ಈ ಎಲೆ ಎಲ್ಲಾದರೂ ಸಿಕ್ಕರೆ ಬಿಡಬೇಡಿ ಬಂಗಾರಕ್ಕಿಂತ ಬೆಲೆಯುಳ್ಳದ್ದು!

ಪಪ್ಪಾಯಿ ಎಲೆ ಡೆಂಗ್ಯೂಯಿಂದ ಹಿಡಿದು ಅನೇಕ ರೋಗಗಳಿಗೆ ರಾಮಬಾಣ ಈ ಪಪ್ಪಾಯಿ ಎಲೆ ಆದರೆ ಯಾವ ಸಮಸ್ಯೆ ಬಂದಾಗ ಹೇಗೆ ಬಳಸಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ.ಪಪ್ಪಾಯಿ ಹಣ್ಣು ಹೇಗೆ ಉತ್ತಮವೋ ಇದರ ಬೀಜ , ಎಲೆಗಳು ಅದಕ್ಕಿಂತ ಉತ್ತಮವಾಗಿದೆ.ಹೇಗೆಂದರೆ ಇವು ಡೆಂಗ್ಯೂ ಜ್ವರ , ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳಿಗೆ ಸಿದ್ಧೌಷಧದ ರೂಪದಲ್ಲಿ ಕೆಲಸ ಮಾಡುತ್ತದೆ.ವಿಶೇಷವಾಗಿ ಇದರ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪಪಾಯಿನ್ ಎಂಬ ಪೋಷಕಾಂಶ ಹಾಗೂ ಇತರ ಆಲ್ಕಲೈಡ್ ಗಳು ಮತ್ತು ಫಿನಾಲಿಕ್ ಸಂಯುಕ್ತಗಳು ದೇಹದಲ್ಲಿ ಪ್ರೋಟೀನ್ ಗಳನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ.

ಇತರ ಜೀರ್ಣಕ್ರಿಯೆಯ ತೊಂದರೆಗಳನ್ನು ನಿವಾರಿಸುತ್ತದೆ.ಇನ್ನೂ ಪಪ್ಪಾಯಿ ಎಲೆಯಲ್ಲಿರುವ ಕಾರ್ಪೆನ್ ಎಂಬ ಹೆಸರಿನ ಒಂದು ವಿಶಿಷ್ಟವಾದ ಆಲ್ಕಲೈಡ್ ಕ್ಯಾನ್ಸರ್ ಕಾಯಿಲೆಗೆ ನೀಡುವ ಔಷಧಿಗಳ ಅಡ್ಡ ಪರಿಣಾಮಗಳಿಂದ ರಕ್ಷಿಸುತ್ತದೆ.ಪಪ್ಪಾಯಿ ಎಲೆಯ ರಸ ಕಹಿಯಾಗಿರಬಹುದು ಆದರೆ ಇದರ ಗುಣಗಳು ಇನ್ನೂ ಬೇಕಾದಷ್ಟಿದೆ.ಹೆಚ್ಚಿನವರಿಗೆ ಪಪ್ಪಾಯಿ ಎಲೆಯ ರಸವನ್ನು ಹೇಗೆ ತಯಾರಿಸಬೇಕು ಎಂದು ತಿಳಿದಿಲ್ಲ ,ಇದು ತುಂಬಾ ಸುಲಭ .

ಪಪ್ಪಾಯಿ ಎಲೆಯ ರಸವನ್ನು ತೆಗೆಯಲು 1 ರಿಂದ 2 ಪಪ್ಪಾಯಿ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ ,ನೀರು ಹಾಕದೆ ರಸವನ್ನು ತೆಗೆದುಕೊಳ್ಳಿ ಬಳಿಕ ಶೋಧಿಸಿಕೊಂಡು ಪ್ರತಿ ದಿನ ಉಪಹಾರದ ನಂತರ ಒಂದು ಚಮಚ ಪಪ್ಪಾಯಿ ಎಲೆಯ ರಸವನ್ನು ಸೇವಿಸಿ.ಇನ್ನು ಈ ರಸ ಕಹಿಯಾಗಿರುತ್ತದೆ ಆದ್ದರಿಂದ ಇದನ್ನು ಕುಡಿದ ತಕ್ಷಣ ನೀರು ಕುಡಿಯುವುದು ಬೇಡ.ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ.ಇದು ನಿಮ್ಮ ದೇಹವನ್ನು ಇತರ ವೈರಸ್ಗಳ ವಿರುದ್ಧ ಹೋರಾಡಲು ಸಜ್ಜು ಗೊಳಿಸುತ್ತದೆ.ಇನ್ನು ಈ ರಸದ ಸೇವನೆಯಿಂದ ಡೆಂಗ್ಯೂ ಸಹಿತ ಯಾವೆಲ್ಲ ರೋಗಗಳನ್ನು ಹೋಗಲಾಡಿಸಬಹುದು ಎಂದು ತಿಳಿಯೋಣ ಬನ್ನಿ..

ಡೆಂಗ್ಯೂ ಜ್ವರಕ್ಕೆ ರಾಮಬಾಣ ಪಪ್ಪಾಯಿ ಎಲೆಯನ್ನು ಡೆಂಗ್ಯೂ ಜ್ವರಕ್ಕೆ ಬಳಸಲಾಗುತ್ತದೆ ಎಂದು ಸಾಮಾನ್ಯವಾಗಿ ನಮ್ಮೆಲ್ಲರಿಗೂ ತಿಳಿದಿರುತ್ತದೆ ಆದರೆ ಕೆಲವರಿಗೆ ಇದರ ಸರಿಯಾದ ಉಪಯೋಗದ ಬಗ್ಗೆ ಅರಿವಿಲ್ಲ.ಹೆಚ್ಚಿನ ಜ್ವರಗಳಿಗೆ ಹಿಂದಿನವರು ಗಿಡಮೂಲಿಕೆಗಳನ್ನು ಬಳಸಿಕೊಂಡು ಮನೆ ಮದ್ದು ಮಾಡುತ್ತಲಿದ್ದರೂ ಇದರಲ್ಲಿ ಬೇವು ,ತುಳಸಿ ,ಅಲೋವೆರಾ ,ಪುದೀನಾ ಇತ್ಯಾದಿಗಳು ಪರಿಣಾಮಕಾರಿಯಾಗಿ ಮನೆಮದ್ದಾಗಿ ಬಳಸಲಾಗುತ್ತಿತ್ತು. ಹೀಗೆ ಪಪ್ಪಾಯಿ ಎಲೆಗಳು ಕೂಡ ಡೆಂಗ್ಯೂ ಮತ್ತು ಮಲೇರಿಯಾವನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಪಪ್ಪಾಯಿ ಎಲೆಯ ರಸವನ್ನು ಕುಡಿದರೆ ಡೆಂಗ್ಯೂ ಕಡಿಮೆ ಮಾಡಬಹುದು ಎಂದು ಆಯುರ್ವೇದದಲ್ಲಿ ಕೂಡ ಹೇಳಲಾಗಿದೆ.

ಪಪ್ಪಾಯಿ ಎಲೆಯ ರಸವೂ ತುಂಬಾ ಕಹಿಯಾಗಿರುತ್ತದೆ ಆದರೆ ಇದು ದೇಹದಲ್ಲಿ ರಕ್ತ ಕಣಗಳನ್ನು ಹೆಚ್ಚಿಸಲು ತುಂಬಾನೇ ಸಹಾಯಕಾರಿ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಸುಮಾರು 8 ರಿಂದ 10 ಎಂಎಲ್ ಈ ರಸವನ್ನು ಪ್ರತಿದಿನ ಎರಡು ಬಾರಿ ಸೇವಿಸಿ.ಇದರಿಂದ ವಿಶೇಷವಾಗಿ ರಕ್ತದಲ್ಲಿ ಪೇಟ್ಲೇಟ್ ಸಂಖ್ಯೆ ಹೆಚ್ಚಾಗುತ್ತದೆ.ತನ್ಮೂಲಕ ಡೆಂಗ್ಯೂ ಜ್ವರವನ್ನು ನಿಯಂತ್ರಿಸಲು ಇದು ನೇರವಾಗಿಗುತ್ತದೆ.ಕೆಲವರು ಈ ರಸವನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯುತ್ತಾರೆ.ಈ ತಪ್ಪು ಮಾಡಲೇಬೇಡಿ ಈ ರಸವನ್ನು ಸೇವಿಸಿದ ತಕ್ಷಣ ನೀರು ಕುಡಿಯಬಾರದು.

  • ಮಲೇರಿಯಾ ಜ್ವರ ನಿವಾರಣೆಗೆ ಪಪ್ಪಾಯಿ ಎಲೆಯ ರಸ ಪ್ಲಾಸ್ಮೋಡಿಯಾಸ್ಟಿಕ್ ಎಂಬ ಗುಣವನ್ನು ಹೊಂದಿದೆ
    ಮತ್ತು ಇದು ಮಲೇರಿಯಾ ಜ್ವರವನ್ನು ನಿಯಂತ್ರಣದಲ್ಲಿಡುತ್ತದೆ. ಡೆಂಗ್ಯೂಗೆ ಚಿಕಿತ್ಸೆಯಂತೆ ಪಪ್ಪಾಯ ಎಲೆಯ ರಸವು ಮಲೇರಿಯಾ ರೋಗಿಗಳಿಗೂ ಕೂಡ ಉತ್ತಮ.
  • ಜೀರ್ಣಕ್ರಿಯೆಗೆ ಸಹಕಾರಿ ಪಪ್ಪಾಯಿ ಎಲೆಯಲ್ಲಿ ನಾರಿನ ಅಂಶ ಇದೆ ಮತ್ತು ಇದರಿಂದ ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ.
  • ಇದು ಮಲಬದ್ದತೆ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಉತ್ತಮಪಡಿಸುತ್ತದೆ.
  • ಲಿವರ್ನ ಆರೋಗ್ಯಕ್ಕೆ ಉತ್ತಮ ಪಪ್ಪಾಯಿ ಎಲೆಗಳಲ್ಲಿ ರಕ್ತವನ್ನು ಶುದ್ಧೀಕರಿಸುವ ಗುಣಗಳು ಇರುವ ಕಾರಣದಿಂದಾಗಿ ಇದು ಯಕೃತ್ ನ ಆರೋಗ್ಯಕ್ಕೆ ತುಂಬಾ ಸಹಕಾರಿ.
  • ಲಿವರ್ನ ಕ್ಷಮತೆಯನ್ನು ಕ್ಷೀಣಿಸುವ ಸೀರಿಯಾಸಿಸ್ , ಲಿವರ್ ಕ್ಯಾನ್ಸರ್ , ಕಾಮಾಲೆ ಮೊದಲಾದ ರೋಗಗಳನ್ನು ಗುಣಪಡಿಸುವ ಮೂಲಕ ಯಕೃತ್ನ ಆರೋಗ್ಯ ಮತ್ತು ಕ್ಷಮತೆಯನ್ನು ಹೆಚ್ಚಿಸುತ್ತದೆ.
  • ರಕ್ತದಲ್ಲಿ ಪ್ಲೇಟ್ಲೆಟ್ಗಳನ್ನು ಹೆಚ್ಚಿಸುತ್ತದೆ ಪಪ್ಪಾಯಿ ಎಲೆಯ ರಸಕ್ಕೆ ರಕ್ತದಲ್ಲಿರುವ ಪ್ಲೇಟ್ಲೆಟ್ಗಳ ಸಂಖ್ಯೆಯನ್ನು ಹೆಚ್ಚಿಸುವ ಗುಣ ಇದ್ದು ,ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾಗಿದ್ದರೆ ತಪ್ಪದೇ ಇದರ ರಸವನ್ನು ಕುಡಿಯಿರಿ.
  • ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತದೆ ಮಧುಮೇಹಿಗಳು ತಮ್ಮ ದೈನಂದಿನ ಆಹಾರದ ಭಾಗವಾಗಿ ಪಪ್ಪಾಯ ಎಲೆಯ ರಸವನ್ನು ಸೇವಿಸಬಹುದಾಗಿದೆ.ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ.
  • ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ ಈ ರಸದಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಹಾಗೂ ಹೃದಯ ಮತ್ತು ರಕ್ತ ಪರಿಚಲನೆಯ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡಲು ನೆರವಾಗುತ್ತದೆ.
  • ಋತುಚಕ್ರದ ದಿನಗಳಲ್ಲಿ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರ ಪೀರಿಯಡ್ಸ್ ದಿನಗಳಲ್ಲಿ ಹೊಟ್ಟೆ ನೋವಿನಿಂದ ಬಳಲುವವರು ಪಪ್ಪಾಯ ಎಲೆಯ ರಸವನ್ನು ಒಂದು ಚಮಚದಷ್ಟು ಕುಡಿದರೆ ನೋವು ಕಡಿಮೆಯಾಗುತ್ತದೆ.
  • ಚರ್ಮ ಮತ್ತು ಕೂದಲಿನ ಸಮಸ್ಯೆಗೆ ಪರಿಣಾಮಕಾರಿ. ಪಪ್ಪಾಯಿಯಲ್ಲಿ ರಸದಲ್ಲಿ ರಕ್ತಶುದ್ಧಿಕರಿಸುವ ಗುಣವಿದೆ.ಹೀಗಾಗಿ ಇದು ದೇಹದಲ್ಲಿ ಇರುವಂತಹ ವಿಷಕಾರಿ ಅಂಶ ಗಳನ್ನು ಹೊರ ಹಾಕುತ್ತದೆ ಮತ್ತು ಚರ್ಮದಲ್ಲಿ ಕಾಂತಿ ಬರುವಂತೆ ಮಾಡುತ್ತದೆ.
  • ಇನ್ನು ತಲೆಗೆ ಪಪ್ಪಾಯಿ ಎಲೆಯ ರಸದಿಂದ ಮಸಾಜ್ ಮಾಡಿದರೆ ತಲೆ ಹೊಟ್ಟು ಮತ್ತು ತಲೆ ತುರಿಕೆ ನಿವಾರಣೆಯಾಗುತ್ತದೆ. ಕೂದಲಿನ ಬುಡವು ಬಲಗೊಳ್ಳುತ್ತದೆ.
  • ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ ಪಪ್ಪಾಯಿ ಎಲೆಯ ರಸವು ಟ್ಯೂಮರ್ಗಳು ಉಂಟಾಗುವುದನ್ನು ತಡೆಯುತ್ತದೆ.ಪಪ್ಪಾಯಿ ಎಲೆಯಲ್ಲಿ ಇರುವ ಕ್ಯಾನ್ಸರ್ ನಿರೋಧಕ ಗುಣಗಳಿಂದ ಅದು ದೀರ್ಘ ಕಾಲದ ಮಹಿಳೊ ಮಾನೋಸೈಡ್ , ಲುಕೇಮಿಯಾ ವಿರುದ್ಧ ಹೋರಾಡುತ್ತದೆ.
  • ಪಪ್ಪಾಯಿ ಎಲೆಯ ನಿಯಮಿತ ಸೇವನೆಯ ಬಳಿಕ ಕ್ಯಾನ್ಸರ್ ರೋಗಗಳು ನಿಯಂತ್ರಣಕ್ಕೆ ಬಂದ ಹಲವಾರು ನಿದರ್ಶನಗಳಿವೆ.
  • ಸ್ತ ನ ಕ್ಯಾನ್ಸರ್ ,ಗರ್ಭ ಕಂಠದ ಕ್ಯಾನ್ಸರ್ ,ಶ್ವಾಸಕೋಶದ ಕ್ಯಾನ್ಸರ್ ,ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಗಳಿಗೂ ಪಪ್ಪಾಯಿ ಎಲೆಯ ರಸವು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿಕೊಟ್ಟಿದೆ.

ಧನ್ಯವಾದಗಳು.

Related Post

Leave a Comment