ಕೂದಲು ಉದುರುವಿಕೆ, ಚರ್ಮದ ತೊಂದರೆ ಮೂಳೆಗಳ ಸವೆತ ದೃಷ್ಟಿ ಕಡಿಮೆ ಆಗುವುದು ದೇಹದ ತೂಕ ಹೆಚ್ಚಾಗುವುದು, ಕ್ಯಾಲ್ಸಿಯಂ ಕೊರತೆ ಮಧುಮೇಹ, ಥೈರಾಯ್ಡ್ ಸಮಸ್ಯೆ, ರಕ್ತ ಹೀನತೆ ಇವೆಲ್ಲ ಕೆಲವು ಮುಖ್ಯ ಸಮಸ್ಸೆಗಳು ಅಷ್ಟೇ. ಇನ್ನು ಈ ಬೀಜದ ಸೇವನೆಯಿಂದ ಶೇಕಡ 90ರಷ್ಟು ಕಾಯಿಲೆಗಳನ್ನು ಬೇರು ಸಮೇತ ಹೋಗಲಾಡಿಸಬಹುದು.ಅಗಸೆ ಬೀಜದಲ್ಲಿ ಹೇರಳವಾದ ನಾರಿನಂಶ ಇದೆ. ಇದರಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ ಇದೆ.ಅಷ್ಟೇ ಅಲ್ಲದೆ ಅಗಸೆ ಬೀಜದಲ್ಲಿ ಅಂಟಿಬ್ಯಾಕ್ಟರಿಯಲ್, ಆಂಟಿ ಫಂಗಲ್, ಆಂಟಿವೈರಸ್ ಗುಣವಿದೆ. ಇನ್ನು ಉತ್ತಮ ಆರೋಗ್ಯಕ್ಕೆ ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗುತ್ತದೆ.
1,ಅಗಸೆ ಬೀಜದಲ್ಲಿ ಹೇರಳವಾದ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ಚೆನ್ನಾಗಿ ನಡೆಯುವಂತೆ ಮಾಡುತ್ತದೆ. ಶರೀರದಲ್ಲಿರುವ ಹಾನಿಕಾರಕ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ.ಈ ಫ್ರೀ ರಾಡಿಕಲ್ಸ್ ಚಯಪಚಯ ಕ್ರಿಯೆಯನ್ನು ಕಡಿಮೆ ಮಾಡಿ ದೇಹದ ತೂಕವನ್ನು ಹೆಚ್ಚಾಗುವಂತೆ ಮಾಡುತ್ತದೆ.ಇದರಿಂದ ದೇಹದ ತೂಕ ಹೆಚ್ಚಾಗುವುದು. ಆದರೆ ಅಗಸೆಬೀಜ ಹಾನಿಕಾರಕ ಫ್ರೀ ರಾಡಿಕಲ್ಸ್ ಅನ್ನು ಹೋಗಲಾಡಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.ಅಗಸೆ ಬೀಜ ಹಸಿವನ್ನು ಕಡಿಮೆ ಮಾಡುತ್ತದೆ.
2, ಅಗಸೆ ಬೀಜ ಸೇವನೆ ಮಾಡುವುದರಿಂದ ಕೂದಲ ಆರೈಕೆಗೆ ಉತ್ತಮ. ಇದು ಕೂದಲಿನ ಬುಡಕ್ಕೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ.3, ಅಗಸೆ ಬೀಜದಲ್ಲಿ ಇರುವ ಒಮೇಗಾ 3 ಫ್ಯಾಟಿ ಆಸಿಡ್ ಮುಖದಲ್ಲಿ ಬೇಗನೆ ನೆರಿಗೆ ಮೂಡದಂತೆ ತಡೆಯುತ್ತದೆ. ಮುಖಕ್ಕೆ ಕಾಂತಿಯನ್ನು ಒದಗಿಸುತ್ತದೆ. ಚರ್ಮದಲ್ಲಿ ಕ್ಯಾನ್ಸರ್ ಆಗದಂತೆ ತಡೆಯುತ್ತದೆ.
4,ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಉಗುರುಗಳು ತುಂಡು ಆಗುವುದಿಲ್ಲ.ಇದರಿಂದ ಉಗುರುಗಳಿಗೆ ಉತ್ತಮ ಪೋಷಣೆ ದೊರೆಯುತ್ತದೆ.5,ಕೆಲವರಿಗೆ ಪೀರಿಯಡ್ ಸರಿಯಾದ ಸಮಯಕ್ಕೆ ಆಗುವುದಿಲ್ಲ ಹಾಗೂ ಪಿರಿಯಡ್ ಸಮಯದಲ್ಲಿ ವಿಪರೀತ ಹೊಟ್ಟೆನೋವು ಇರುತ್ತದೆ. ಅಂಥವರು ಅಗಸೆಬೀಜದ ಸೇವನೆಯನ್ನು ಪ್ರತಿದಿನ ಮಾಡಿದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
6, ಮಹಿಳೆಯರಲ್ಲಿ ಕಂಡುಬರುವ ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನು ಸರಿಪಡಿಸುತ್ತದೆ. ಇನ್ನು ಇದರ ಸೇವನೆಯಿಂದ ಗಾಯಗಳು ಬೇಗನೆ ವಾಸಿಯಾಗುತ್ತದೆ.7, ಬ್ಲಡ್ ಸರ್ಕ್ಯುಲೇಶನ್ ಅನ್ನು ಉತ್ತಮಗೊಳಿಸುತ್ತದೆ.8, ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.9, ಅಗಸೆಬೀಜ ಹೃದಯದ ಆರೋಗ್ಯಕ್ಕೂ ಉತ್ತಮ.10, ಸೊಂಟ ನೋವು ಮೂಳೆಗಳ ಸೆಳೆತ ಸಂಧಿವಾತದಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
11, ಪ್ರತಿದಿನ ಅಗಸೆ ಬೀಜವನ್ನು ಸೇವನೆ ಮಾಡಿದರೆ ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಅಗಸೆ ಬೀಜವನ್ನು ಪುಡಿಮಾಡಿ ಡಬ್ಬದಲ್ಲಿ ಹಾಕಿ ಇಡಿ.ಪ್ರತಿದಿನ ಮಲಗುವ ಮೊದಲು ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಹಾಗೆ ಬಿಡಿ.ಬೆಳಗ್ಗೆ ಎದ್ದು ಸ್ವಲ್ಪ ಬಿಸಿಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.ಅಗಸೆ ಬೀಜವನ್ನು ಸೇವಿಸುತ್ತಿದ್ದರೆ ಚೆನ್ನಾಗಿ ನೀರು ಕುಡಿಯುವುದನ್ನು ಮರೆಯಬೇಡಿ.