ಮನೆಯಲ್ಲಿ ಬಡತನ ಉಂಟಾಗಲು ಅನೇಕ ಕಾರಣಗಳಿವೆ ಅದರಲ್ಲಿ ಪ್ರಮುಖ ಕಾರಣಗಳನ್ನು ಮತ್ತು ಬಡತನ ಎದುರು ಆಗುವ ಮುನ್ನ ಸಿಗುವ ಸೂಚನೆ ಗಳು ಯಾವುವು ಎಂದು ತಿಳಿಯೋಣ ಬನ್ನಿ.ಆಚಾರ್ಯ ಚಾಣಕ್ಯ ರ ಪ್ರಕಾರ ಯಾವುದೇ ಕಾರಣಕ್ಕೂ ಯಾವುದೇ ಮರ ಗಿಡದ ಬುಡಕ್ಕೆ ನೀವು ಮೂತ್ರ ವಿಸರ್ಜನೆ ಮಾಡಬಾರದು.ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆಹಾಗಾಗಿ ಆದಷ್ಟು ಯಾವುದೇ ಕಾರಣಕ್ಕೂ ಮರಗಿಡಗಳಿರುವ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡದೆ ಶೌಚಾಲಯ ಬಳಸಿ.
ಮನೆಯಲ್ಲಿ ಮುರಿದ ಬಾಚಣಿಕೆಯನ್ನು ಇಡುವುದರಿಂದ ಸಹ ದಟ್ಟ ದರಿದ್ರ ಮನೆಗೆ ಆವರಿಸುತ್ತದೆ.ಮುರಿದ ಬಾಚಣಿಕೆಯಿಂದ ತಲೆ ಕೂದಲನ್ನು ಬಾಚುವುದರಿಂದ ಮನೆಯಲ್ಲಿ ಹಣಕಾಸಿನ ಸ್ಥಿತಿ ಹಾಗೆ ಒಂದೊಂದಾಗಿಯೇ ಕಡಿಮೆಯಾಗುತ್ತ ಹೋಗುತ್ತದೆ.ಹಾಗಾಗಿ ಮುರಿದಿರುವ ಬಾಚಣಿಕೆಯನ್ನು ಬಳಸದೆ ಹೊಸದಾಗಿ ಬಾಚಣಿಕೆಯನ್ನು ಕೊಂಡು ಬಳಸಿ.ಮನೆಯನ್ನು ಸ್ವಚ್ಚವಾಗಿಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ ಹಾಗೂ ಮನೆಯನ್ನು ಸ್ವಚ್ಛವಾಗಿ ಇಡದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ನಷ್ಟವುಂಟಾಗುತ್ತದೆ ,ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ.ಇನ್ನು ನಿಮ್ಮ ಕೈಲಾದಷ್ಟಾದರೂ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಇನ್ನೂ ಯಾವುದೇ ಕಾರಣಕ್ಕೂ ಉಗುರುಗಳನ್ನು ಹಲ್ಲಿನ ಸಹಾಯದಿಂದ ಕತ್ತರಿಸಿ ಬೇಡಿ.ಈ ರೀತಿ ಮಾಡುವುದರಿಂದ ಮಹಾಪಾಪಕ್ಕೆ ಗುರಿಯಾಗುತ್ತೀರಿ.ಉಗುರನ್ನು ಹಲ್ಲಿನಿಂದ ಕತ್ತರಿಸುವುದರಿಂದ ಹಣದ ನಷ್ಟ ಉಂಟಾಗುತ್ತದೆ ಹಾಗೂ ಇದು ಆರೋಗ್ಯದ ದೃಷ್ಟಿಯಿಂದ ಸಹ ಕೆಟ್ಟದ್ದು ಹಾಗಾಗಿ ಆದಷ್ಟು ಉಗುರು ಕತ್ತರಿಸುವ ಉಪಕರಣದಿಂದ ಉಗುರನ್ನು ಕತ್ತರಿಸಿ ಕೊಳ್ಳಿ.ಯಾವ ವ್ಯಕ್ತಿಯೂ ತಡವಾಗಿ ಮಲಗಿ ತಡವಾಗಿ ಏಳುತ್ತಾನೋ ಅಂಥವರ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಿರುತ್ತದೆ.
ಹಾಗಾಗಿ ಸರಿಯಾದ ಸಮಯಕ್ಕೆ ಮಲಗಿ ಸೂರ್ಯೋದಯದ ಮುನ್ನ ಎದ್ದು ಕ್ರಿಯಾಶೀಲರಾಗಿ.
ಇನ್ನೂ ಮನೆಗೆ ಬಂದ ಅತಿಥಿಗೆ ಅತಿಥಿ ಸತ್ಕಾರವನ್ನು ಮಾಡಬೇಕು ಬದಲಾಗಿ ಯಾವುದೇ ಕಾರಣಕ್ಕೂ ಕೋಪಗೊಳ್ಳಬಾರದು.
ಹೀಗೆ ಕೋಪಗೊಂಡರೆ ಅತಿಥಿಗೆ ಬೇಜಾರು ಮಾಡಿದರೆ ಮನೆಯಲ್ಲಿ ಅಶಾಂತಿ ,ನೆಮ್ಮದಿಯಿಲ್ಲದ ಹಾಗೆ ಆಗುತ್ತದೆ
ಹಾಗಾಗಿ ಮನೆಗೆ ಬಂದ ಅತಿಥಿಗಳನ್ನು ಬಹಳ ಪ್ರೀತಿಯಿಂದ ನಗುನಗುತ್ತಾ ಆತಿಥ್ಯ ಮಾಡಿ.
ಧನ್ಯವಾದಗಳು.