ಉಗುರಿನ ಮೇಲೆ ಚಂದ್ರಾಕೃತಿ ಇದ್ದರೆ ಏನರ್ಥ ಗೊತ್ತಾ!

ಸಾಮಾನ್ಯವಾಗಿ ಬಹುತೇಕ ಎಲ್ಲರ ಕೈ ಬೆರಳುಗಳ ಉಗುರಿನ ಮೇಲೆ ಅರ್ಧ ಚಂದ್ರಾಕೃತಿ ಇದ್ದೇ ಇರುತ್ತದೆ.ಇನ್ನೂ ಹೀಗೆ ಉಗುರಿನ ಮೇಲೆ ಚಂದ್ರಾಕೃತಿ ಇದ್ದರೆ ಏನರ್ಥ ಮತ್ತು ಅವು ಯಾಕೆ ಬರುತ್ತವೆ ಎಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.ಉಗುರಿನ ಮೇಲೆ ದೊಡ್ಡದಾದ ಚಂದ್ರಾಕೃತಿ ಇದ್ದರೆ ಅದೃಷ್ಟವಂತರು ಎನ್ನಬಹುದಾಗಿದೆ.ಇನ್ನು ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಷಯವಾಗಿದೆ.ಹಿಂದಿನ ಕಾಲದಲ್ಲಿ ಆರೋಗ್ಯವೇ ಭಾಗ್ಯ ಎನ್ನಲಾಗುತ್ತಿತ್ತುಅದೇ ರೀತಿ ಒಬ್ಬ ವ್ಯಕ್ತಿಯ ಉಗುರಿನ ಮೇಲೆ ಅರ್ಧ ಚಂದ್ರಾಕೃತಿಯ ಚೆನ್ನಾಗಿದ್ದರೆ ಆ ವ್ಯಕ್ತಿ ಆರೋಗ್ಯವಂತನಾಗಿದ್ದಾನೆ ಎಂದು ಅರ್ಥವಾಗಿದೆ.ಉಗುರಿನ ಮೇಲೆ ಇರುವ ಅರ್ಧ ಚಂದ್ರಾಕೃತಿಯನ್ನು ಲುನೂಲ ಎಂದೂ ಕರೆಯಲಾಗುತ್ತದೆ.ಇನ್ನು ಈ ಲುನೂಲ ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.ಲನೂಲವು ಮುಖ್ಯವಾಗಿ ಉಗುರು ಬೆಳೆಯುವ ಜಾಗದಲ್ಲಿ ಇರುತ್ತದೆ.ಇದು ಹೊಸ ಜೀವಕೋಶದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ ಬಹುತೇಕ ಎಲ್ಲರಲ್ಲೂ ಈ ಲುನೂಲವನ್ನು ಕಾಣಬಹುದು.ಇನ್ನು ಈ ಬಿಳಿ ಬಣ್ಣ ಬದಲಾಗಿ ಬೇರೆ ಬಣ್ಣದಲ್ಲಿ ಅಥವಾ ಈ ಅರ್ಧ ಚಂದ್ರಾಕೃತಿ ಕಾಣದೇ ಇದ್ದರೆ ನಿಮ್ಮ ಆರೋಗ್ಯದ ಪರಿಸ್ಥಿತಿ ಸ್ವಲ್ಪ ಹದಗೆಟ್ಟಿರಬಹುದು ಎನ್ನುವ ಸೂಚನೆಯಾಗಿರುತ್ತದೆ.ಹಾಗಾಗಿ ಇಂತಹ ಲಕ್ಷಣ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.ಪ್ಲೇವಲ ಅಥವಾ ನೀಲಿ ಚಂದ್ರಾಕೃತಿಯ ಗುರುತು ಸಾಮಾನ್ಯವಾಗಿ ಮಧುಮೇಹದ ಸೂಚನೆಯಾಗಿರುತ್ತದೆ.ಆಕಾಶ ನೀಲಿ ಅಥವಾ ನೇರಳೆ ಖಂಡ ಚಂದ್ರಾಕೃತಿಯ ಗುರುತು ವಿಲ್ಸನ್ ಕಾಯಿಲೆ ಅಂಗಗಳ ತುಂಬಾ ತಾಮ್ರದ ಅಂಶ ಇರುತ್ತದೆ ಎನ್ನಲಾಗಿದೆ.ಕೆಂಪು ಖಂಡ ಚಂದ್ರಾಕೃತಿಯ ಗುರುತು ಹೃದಯಾಘಾತ , ಲೂಕಸ್ ಅಥವಾ ದೇಹದ ಇನ್ನಿತರ ಲೋಪಗಳು ಇದೆ ಎಂದು ಅರ್ಥ.

ಕಂದು ಅಥವಾ ಕಪ್ಪುಬಣ್ಣದ ಖಂಡ ಚಂದ್ರಾಕೃತಿಯ ಗುರುತು ದೇಹದಲ್ಲಿ ಅತಿಯಾದ ಫ್ಲೋರೈಡ್ ಅಂಶ ಇದೆ ಎನ್ನುವ ಸೂಚನೆ ನೀಡುತ್ತದೆ.ಹಳದಿ ಖಂಡ ಚಂದ್ರಾಕೃತಿಯ ಗುರುತು ಟೆಟ್ರಾಸೈಕ್ಲಿನ್ ಕಾಯಿಲೆ ಇದೆ ಎಂದು ಪರಿಗಣಿಸಬಹುದುಇನ್ನೂ ಅರ್ಧಚಂದ್ರಾಕೃತಿಯ ಕಣ್ಮರೆಯಾಗುತ್ತಿದ್ದರೆ ಅದು ಸಾಮಾನ್ಯವಾಗಿ ರಕ್ತಹೀನತೆ ಅಥವಾ ಅಪೌಷ್ಠಿಕತೆಯ ಗುರುತಾಗಿದೆ.ಹಳದಿ ಚಂದ್ರಾಕೃತಿ ಇದ್ದರೆ ಕೀಲು ರೋಗ ಅಥವಾ ಸಂಧಿವಾತ ಕಾಯಿಲೆ ಎಂದು ಪರಿಗಣಿಸಬಹುದು.ಇನ್ನೂ ಅರ್ಧ ಚಂದ್ರಾಕೃತಿಯ ಕಣ್ಮರೆಯಾಗಿ ಕಂದು ಬಣ್ಣಕ್ಕೆ ತಿರುಗುತ್ತಿದ್ದರೆ ಮೂತ್ರಪಿಂಡಗಳ ವೈಫಲ್ಯ ಅಥವಾ ಮೂತ್ರಪಿಂಡಕ್ಕೆ ಸಂಬಂಧಿಸಿದ ತೊಂದರೆ ಇದೆ ಎಂದು ಅರ್ಥವಾಗಿದೆ.ಇನ್ನು ಮೇಲೆ ತಿಳಿಸಿರುವ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಿ.

ಧನ್ಯವಾದಗಳು.

Related Post

Leave a Comment