ಯಾವ ಸಿನಿಮಾಗೂ ಕಡಿಮೆಯಿಲ್ಲ ಸುಂದರ್ ಪಿಚೈ ಅವರ ಲವ್ ಸ್ಟೋರಿ!

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಎಲ್ಲರಿಗೂ ಗೊತ್ತು.ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂದರೆ ಅದು ಸುಂದರ್ ಪಿಚೈ ಮಾತ್ರ.ಸಾಧಾರಣ ಕುಟುಂಬದಲ್ಲಿ ಹುಟ್ಟಿ ಬೆಳೆದು ಇಂದು ಈ ಹಂತಕ್ಕೆ ತಲುಪಿರುವ ಸುಂದರ್ ಪಿಚೈ ಅವರ ಯಶಸ್ಸಿನ ಹಿಂದೆ ಅವರ ಹೆಂಡತಿಯ ಪಾತ್ರ ಕೂಡ ಮಹತ್ವದ್ದಾಗಿದೆ.ಇಂಥಹ ಜೋಡಿಯ ಲವ್ ಸ್ಟೋರಿ ಯಾವ ಸಿನಿಮಾಗೂ ಕಡಿಮೆಯಿಲ್ಲ ಎನ್ನುವ ಹಾಗಿದೆ.ಹಾಗಾದರೆ ಸುಂದರ್ ಪಿಚೈ ಹಾಗೂ ಅಂಜಲಿಯವರ ಪ್ರೀತಿ ಪ್ರೇಮದ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..

1972 ರಲ್ಲಿ ಚೆನ್ನೈನಲ್ಲಿ ಹುಟ್ಟಿದ ಸುಂದರ್ ಪಿಚೈ ಯವರು ಇಂದು ವಿಶ್ವದಲ್ಲೇ ಪ್ರಸಿದ್ಧ ಗೂಗಲ್ ಸಿಇಒ ಆಗಿ ವೃತ್ತಿ ಜೀವನದ ಜೊತೆಗೆ ವೈವಾಹಿಕ ಜೀವನದಲ್ಲಿಯೂ ಯಶಸ್ವಿಯಾಗಿದ್ದಾರೆ.ಪ್ರೀತಿಸಿದಾಕೆಯನ್ನು ಯಶಸ್ವಿಯಾಗಿ ಕೈ ಹಿಡಿದು ಈಗ ಇಬ್ಬರು ಮಕ್ಕಳ ಮುದ್ದಾದ ಮಕ್ಕಳ ಜೊತೆಗೆ ನೆಮ್ಮದಿಯಾಗಿ ಸರಳ ಜೀವನವನ್ನು ನಡೆಸುತ್ತಿದ್ದಾರೆ.ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರ್ ಹಾಗೂ ಮದ್ಯಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಂಜಲಿ ಯವರು ತಮ್ಮ ಬ್ಯಾಚುಲರ್ ಡಿಗ್ರಿ ಐಐಟಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಮೊಟ್ಟ ಮೊದಲಿಗೆ ಭೇಟಿಯಾದರು.ಖರಗ್ ಪುರ್ ನಲ್ಲಿ ಡಿಗ್ರಿ ಓದುವಾಗ ಇಬ್ಬರಿಗೂ ಪರಿಚಯವಾಯಿತು.ಇಬ್ಬರೂ ಕ್ಲಾಸ್ ಮೆಟ್ ಆಗಿದ್ದರಿಂದ ಪರಿಚಯವಾಗಿ ,ಪರಿಚಯ ಸ್ನೇಹವಾಗಿ ಸ್ನೇಹದಿಂದ ಒಡನಾಟ ಬೆಳೆದು ನಂತರ ಪರಸ್ಪರ ಪ್ರೀತಿ ಮಾಡಲು ಶುರು ಮಾಡಿದರು.

ಆಗಿನ ಕಾಲದಲ್ಲಿ ಫೋನ್ ಮಾಡಿ ಮಾತನಾಡುವುದು ಕಷ್ಟವಾಗುತ್ತಿತ್ತು ಹೀಗಾಗಿ ಅಂಜಲಿಯವರ ಹಾಸ್ಟೆಲ್ ಮುಂದೆ ಓಡಾಡಿಕೊಂಡು ಅಂಜಲಿ ಅವರನ್ನು ಕರೆಯಿರಿ ಎಂದು ಅಂಜಲಿ ಅವರ ಗೆಳತಿಯರಿಗೆ ಹೇಳುತ್ತಿದ್ದರು.ಆಗ ಅವರ ಸ್ನೇಹಿತರು”ಅಂಜಲಿ ಸುಂದರ್ ಬಂದಿದ್ದಾರೆ ನೋಡಿ” ಎಂದು ಜೋರಾಗಿ ಕಿರುಚಿತ್ತಿದ್ದರಂತೆ.ಹೀಗಿದ್ದ ಜೋಡಿ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ 6 ತಿಂಗಳು ಒಬ್ಬರನ್ನೊಬ್ಬರು ಸಂಪರ್ಕಿಸಲು ಸಾಧ್ಯವಾಗಲಿಲ್ಲ.ಮಾಸ್ಟರ್ಸ್ ಡಿಗ್ರಿ ಮಾಡಲು ಸುಂದರ್ ಪಿಚೈ ರವರು ಅಮೆರಿಕಾಗೆ ತೆರಳಿದ್ದರು.ಆಗ ಅಂಜಲಿಯವರ ಜೊತೆ ಮಾತನಾಡಲು ಅಂತಾರಾಷ್ಟ್ರೀಯ ಕರೆ ಮಾಡುವುದಕ್ಕೆ ದುಡ್ಡಿಲ್ಲದ ಪರಿಸ್ಥಿತಿ ಆದರೂ ಕೂಡ ಇವರ ಪ್ರೀತಿ ಕಡಿಮೆಯಾಗಿರಲಿಲ್ಲ ನಂತರ ಅಂಜಲಿಯವರು ಅಮೆರಿಕಾಗೆ ಹೋಗುತ್ತಾರೆ.

ಇನ್ನು ವಿದ್ಯಾಭ್ಯಾಸ ಮುಗಿದ ನಂತರ ಮನೆಯವರನ್ನು ಒಪ್ಪಿಸಿ ಇಬ್ಬರೂ ಮದುವೆಯಾಗುತ್ತಾರೆ.ಈಗ ಈ ಜೋಡಿಗೆ ಕಾವ್ಯ ಹಾಗೂ ಕಿರಣ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.ಗೂಗಲ್ ನಲ್ಲಿ ಇವರ ಯಶಸ್ಸು ಕಂಡು ಟ್ವಿಟರ್ ಹಾಗೂ ಮೈಕ್ರೋಸಾಫ್ಟ್ ಕಂಪೆನಿ ಗಳು ಇವರಿಗೆ ಆಫರ್ ಕೊಟ್ಟಾಗ ಅಂಜಲಿಯವರು ಗೂಗಲ್ ನಲ್ಲಿಯೇ ಉಳಿದುಕೊಳ್ಳಲು ಸಲಹೆ ನೀಡಿದ್ದರಂತೆ.
ಅದೇ ಈಗ ಸುಂದರ್ ಅವರ ಯಶಸ್ವೀ ಜೀವನಕ್ಕೆ ಕಾರಣವಾಗಿದೆ.ಇದೆಲ್ಲವನ್ನು ಸ್ವತಃ ಸುಂದರ್ ಪಿಚೈ ರವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ಸುಂದರ್ ಪಿಚೈ ಅವರ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Related Post

Leave a Comment