ಜೋಳದರೊಟ್ಟಿ ಎಂದಾಗ ಮೊದಲು ನೆನಪಾಗುವುದು ರಾಯಚೂರು ಗುಲ್ಬರ್ಗ ಧಾರವಾಡ ಬೀದರ್ ಹುಬ್ಬಳ್ಳಿ. ಏಕೆಂದರೆ ಇಲ್ಲಿಯವರ ಮೂಲ ಆಹಾರ ಜೋಳದ ರೊಟ್ಟಿ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಹೇಗೆ ಪ್ರಾಮುಖ್ಯತೆ ನೀಡುತ್ತಾರೆ ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಜೋಳಕ್ಕೆ ಹೆಚ್ಚಿನ ಮಹತ್ವ ಇದೆ.ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕಚೇರಿ ಕೆಲಸಕ್ಕೆ ಹೋಗುವವರು ದಿನನಿತ್ಯ ಕೂಲಿಕಾರ್ಮಿಕರು ಶ್ರೀಮಂತರು ಬಡವರು ಜೋಳದ ರೊಟ್ಟಿಯನ್ನು ತಿನ್ನುತ್ತಾರೆ. ಇತ್ತೀಚಿಗೆ ಆನ್ಲೈನ್ ಮಾರುಕಟ್ಟೆಯಲ್ಲೂ ಕೂಡ ಜೋಳದ ರೊಟ್ಟಿ ಸಪ್ಲೈ ಆಗುತ್ತಿರುವುದು ಅದರ ವೈಶಿಷ್ಟವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.
ಇದರಿಂದ ಪ್ರಪಂಚದ ಮೂಲೆ ಮೂಲೆಯಿಂದಲೂ ಜೋಳದ ರೊಟ್ಟಿಗಾಗಿ ಆರ್ಡರ್ ಗಳು ಬರುತ್ತವೆ ಮತ್ತು ಉತ್ತರ ಕರ್ನಾಟಕದ ಆಹಾರದ ರುಚಿ ಪ್ರತಿಯೊಬ್ಬರಿಗೂ ತಿಳಿದಂತೆ ಆಗುತ್ತದೆ. ಜೋಳದ ರೊಟ್ಟಿ ಯಿಂದ ಸಿಗುವಂತಹ ಆರೋಗ್ಯದ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಜೋಳ ಈಜಿಪ್ಟ್ ದೇಶದಲ್ಲಿ 8000 ವರ್ಷಗಳ ಹಿಂದೆ ಅಲ್ಲಿನ ಜನರು ತಮ್ಮ ಪ್ರತಿದಿನ ಆಹಾರ ಪದ್ಧತಿಯಲ್ಲಿ ಜೋಳದ ವಿವಿಧ ಬಗೆಯ ಆಹಾರವನ್ನು ಮಾಡಿ ಸೇವಿಸುತ್ತಿದ್ದರು. ಕೆಲವೊಂದು ಮೂಲಗಳ ಪ್ರಕಾರ ಭಾರತದಲ್ಲಿ ಕೂಡ ಬೆರಳಿಕೆ ಪ್ರಮಾಣದಲ್ಲಿ ಹಿಂದೆ ಜೋಳದ ಬೆಳೆ ಬೆಳೆಯಲಾಗುತ್ತಿತ್ತು ಎಂದು ಹೇಳುತ್ತಾರೆ. ಅಮೆರಿಕದ ಪ್ರತಿಷ್ಠಿತ ಸಂಸ್ಥೆ ಹೇಳುವ ಪ್ರಕಾರ ಜೋಳದಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪ್ರಮಾಣದಲ್ಲಿ ಪ್ರೋಟೀನ್ ಸಲ್ಪರ್, ಪಾಸ್ಪರಸ್ ಪೊಟ್ಯಾಶಿಯಂ ಮೆಗ್ನೀಷಿಯಂ ಕ್ಯಾಲ್ಸಿಯಂ ಅಮೈನೋ ಆಮ್ಲಗಳು ಮತ್ತು ಇನ್ನಿತರ ಪೌಷ್ಟಿಕ ಸತ್ವಗಳು ಸಿಗುತ್ತವೆ.
1, ನಾರಿನಂಶ ಹೆಚ್ಚಾಗಿ ಇರುವ ಕಾರಣದಿಂದ ಜೋಳದ ರೊಟ್ಟಿಯಿಂದ ಆರೋಗ್ಯಕ್ಕೆ ಅಪಾರ ಪ್ರಮಾಣದಲ್ಲಿ ಲಾಭ ಸಿಗುತ್ತದೆ.2, ಜೋಳದಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಕರಗಿಸುವ ಶಕ್ತಿ ಇದೆ. ಕೊಲೆಸ್ಟ್ರಾಲ್ ಅಂಶವನ್ನು ಕೂಡ ತಗ್ಗಿಸಿ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡಿ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಹೃದಯದ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ.3, ಕಿಡ್ನಿ ಮತ್ತು ಲಿವರ್ ಸಮಸ್ಯೆ ನಿವಾರಣೆ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.4, ಆರೋಗ್ಯ ತಜ್ಞರು ಹೇಳುವ ಪ್ರಕಾರ ದೀರ್ಘಕಾಲದ ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಉಂಟಾಗುತ್ತಿರುವ ಹೊಟ್ಟೆಯಲ್ಲಿನ ಉಣ್ಣುಗಳು, ಕರುಳಿನ ಕ್ಯಾನ್ಸರ್, ಮಲಬದ್ಧತೆ ಸಮಸ್ಸೆ ಅತಿಯಾದ ಆಮ್ಲೆಯತೆ ಹೊಟ್ಟೆ ಸೆಳೆತ ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಸೆಗಳನ್ನು ಕೂಡ ಜೋಳ ಇಲ್ಲವಾಗಿಸುತ್ತದೆ.
5, ಆಂಟಿಆಕ್ಸಿಡೆಂಟ್ ಅಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ.ಇದರಿಂದ ಮಧುಮೇಹ ಮತ್ತು ಇನ್ಸೂಲಿನ್ ಪ್ರತಿರೋಧ ಇದ್ದಾರೆ ಅದು ಸುಲಭವಾಗಿ ಬಗೆಹರಿಯುತ್ತದೆ.6, ಜೋಳ ಮನುಷ್ಯನ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿಯಂತ್ರಣ ಮಾಡುತ್ತದೆ. ಕ್ಯಾನ್ಸರ್ ಸಮಸ್ಯೆ ನಿವಾರಣೆ ಜೊತೆಗೆ ಹೃದಯರಕ್ತನಾಳಗಳ ಕಾಯಿಲೆಯನ್ನು ಹೋಗಲಾಡಿಸುತ್ತದೆ.7, ನಾರಿನಂಶ ಹೆಚ್ಚಾಗಿರುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಜೊತೆಗೆ ಕರುಳಿನ ಆರೋಗ್ಯವನ್ನು ಕೂಡ ಅಭಿವೃದ್ಧಿ ಆಗುತ್ತದೆ.
8, ಮಧುಮೇಹ ನಿಯಂತ್ರಣ ಮಾಡಿಕೊಳ್ಳಲು ಸಕ್ಕರೆ ಕಾಯಿಲೆ ಹೊಂದಿರುವವರು ಜೋಳದ ರೊಟ್ಟಿಯನ್ನು ಸೇವನೆ ಮಾಡಬಹುದು.9, ಮೊದಲು ಜೋಳವನ್ನು ಹಿಟ್ಟು ಮಾಡಿಸಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಕಲಸಿ ರೊಟ್ಟಿ ತಯಾರಿಸಿ ಪಲ್ಯ ಚೆಟ್ನಿ ಜೊತೆ ಸೇವನೆ ಮಾಡಬಹುದು.ಇದನ್ನು 6 ತಿಂಗಳುವರೆಗೂ ಸೇವನೆ ಮಾಡಬಹುದು.