ಮನೆ ಸುಂದರವಾಗಿ ಕಾಣಬೇಕು ಎಂದರೆ ಚಂದ ಚಂದದ ಫೋಟೋಗಳನ್ನು ಹಾಕಬೇಕು. ಅದರೆ ಈ ರೀತಿ ಫೋಟೋ ಹಾಕಿದರೆ ಅನಾಹುತಗಳು ಎದುರು ಆಗುತ್ತವೆ. ಕೆಲವು ವಸ್ತುಗಳು ಮನೆಯಲ್ಲಿ ನಕರಾತ್ಮಕ ಪ್ರಭಾವವನ್ನು ಬೀರುತ್ತವೆ. ನಕಾರಾತ್ಮಕ ಶಕ್ತಿ ಹೆಚ್ಚಿಸುವ ವಸ್ತುಗಳು ಮನೆಯಲ್ಲಿದ್ದರೆ ಮನೆಯಲ್ಲಿ ಜಗಳ ಅಶಾಂತಿ ಹಲವಾರು ಸಮಸ್ಸೆಗಳು ಎದುರು ಆಗುತ್ತವೆ.ಆದ್ದರಿಂದ ಈ ರೀತಿ ಫೋಟೋವನ್ನು ಮನೆಯಲ್ಲಿ ಹಾಕಬಾರದು.
1, ಹಿಂಸಾತ್ಮಕ ದೃಶ್ಯ ಅಥವಾ ಹಿಂಸಾತ್ಮಕ ಪ್ರಾಣಿಗಳ ಫೋಟೋವನ್ನು ಮನೆಯಲ್ಲಿ ಹಾಕಬಾರದು. ವಾಸ್ತು ಶಾಸ್ತ್ರದ ಪ್ರಕಾರ ಕ್ರೂರ ಪ್ರಾಣಿಗಳ ಫೋಟೋಗಳನ್ನು ಮನೆಯಲ್ಲಿ ಹಾಕಿದರೆ ಅಶುಭ ಎಂದು ಹೇಳಲಾಗುತ್ತದೆ. ಕಾಡು ಪ್ರಾಣಿಗಳಾದ ಸಿಂಹ ಚಿರತೆ ಹುಲಿ ಮುಂತಾದ ಪ್ರಾಣಿಗಳ ಫೋಟೋವನ್ನು ಮನೆಯಲ್ಲಿ ಹಾಕಬಾರದು. ಈ ರೀತಿ ಫೋಟೋವನ್ನು ಮನೆಯಲ್ಲಿ ಹಾಕುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯ ಸದಸ್ಯರ ನಡುವೆ ಪರಸ್ಪರ ದ್ವೇಷ ಅಸೂಯೆ ಉಂಟಾಗುತ್ತದೆ.
2, ಇನ್ನು ಮುಳುಗುತ್ತಿರುವ ಹಡಗಿನ ಫೋಟೋವನ್ನು ಮನೆಯಲ್ಲಿ ಹಾಕಬಾರದು. ಇದರಿಂದ ಮನೆಗೆ ದೌರ್ಭಾಗ್ಯ ಹೆಚ್ಚಾಗುತ್ತದೆ.ಅಶಾಂತಿ ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ.3, ಇನ್ನು ತಾಜ್ ಮಹಲ್ ಫೋಟೋ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ವಾಸ್ತುಶಾಸ್ತ್ರದ ಪ್ರಕಾರ ತಾಜ್ ಮಹಲ್ ನ ಪ್ರತಿಮೆ ಅಥವಾ ಫೋಟೋವನ್ನು ಮನೆಯಲ್ಲಿ ಇಡುವುದು ಅಶುಭ ಎಂದು ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಪತಿಪತ್ನಿಯರಲ್ಲಿ ಭಿನ್ನಾಭಿಪ್ರಾಯವನ್ನು ಮೂಡಿಸುತ್ತದೆ. ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.
4, ಇನ್ನು ನಟರಾಜನ ಮೂರ್ತಿ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಹಾಕಿಕೊಳ್ಳಬಾರದು. ನೃತ್ಯದ ಬಗ್ಗೆ ಅಭಿರುಚಿ ಹೊಂದಿರುವವರು ನಟರಾಜ ಅವರ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮವಲ್ಲ ಎಂದು ಹೇಳುತ್ತಾರೆ. ಇದು ವಿನಾಶ ಮತ್ತು ಕೋಪದ ಸೂಚಕ ವಾಗಿರುತ್ತದೆ. ಮನೆಯಲ್ಲಿ ನಗುತ್ತಿರುವ ಅಥವಾ ಸೌಮ್ಯ ಮುದ್ರೆಯನ್ನು ಹೊಂದಿರುವ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು.
5, ಮಹಾಭಾರತ ದೃಶ್ಯದ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಹಾಕಿಕೊಂಡರೆ ಕುಟುಂಬದಲ್ಲಿ ಕಲಹ ಆಗೌರವ ಉಂಟಾಗುತ್ತದೆ. ವಾಸ್ತು ಪ್ರಕಾರದಲ್ಲಿ ಯುದ್ಧ ಅಥವಾ ಅಸ್ತ್ರ ಶಾಸ್ತ್ರಗಳನ್ನು ಹೊಂದಿರುವ ಫೋಟೋವನ್ನು ಹಾಕಿಕೊಳ್ಳಬಾರದು.