ಸಾಮನ್ಯವಾಗಿ ಕೆಲವರಿಗೆ ಹಲ್ಲು ನೋವಿನ ಸಮಸ್ಸೆ ಹೆಚ್ಚಾಗಿ ಕಾಡುತ್ತಿದೆ.ಹಾಗಾದರೆ ಈ ಮನೆಮದ್ದು ಮಾಡಿ ನೋಡಿ. ಉಪ್ಪು ನೀರಿನಂತೆ ಹೈಡ್ರೋಜೆನ್ ಫೇರಾಕ್ಸೋಯ್ಡ್ ಬ್ಯಾಕ್ಟೀರಿಯ ವನ್ನು ಕೊಲ್ಲುತ್ತದೆ ಮತ್ತು ಊತ ಹಾಗೂ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ರಕ್ತ ಸ್ರವ ಅಥವಾ ಸೊಂಕಿನಿಂದ ಉಂಟಾಗುವ ಹಲ್ಲು ನೋವುಗಳನ್ನು ಗುಣ ಪಡಿಸಲು ಇದು ಉತ್ತಮ.ಹಲ್ಲು ನೋವು ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸುತ್ತದೆ.
ಈ ಹಲ್ಲು ನೋವಿಗೆ ಔಷಧಿಗಳನ್ನು ತೆಗೆದುಕೊಳ್ಳುವುದು ಮುಂದಿನ ದಿನಗಳಲ್ಲಿ ಬೇರೆ ರೀತಿಯ ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಮನೆಯಲ್ಲಿ ಕೆಲವು ಪದಾರ್ಥಗಳನ್ನು ಬಳಸಿ ಆದ್ದರಿಂದ ಹಲ್ಲು ನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಐಸ್ ಪ್ಯಾಕ್ ಇದು ಹಲ್ಲು ನೋವು ನೀವಾರಿಸಲು ಇದು ಸುಲಭವಾದ ತಂತ್ರ.ಐಸ್ ನೋವು ಇರುವ ಜಾಗದಲ್ಲಿ ನೋವು ಕಡಿಮೆ ಮಾಡುತ್ತದೆ.ಹಾಗಾಗಿ ನೋವು ಇರುವ ಬಳಿ ಐಸ್ ಇಟ್ಟರೆ ನೋವು ಕಡಿಮೆ ಆಗುತ್ತದೆ.ಒಂದು ಕಪ್ಪು ನೀರು ಬಿಸಿ ಮಾಡಿ ಮತ್ತು ಒಂದು ಚಮಚ ಉಪ್ಪು ಹಾಕಿ ಕಲಸಿ.ಬೆಚ್ಚಗೆ ಇರುವ ನೀರನ್ನು ಎರಡು ಬಾರಿ ಬಾಯಿಯಲ್ಲಿ ಹಾಕಿ ಬಾಯಿ ಮುಕ್ಕಳಿಸಿ.
ಲವಂಗ ಹಲ್ಲು ನೋವಿಗೆ ಉತ್ತಮ ಪರಿಹಾರ.ಇದನ್ನು ಬಹಳ ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ.ಲವಂಗ ಎಣ್ಣೆಯನ್ನು ನೋವು ಇರುವ ಜಾಗಕ್ಕೆ ಹಚ್ಚಬೇಕು.ಬೆಳ್ಳುಳ್ಳಿಯು ಸಹ ಬಹಳಷ್ಟು ಔಷಧಿ ಪ್ರಯೋಜನಗಳನ್ನು ಹೊಂದಿದೆ.ಇದು ಕೂಡ ಹಲ್ಲು ನೋವಿಗೆ ಉತ್ತಮ ಮತ್ತು ಶುಂಠಿ ಪೇಸ್ಟ್ ಅನ್ನು ಹಲ್ಲು ನೋವು ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆ ಎರಡು ಗಂಟೆ ಹಾಗೆ ಬಿಟ್ಟರೆ ನೋವು ಊತವನ್ನು ಕಡಿಮೆ ಮಾಡುತ್ತದೆ.