ಟೊಮ್ಯಾಟೋ ನಾವು ದಿನನಿತ್ಯದ ಅಡುಗೆಯಲ್ಲಿ ಬಳಸುವ ಟೊಮ್ಯಾಟೋ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ.ಟೊಮ್ಯಾಟೊದಲ್ಲಿ ಇರುವ ಔಷಧೀಯ ಗುಣವೂ ಚರ್ಮ , ಕೂದಲು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.ಟೊಮ್ಯಾಟೋ ಹಲವಾರು ಪೋಷಕಾಂಶಗಳನ್ನು ಹೊಂದಿದೆ.ಅದರಲ್ಲೂ ಮುಖ್ಯವಾಗಿ ವಿಟಮಿನ್ ಸಿ ,ಪೋಲೆಟ್ ,ಕಬ್ಬಿಣಾಂಶ ,ಪೊಟ್ಯಾಶಿಯಮ್ ,ಮೆಗ್ನಿಷಿಯಂ ,ಕಾಲಿನ್ ,ಸತು ಮತ್ತು ರಂಜಕವನ್ನು ಹೊಂದಿದೆ.ಇಂತಹ ಟೊಮ್ಯಾಟೊವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳೇನು ?ಇನ್ನು ಎಷ್ಟೇ ಲಾಭದಾಯಕವಾಗಿದ್ದರೂ ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಅಂತಾರಲ್ಲ ಹಾಗೆ ಟೊಮೆಟೊವನ್ನು ಅತಿಯಾಗಿ ಸೇವಿಸಿದರೆ ಉಂಟಾಗುವ ತೊಂದರೆಗಳೇನು ?ಟೊಮ್ಯಾಟೊವನ್ನು ಯಾರು ಸೇವಿಸಬಾರದು ?ಇವೆಲ್ಲದರ ಬಗ್ಗೆ ತಿಳಿಯೋಣ..ಪ್ರತಿ ನಿತ್ಯ ನಾವು ಟೊಮ್ಯಾಟೋ ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಯೋಣ.
- ರಕ್ತದ ಒತ್ತಡವನ್ನು ನಿವಾರಿಸುತ್ತದೆ
ರಕ್ತದ ಒತ್ತಡದ ಸಮಸ್ಯೆ ಇರುವವರು ಟೊಮ್ಯಾಟೊವನ್ನು ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಅಥವಾ ನಿತ್ಯ ಒಂದು ತಾಜಾ ಟೊಮ್ಯಾಟೊವನ್ನು ಸೇವಿಸುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.ಟೊಮ್ಯಾಟೋ ದಲ್ಲಿರುವ ಪೊಟ್ಯಾಶಿಯಂ ಅಂಶವು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ರಕ್ತವನ್ನು ತೆಳ್ಳಗಾಗಿಸುವುದರ ಮೂಲಕ ರಕ್ತದ ಸಂಚಲನವನ್ನು ಸುಲಭಗೊಳಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
- ಕಣ್ಣಿನ ದೃಷ್ಟಿಯ ಸುಧಾರಣೆಗೆ ಉತ್ತಮ
ಟೊಮ್ಯಾಟೊ ಹಣ್ಣನ್ನು ಸೇವಿಸುವುದರಿಂದ ಉಂಟಾಗುವ ಇನ್ನೊಂದು ಪ್ರಯೋಜನವೆಂದರೆ ಕಣ್ಣಿನ ಆರೋಗ್ಯ ಉತ್ತಮವಾಗುತ್ತದೆ. ದುರ್ಬಲ ದೃಷ್ಟಿ ಅಥವಾ ದೃಷ್ಟಿ ದೋಷ ಇರುವವರು ಇದನ್ನು ಸೇವಿಸಿದರೆ ಸುಧಾರಣೆ ಕಾಣಬಹುದು.
ಟೊಮ್ಯಾಟೊ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಗುಣವು ಕುರುಡುತನಕ್ಕೆ ಕಾರಣವಾಗುವ ದೋಷವನ್ನು ನಿಯಂತ್ರಿಸುತ್ತದೆ.
ಟೊಮ್ಯಾಟೊದಲ್ಲಿರುವ ತಾಮ್ರದ ಅಂಶ ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಟೊಮ್ಯಾಟೊ ಹಣ್ಣಿನಲ್ಲಿ ಇರುವ ಪೋಷಕಾಂಶ ಹಾಗೂ ನಾರಿನ ಅಂಶವು ಉತ್ತಮ ಜೀರ್ಣಕ್ರಿಯೆಗೆ ಪ್ರಚೋದನೆ ನೀಡುತ್ತದೆ.
ದೇಹದಲ್ಲಿ ಉಂಟಾಗುವ ರೋಗಗಳ ವಿರುದ್ಧ ಹೋರಾಡುವುದರ ಮೂಲಕ ಪಚನ ಕ್ರಿಯೆಯನ್ನು ಸುಧಾರಿಸುತ್ತದೆ.ಇದರಲ್ಲಿ ಇರುವ ಜೀರ್ಣಕಾರಿ ರಸವು ದೇಹದ ಆರೋಗ್ಯ ವ್ಯವಸ್ಥೆಗೆ ಉತ್ತಮ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕೆಂದರೆ ಬಿಳಿ ರಕ್ತ ಕಣಗಳು ಅಗತ್ಯವಾಗಿ ಬೇಕು.ಬಿಳಿ ರಕ್ತ ಕಣಗಳ ವೃದ್ಧಿ ಹಾಗೂ ರೋಗಗಳಿಂದ ದೂರ ಉಳಿಯಲು ಟೊಮ್ಯಾಟೊ ಒಂದು ಉತ್ತಮ ಪರಿಹಾರವಾಗಿದೆ.ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮೂಳೆಗಳನ್ನು ಬಲಪಡಿಸುತ್ತದೆ ಟೊಮ್ಯಾಟೋ ಹಣ್ಣಿನಲ್ಲಿರುವ ಅದ್ಭುತ ಶಕ್ತಿಯಲ್ಲಿ ಮೂಳೆಗಳನ್ನು ಬಲಪಡಿಸುವ ಶಕ್ತಿಯೂ ಒಂದು.ಮೂಳೆಗಳ ಆರೋಗ್ಯಕ್ಕೆ ಹಾನಿ ಮಾಡುವ ಆಸ್ಟ್ರೋಪೋರಿಸಿಸನ್ನು ತಡೆಯುತ್ತದೆ.ಇದರಲ್ಲಿ ವಿಟಮಿನ್ ಸಿ ಮತ್ತು ಎ ಅಂಶವೂ ಸಮೃದ್ಧವಾಗಿದೆ ಅಲ್ಲದೆ ಬೀಟಾ ಕ್ಯಾರೊಟಿನ್ ಸಹ ಹೊಂದಿರುವುದರಿಂದ ಮೂಳೆಯ ಆರೋಗ್ಯಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ.
ಮೆದುಳಿನ ಆರೋಗ್ಯಕ್ಕೆ ಉತ್ತಮ:ಟೊಮ್ಯಾಟೊದಲ್ಲಿ ಇರುವ ಲೈಕೋಪಿನ್ ಮತ್ತು ಬೀಟಾ ಕ್ಯಾರೊಟಿನ್ ಮೆದುಳಿನ ಶಕ್ತಿಯನ್ನು ಉತ್ತಮಗೊಳಿಸುತ್ತದೆ ಜೊತೆಗೆ ನರ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಮೆದುಳಿನ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಆದ್ದರಿಂದ ನಿತ್ಯದ ಆಹಾರದಲ್ಲಿ ಟೊಮ್ಯಾಟೊದ ಸೇವನೆ ಒಳ್ಳೆಯದು.ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ ಟೊಮ್ಯಾಟೊ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ಇದರಲ್ಲಿರುವ ಲೈಕೋಪಿನ್ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ರಕ್ತವನ್ನು ತೆಳು ವಾಗಿಸಿ ಅದರಲ್ಲಿ ಇರುವ ಕೊಬ್ಬನ್ನು ಕರಗಿಸುವ ಮೂಲಕ ಉತ್ತಮ ರಕ್ತ ಸಂಚಾರ ಹಾಗೂ ಹೃದಯದ ಆರೋಗ್ಯವನ್ನು ಪೋಷಿಸುತ್ತದೆ.
ಟೊಮ್ಯಾಟೊವನ್ನು ಹೇಗೆ ಸೇವಿಸಬೇಕು ?ಸಾಮಾನ್ಯವಾಗಿ ಊಟದಲ್ಲಿ ಟೊಮ್ಯಾಟೋ ಸಿಕ್ಕರೆ ಪಕ್ಕಕ್ಕೆ ಇಡುವವರೇ ಹೆಚ್ಚು.
ಹೀಗೆ ಮಾಡಲೇಬೇಡಿ ಯಾವುದೇ ತರಕಾರಿಯಾಗಲಿ ಮಿತವಾಗಿ ಸೇವಿಸಿದರೆ ದೇಹಕ್ಕೆ ಅದರಿಂದ ದೊರೆಯುವ ಲಾಭಗಳೇ ಹೆಚ್ಚು
ಆದ್ದರಿಂದ ಟೊಮ್ಯಾಟೊವನ್ನು ಸಾರು ,ಪಲ್ಯ ಮೊದಲಾದ ರೀತಿಯಲ್ಲಿ ಅಡುಗೆಗೆ ಸೇರಿಸಿ ಸೇವಿಸಬಹುದು ಅಥವಾ ದಿನದಲ್ಲಿ ಒಂದು ತಾಜಾ ಟೊಮ್ಯಾಟೊವನ್ನು ಹಾಗೇ ಹಸಿಯಾಗಿ ಸೇವಿಸಬಹುದು.
ಟೊಮೆಟೊವನ್ನು ಅತಿಯಾಗಿ ಸೇವಿಸಿದರೆ ಉಂಟಾಗುವ ತೊಂದರೆಗಳೇನು ?ಯಾವುದೇ ಆಹಾರವನ್ನು ಮಿತವಾಗಿ ಸೇವಿಸಿದರೆ ಅದರಿಂದ ಆರೋಗ್ಯ ಲಾಭಗಳು ಅಧಿಕ.ಅತಿಯಾದರೆ ಇದು ಆರೋಗ್ಯದ ಮೇಲೆ ವಿರುದ್ಧ ಪ್ರಭಾವವನ್ನು ಬೀರುತ್ತದೆ
ಅದರಲ್ಲೂ ಟೊಮ್ಯಾಟೋವನ್ನು ಅತಿಯಾಗಿ ಸೇವಿಸಿದರೆ ಉಂಟಾಗುವ ಮುಖ್ಯ ತೊಂದರೆಗಳೆಂದರೆ ಗ್ಯಾಸ್ಟ್ರಿಕ್ ಮತ್ತು ಎದೆ ಉರಿ ಸಮಸ್ಯೆ.ಟೊಮ್ಯಾಟೊ ಹಣ್ಣುಗಳಲ್ಲಿ ಮಿಯಾಲಿಕ್ ಆಸಿಡ್ ಮತ್ತು ಸಿಟ್ರಿಕ್ ಆಸಿಡ್ ಎಂಬ ಎರಡು ಆಮ್ಲಿ ಅಂಶವಿದ್ದು ಅತಿಯಾಗಿ ಸೇವಿಸಿದರೆ ಅಥವಾ ಖಾಲಿ ಹೊಟ್ಟೆಯಲ್ಲಿ ಟೊಮ್ಯಾಟೋ ಹಣ್ಣನ್ನು ಸೇವಿಸಿದರೆ ವಿಪರೀತ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ.
ಕೀಳು ನೋವು ಉಂಟಾಗಬಹುದು ನಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಹಣ್ಣನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಕೈ ಕಾಲುಗಳು ಊತ ಬಂದು ಕೀಲುಗಳು ಇದ್ದಕ್ಕಿದ್ದಂತೆ ನೋವಲು ಪ್ರಾರಂಭವಾಗುತ್ತದೆ
ಇದಕ್ಕೆ ಕಾರಣ ಟೊಮ್ಯಾಟೊ ಹಣ್ಣುಗಳಲ್ಲಿರುವ ಆಲ್ಕಲೈಡ್ ಅಂಶ.ಇದು ನಮ್ಮ ದೇಹದ ವಿವಿಧ ಭಾಗಗಳಲ್ಲಿ ಮತ್ತು ರಕ್ತನಾಳಗಳಲ್ಲಿ ಕ್ಯಾಲ್ಷಿಯಂ ಪ್ರಮಾಣವನ್ನು ಶೇಖರಿಸಿಉರಿ ಊತಕ್ಕೆ ದಾರಿ ಮಾಡಿಕೊಡುತ್ತದೆ.ಭೇದಿ ಉಂಟಾಗಬಹುದು ಅತಿಯಾಗಿ ಟೊಮ್ಯಾಟೊ ಸೇವಿಸಿದರೆ ಇದು ಅತಿಸಾರ , ಆಮ ಶಂಕೆ ಹಾಗೂ ಭೇದಿಯ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.
ಇನ್ನು ಯಾವ ಸಮಸ್ಯೆಗಳು ಇರುವವರಿಗೆ ಟೊಮ್ಯಾಟೊ ಸೇವನೆ ಒಳ್ಳೆಯದಲ್ಲ ?ಮಧುಮೇಹಿಗಳು ಅತಿಯಾಗಿ ಟೊಮ್ಯಾಟೋ ಸೇವನೆ ಮಾಡುವುದು ಒಳ್ಳೆಯದಲ್ಲ. ಟೊಮ್ಯಾಟೊದಲ್ಲಿ ಗ್ಲೈಸೆಮಿಕ್ ಅಂಶವು ಕಡಿಮೆ ಇದೆ,ಇದು ಮಧುಮೇಹಿಗಳಿಗೆ ಒಳ್ಳೆಯದು.ಇದು ರಕ್ತ ಕಣಗಳಿಗೆ ತುಂಬಾ ನಿಧಾನವಾಗಿ ಸಕ್ಕರೆಯ ಅಂಶವನ್ನು ಬಿಡುಗಡೆ ಮಾಡುತ್ತದೆಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು ತಪ್ಪುತ್ತದೆ ಆದರೆ ಇದನ್ನು ಮಿತವಾಗಿ ಸೇವನೆ ಮಾಡಬೇಕು. ಅತಿಯಾದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಮತ್ತಷ್ಟು ಕುಸಿಯಬಹುದು ಆದ್ದರಿಂದ ಮಧುಮೇಹಿಗಳು ಅತಿಯಾಗಿ ಟೊಮ್ಯಾಟೋ ಸೇವನೆ ಮಾಡಿದರೆ ಆಪತ್ತು ಕಟ್ಟಿಟ್ಟ ಬುತ್ತಿ.
ಇನ್ನು ಹೊಟ್ಟೆಯ ಅಲ್ಸರ್ ಸಮಸ್ಯೆ ಇರುವವರು ಕೂಡ ಟೊಮ್ಯಾಟೋ ಸೇವನೆ ಕಡಿಮೆ ಮಾಡಿದರೆ ಒಳ್ಳೆಯದು.ಮೈಗ್ರೇನ್ ಸಮಸ್ಯೆ ಇರುವವರಿಗೂ ಟೊಮ್ಯಾಟೊ ಒಳ್ಳೆಯದಲ್ಲ.ಮಿತವಾಗಿ ಸೇವಿಸಿದರೆ ಉತ್ತಮ .ಕಿಡ್ನಿ ಸ್ಟೋನ್ ಇರುವವರು ಕೂಡ ಟೊಮೆಟೊ ಸೇವನೆಯಿಂದ ದೂರವಿದ್ದರೆ ಉತ್ತಮ.
ಧನ್ಯವಾದಗಳು.