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ
- ಶಿವಲಿಂಗಕ್ಕೆ ಅಲಂಕಾರ ಮಾಡಿ
- ಶಿವ ಲಿಂಗಕ್ಕೆ ಅಭಿಷೇಕ ಮಾಡುವಾಗ , ಅಲಂಕಾರ ಮಾಡುವಾಗ ಶಿವ ಮಂತ್ರಗಳನ್ನು ಪಠಣೆ ಮಾಡಿ.
- ಅಷ್ಟೋತ್ತರ ಶತನಾಮಾವಳಿ ಪಠಿಸಿ
- ಶ್ರೀ ರುದ್ರಂ ಪಠಣೆ ಮಾಡಿ.