ಕಲ್ಲು ಸಕ್ಕರೆ ಹಿಂದಿಯಲ್ಲಿ ಮಿಶ್ರಿ ಎಂದು ಕರೆಯಲ್ಪಡುವ ಈ ವಸ್ತು ನೋಡಲು ಕಲ್ಲಿನಂತೆ ಇರುತ್ತದೆ. ಆದರೆ ಇದರ ರುಚಿ ಮಾತ್ರ ಸಕ್ಕರೆಯ. ಅದು ಸಾಮಾನ್ಯ ಸಕ್ಕರೆಯನ್ನು ಹರಳುಗಳನ್ನಾಗಿ ಮಾಡಿ ಇದನ್ನು ತಯಾರಿಸುತ್ತಾರೆ. ಹಾಗಾಗಿ ಸಾಮಾನ್ಯ ಸಕ್ಕರೆಗಿಂತ ಇದರಲ್ಲಿ ಸ್ವಲ್ಪ ಸಿಹಿ ಕಡಿಮೆ. ಇದನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ.
ಇದರಲ್ಲಿ ಹಲವು ವಿಟಮಿನ್ಗಳು, ಖನಿಜಗಳು ಹಾಗೂ ಅಮೈನೋ ಆಸಿಡ್ ಇದೆ. ಸಾಮಾನ್ಯವಾಗಿ ಬಹಳಷ್ಟು ಮಂದಿಗಳಲ್ಲಿ ವಿಟಮಿನ್ ಬಿ 12 ಕೊರತೆಯಿರುತ್ತದೆ ಹಾಗೂ ಈ ವಿಟಮಿನ್ ಬಹಳ ವಿರಳವಾಗಿದ್ದು. ಇದನ್ನು ದೇಹಕ್ಕೆ ಪೂರೈಸುವುದು ಸ್ವಲ್ಪ ಕಷ್ಟಕರವಾದ ವಿಷಯ. ಮಾಂಸಾಹಾರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಹೇಳುತ್ತಾರೆ.
ಇಂತಹ ವಿರಳವಾದ ವಿಟಮಿನ್ b12 ಕಲ್ಲು ಸಕ್ಕರೆಯಲ್ಲಿ ಕಂಡುಬರುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸಾಮಾನ್ಯವಾಗಿ ಸಕ್ಕರೆಯನ್ನು ತಯಾರಿಸಲು ಕಬ್ಬಿನ ರಸವನ್ನು ಉಪಯೋಗಿಸಲಾಗುತ್ತದೆ. ಕಬ್ಬಿನ ರಸವನ್ನು ಆವಿ ಮಾಡಿ ಹರಳುಗಟ್ಟಿಸಿ ಕಲ್ಲು ಸಕ್ಕರೆಯನ್ನು ತಯಾರಿಸಲಾಗುತ್ತದೆ. ಈ ಎಲ್ಲಾ ಕ್ರಿಯೆಗಳಿಂದ ತಯಾರಾಗುವ ಕಲ್ಲುಸಕ್ಕರೆ ದೇಹಕ್ಕೆ ಉತ್ತಮ ಜೀರ್ಣಕ್ರಿಯೆಯನ್ನು ನೀಡುತ್ತದೆ ಹಾಗೂ ದೇಹಕ್ಕೆ ತಂಪನ್ನು ನೀಡಬಲ್ಲದು.
ಶೀತ ಹಾಗೂ ಕೆಮ್ಮನ್ನು ಶಮನಗೊಳಿಸುತ್ತದೆ-ಶೀತ, ಕೆಮ್ಮು ಹಾಗೂ ಗಂಟಲು ಬೇನೆ ಸಾಮಾನ್ಯವಾದ ತೊಂದರೆಗಳಾಗಿವೆ. ಅದರಲ್ಲೂ ಚಳಿಗಾಲದಲ್ಲಿ ಈ ತೊಂದರೆಗಳು ಕಾಡುವುದು ಹೆಚ್ಚು. ಇಂಥ ಪರಿಸ್ಥಿತಿಗಳಿಗಾಗಿ ಕಲ್ಲುಸಕ್ಕರೆ ಒಂದು ವರದಾನವಾಗಿದೆ. ಅರ್ಧ ಚಮಚದಷ್ಟು ಕಲ್ಲು ಸಕ್ಕರೆಯನ್ನು ತೆಗೆದುಕೊಳ್ಳಿ,ಇದಕ್ಕೆ ಅರ್ಧ ಚಮಚ ಆಗುವಷ್ಟು ಕಪ್ಪು ಮೆಣಸಿನ ಕಾಳನ್ನು ತೆಗೆದುಕೊಳ್ಳಿ. ಈ ಎರಡನ್ನೂ ಬೆರೆಸಿ ಪೇಸ್ಟ್ ನಂತೆ ತಯಾರಿಸಿಕೊಳ್ಳಿ ಹಾಗೂ ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ.
ಇದು ಗಂಟಲು ಬೇನೆಗೆ ಬಹಳ ಉಪಯುಕ್ತವಾದ ಔಷಧ. ಕಲ್ಲು ಸಕ್ಕರೆ ಹಾಗೂ ಕಾಳುಮೆಣಸಿನ ಪುಡಿಯನ್ನು ತಯಾರಿಸಿಕೊಂಡು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿದಾಗ ಕೆಮ್ಮು ಹಾಗೂ ಸಿಂಬಳವನ್ನು ಕಡಿಮೆ ಮಾಡುತ್ತದೆ. ಪದೇಪದೇ ನಿಮಗೆ ಕೆಮ್ಮು ಬರುತ್ತಿದ್ದರೆ ಕಲ್ಲುಸಕ್ಕರೆಯ ಒಂದು ತುಂಡನ್ನು ಬಾಯಲ್ಲಿರಿಸಿ ನಿಧಾನವಾಗಿ ಚೀಪುತ್ತಿರಿ ಹಾಗೂ ನಿಮ್ಮ ಕೆಮ್ಮು ಕಡಿಮೆಯಾಗುವುದನ್ನು ಗಮನಿಸಿ.
ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ-ಕಲ್ಲುಸಕ್ಕರೆ ಬಾಯಿಯ ವಾಸನೆಯನ್ನು ದೂರಮಾಡುವುದು ಅಷ್ಟೇ ಅಲ್ಲದೆ ಜೀರಿಗೆಯೊಂದಿಗೆ ಸೇವಿಸಿದಾಗ ಜೀರ್ಣಶಕ್ತಿಯನ್ನು ಕೂಡ ಬಲಪಡಿಸುತ್ತದೆ. ಇದರಲ್ಲಿ ಜೀರ್ಣಕಾರಕ ಗುಣ ಇರುವುದರಿಂದ ಆಹಾರವು ತಕ್ಷಣವೇ ಜೀರ್ಣಗೊಳ್ಳಲು ಆರಂಭಿಸುತ್ತದೆ. ಆದ್ದರಿಂದ, ಊಟದ ಬಳಿಕ ಜೀರ್ಣಕ್ರಿಯೆಗಾಗಿ ಕಲ್ಲುಸಕ್ಕರೆಯ ತುಂಡುಗಳನ್ನು ಜೀರಿಗೆ ಕಾಳುಗಳೊಂದಿಗೆ ಸೇರಿಸಿ.
ಶಕ್ತಿಯನ್ನು ನೀಡುತ್ತದೆ-ನೀವು ಕಳೆಗುಂದಿದಂತೆ ಅನಿಸಿದಾಗ ಅಥವಾ ಮನಸ್ಸು ಸರಿ ಇಲ್ಲ ಎನ್ನಿಸಿದಾಗ ಕಲ್ಲು ಸಕ್ಕರೆಯನ್ನು ಸೇವಿಸಬಹುದು. ಇದು ನಿಮಗೆ ತಕ್ಷಣವೇ ಶಕ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಮಾನಸಿಕವಾಗಿ ನೀವು ಕುಂದಿದಾಗ ಕೂಡ ಕಲ್ಲುಸಕ್ಕರೆ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ನೆನಪಿನ ಶಕ್ತಿಯನ್ನು ಕೂಡ ಇದು ಹೆಚ್ಚಿಸಬಲ್ಲದು.
ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚನೆಯ ಹಾಲಿಗೆ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಅದು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನ ಬೇಡ. ಹಾಗೂ ಊಟದ ನಂತರ ನಾವೆಲ್ಲರೂ ನಿದ್ದೆಗಾಗಿ ಹವಣಿಸುತ್ತೇವೆ. ಇಂತಹ ಸಮಯದಲ್ಲಿ ಕಲ್ಲು ಸಕ್ಕರೆಯನ್ನು ಸೇವಿಸಿದಾಗ ನೀವು ಚಟುವಟಿಕೆಯಿಂದ ಇರಬಹುದು
ತಾಜಾತನವನ್ನು ಹೆಚ್ಚಿಸುತ್ತದೆ-ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ತಂಪನ್ನು ಹಾಗೂ ತಾಜಾತನವನ್ನು ಹೆಚ್ಚಿಸಲು ಸಕ್ಕರೆಯನ್ನು ಬಳಸುತ್ತಾರೆ. ನಿಮ್ಮ ಮೆದುಳು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸುವಲ್ಲಿ ಇದು ಸಹಕಾರಿ ಹಾಗೂ ನಿಮ್ಮ ಆತಂಕವನ್ನು ದೂರ ಮಾಡುತ್ತದೆ. ತಕ್ಷಣವೇ ಸಿಗುವ ಶಕ್ತಿಯಿಂದ ಕಲ್ಲು ಸಕ್ಕರೆ ದೇಹವನ್ನು ಸುಧಾರಿಸುತ್ತದೆ. ಒಂದು ಲೋಟ ನೀರಿಗೆ ಸ್ವಲ್ಪವೇ ಕಲ್ಲು ಸಕ್ಕರೆಯನ್ನು ಬೆರೆಸಿ ನೀವು ಕುಡಿಯಬಹುದು.
ಹಲವು ಅಡುಗೆಗಳಿಗೆ ಬಳಸಬಹುದು-ಸಾಮಾನ್ಯ ಸಕ್ಕರೆಗೆ ಹೋಲಿಸಿದಾಗ ಕಲ್ಲು ಸಕ್ಕರೆಯಲ್ಲಿ ಅನೇಕ ಆರೋಗ್ಯ ಗುಣಗಳಿವೆ. ಹಾಗಾಗಿ ಇದನ್ನು ಅಡುಗೆಗಳಿಗೆ ಬಳಸಲಾಗುತ್ತದೆ. ಯಾವುದೇ ರೀತಿಯ ಸಿಹಿ ಪದಾರ್ಥಗಳನ್ನು ತಯಾರಿಸುವಾಗ, ಚಾಕ್ಲೆಟ್ ತಯಾರಿಸುವಾಗ, ಕಲ್ಲು ಸಕ್ಕರೆಯನ್ನು ಸೇರಿಸಿದಾಗ ತಿಂಡಿಗಳಿಗೆ ವಿವಿಧ ರುಚಿ ಸಿಗುತ್ತದೆ. ಶೋಧಿಸಿದ ಕಲ್ಲು ಸಕ್ಕರೆಯನ್ನು ನೀವು ಆಯ್ದುಕೊಳ್ಳಬೇಕು. ಕಂದು ಬಣ್ಣದಿಂದ ಹಳದಿ ಬಣ್ಣದವರೆಗೆ ಇರುವ ಕಲ್ಲುಸಕ್ಕರೆಯನ್ನು ನೀವು ಆಯ್ದುಕೊಳ್ಳಿ. ಯಾವುದೇ ಕಾರಣಕ್ಕೂ ಬೆಳ್ಳಗೆ ಇರುವ ಸಕ್ಕರೆಯನ್ನು ತೆಗೆದುಕೊಳ್ಳಬೇಡಿ. ಸಕ್ಕರೆಯನ್ನು ಬೆಳ್ಳಗೆ ಮಾಡಲು ಹಲವು ರಾಸಾಯನಿಕ ವಸ್ತುಗಳನ್ನು ಸೇರಿಸುತ್ತಾರೆ ಎಂಬುದು ಗಮನದಲ್ಲಿರಲಿ.
ಆರೋಗ್ಯಕ್ಕೆ ಒಳ್ಳೆಯದು-ನೋಡಿದಿರಲ್ಲ, ಕಲ್ಲು ಸಕ್ಕರೆಯಿಂದ ಎಷ್ಟೆಲ್ಲಾ ಆರೋಗ್ಯಕ್ಕೆ ಒಳ್ಳೆಯ ಗುಣಗಳು ಇವೆಯೆಂದು. ಇಷ್ಟೇ ಅಲ್ಲದೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದಾಗ ರಕ್ತಹೀನತೆ, ಬಿಳಿಚಿಕೊಂಡ ಚರ್ಮ, ತಲೆ ಸುತ್ತು, ಸುಸ್ತು ಮುಂತಾದ ತೊಂದರೆಗಳು ಬರಬಹುದು. ಆದರೆ ಕಲ್ಲು ಸಕ್ಕರೆಯಲ್ಲಿರುವ ಎಲ್ಲಾ ಪೋಷಕಾಂಶಗಳು ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ಹಲವರು ಕಲ್ಲು ಸಕ್ಕರೆಯಿಂದ ಶೀತವಾಗುತ್ತದೆ ಎಂದು ತಪ್ಪಾಗಿ ತಿಳಿದು ಬಾಣಂತಿಯರಿಗೆ ನೀಡುವುದಿಲ್ಲ. ಆದರೆ ಇದು ತಪ್ಪು. ಕಲ್ಲುಸಕ್ಕರೆಯ ಸೇವನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗಿ ತಾಯಿಯ ಎದೆ ಹಾಲಿನ ಉತ್ಪತ್ತಿ ಹೆಚ್ಚುತ್ತದೆ. ಹಾಗಾಗಿ ಬಾಣಂತಿಯರು ಕೂಡ ಇದನ್ನು ಸೇವಿಸಬಹುದು. ರಾತ್ರಿ ಮಲಗುವ ಮುನ್ನ ಕಲ್ಲು ಸಕ್ಕರೆಯನ್ನು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ನಿಮಗೆ ಉತ್ತಮ ನಿದ್ರೆ ಕೂಡ ಆವರಿಸುತ್ತದೆ.
ಕಲ್ಲುಸಕ್ಕರೆಯನ್ನು ಸಾಮಾನ್ಯ ಸಕ್ಕರೆಯಂತೆ ಎಂದು ತಿಳಿದು ನೀವು ಇದನ್ನು ಸೇವಿಸುವುದನ್ನು ನಿಲ್ಲಿಸಬೇಡಿ. ಸಾಮಾನ್ಯ ಸಕ್ಕರೆಗಿಂತ ಕಡಿಮೆ ಸಿಹಿಯುಳ್ಳ ಹಲವು ಪೋಷಕಾಂಶಗಳನ್ನು ಹೊಂದಿರುವ ಕಲ್ಲುಸಕ್ಕರೆ ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬೇಸಿಗೆಯ ಕಾಲದಲ್ಲಿ ದೇಹದ ಉಷ್ಣಾಂಶವನ್ನು ಮಿತಿಯಲ್ಲಿಡಲು ಇದು ಸಹಕಾರಿ. ಈ ಲೇಖನದಿಂದ ನಿಮಗೆ ಬಹಳಷ್ಟು ಉಪಯುಕ್ತ ಮಾಹಿತಿಗಳು ದೊರೆತಿವೆ ಎಂದು ನಾವು ಭಾವಿಸುತ್ತೇವೆ.