ವೈದಿಕ ಜ್ಯೋತಿಷ್ಯದಲ್ಲಿರುವ ಒಟ್ಟು 27 ನಕ್ಷತ್ರಗಳ ಪೈಕಿ ಮೂರನೇ ನಕ್ಷತ್ರ ಕೃತಿಕಾ. ಸೂರ್ಯ ಇದನ್ನು ಆಳುವ ಗ್ರಹವೆಂದು ಹೇಳಲಾಗುತ್ತದೆ. ಈ ನಕ್ಷತ್ರಕ್ಕೆ ಸಂಬಂಧಪಟ್ಟಂತೆ ಜ್ಯೋತಿಷ್ಯ ವಿಚಾರಗಳು, ಈ ನಕ್ಷತ್ರದಲ್ಲಿ ಜನಿಸಿದವರ ಗುಣ ಹಾಗೂ ಜೀವನದ ಕುರಿತಾದ ಮಾಹಿತಿ ಈ ಲೇಖನದಲ್ಲಿದೆ.
ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನು ನಮ್ಮ ಅಂತಃಪ್ರಜ್ಞೆ, ಬುದ್ಧಿವಂತಿಕೆ ಮತ್ತು ನಮ್ಮ ಸಹಜ ಭಾವನೆಗಳಿಗೆ ಸಂಬಂಧಿಸಿದೆ. ಎಲ್ಲಾ ನಕ್ಷತ್ರಗಳು ಚಂದ್ರನ ಸ್ಥಾನವನ್ನು ಆಧರಿಸಿ ಸದಾ ಬದಲಾಗುತ್ತಿರುವ ಭಾವನೆಗಳು ಹಾಗೂ ಭಾವುಕತೆಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ನಕ್ಷತ್ರಗಳೂ ಭಿನ್ನವಾದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದರಂತೆ 27 ನಕ್ಷತ್ರಗಳಲ್ಲಿ ಮೂರನೇ ನಕ್ಷತ್ರವಾದ ಕೃತಿಕಾ ನಕ್ಷತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕೃತಿಕಾ ನಕ್ಷತ್ರ ಜ್ಯೋತಿಷ್ಯ ಮಾಹಿತಿ
ಕೃತಿಕಾ ನಕ್ಷತ್ರದ ಅಧಿಪತಿ: ಸೂರ್ಯ
ಕೃತಿಕಾ ನಕ್ಷತ್ರದ ಚಿಹ್ನೆ: ಕೊಡಲಿ, ಚೂಪಾದ ಅಂಚು ಅಥವಾ ಬೆಂಕಿಯ ಜ್ವಾಲೆ
ನಕ್ಷತ್ರ ದೇವತೆ: ಅಗ್ನಿ
ನಕ್ಷತ್ರ ಗಣ: ರಾಕ್ಷಸ ಗಣ
ಕೃತಿಕಾ ನಕ್ಷತ್ರ ರಾಶಿ: ಮೇಷ/ ವೃಷಭ
ಆಳುವ ದೇವತೆ: ಶಿವ
ಹೆಸರಿನ ಆರಂಭದ ಅಕ್ಷರ: ಆ,ಇ,ಓ, ಐ
ಅದೃಷ್ಟದ ಅಕ್ಷರ: ಅ,ಐ, ಯು, ವಿ
ಅದೃಷ್ಟ ರತ್ನ: ರೂಬಿ
ಅದೃಷ್ಟ ಬಣ್ಣ: ಬಿಳಿ
ನಕ್ಷತ್ರ ಗುಣ: ರಾಜಸ
ದೋಷ: ಕಫ ಅಂಶ: ಭೂಮಿ
ಕೃತಿಕಾ ನಕ್ಷತ್ರದಲ್ಲಿ ಜನಿಸಿದ ಪುರುಷರ ಗುಣ
ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಸ್ನೇಹಪರ ವ್ಯಕ್ತಿಯಾಗಿದ್ದರೂ, ಕೆಲವೊಮ್ಮೆ ಅವರಿಗೆ ಮನಸ್ಸು ಬಂದಾಗ ಆ ಸ್ನೇಹ ವಯಲದಿಂದ ಹೊರಬರುತ್ತಾರೆ. ಇವರಿಗೆ ಹಣ ಸಂಪಾದಿಸುವ ಅಸಾಧಾರಣ ಸಾಮರ್ಥ್ಯವಿದೆ. ಆದರೆ ಇವರು ಯಾರ ನಿಯಮಗಳ ಅಡಿಯಲ್ಲಿರಲೂ ಬಯಸುವುದಿಲ್ಲ. ಇದರಿಂದಾಗಿ ಇವರ ಪ್ರಗತಿಯು ಕುಂಠಿತಗೊಳ್ಳುತ್ತದೆ. ಇತರರು ಸಹಾಯ ಮಾಡಲು ಮುಂದೆ ಬಂದರೂ, ತಾವು ಮುಂದೆ ಹೋಗುವಂತಹ ದೃಢ ಮನಸ್ಸನ್ನು ಹೊಂದಿರಬೇಕಾಗುತ್ತದೆ.
ಕೃತಿಕಾ ನಕ್ಷತ್ರದಲ್ಲಿ ಜನಿಸಿದ ಪುರುಷರ ವೃತ್ತಿಜೀವನ
ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಕೆಲಸಕ್ಕಾಗಿ ಮನೆಯಿಂದ ದೂರವಿದ್ದು ನೆಲೆಸುತ್ತಾರೆ. ಅದು ವಿದೇಶವೂ ಆಗಿರಬಹುದು. ನೀವು ಉದ್ಯಮಿಯಾಗಲು ಬಯಸಿದರೆ, ಇನ್ನೊಬ್ಬರ ಸಹಭಾಗಿತ್ವದಲ್ಲಿ ಮಾಡುವ ಆಲೋಚನೆ ಬಿಡಬೇಕು. ನೂಲು ರಫ್ತು, ಓಷಧಗಳು, ಕರಕುಶಲ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರಗಳಿಂದ ಉದ್ಯಮಿಗಳು ಗರಿಷ್ಠ ಲಾಭ ಪಡೆಯಬಹುದು. ವೃತ್ತಿಪರರು ಔಷಧ ಅಥವಾ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.
ಕೃತಿಕಾ ನಕ್ಷತ್ರದ ಪುರುಷರ ವೈವಾಹಿಕ ಜೀವನ
ಇವರು ವೈವಾಹಿಕ ಜೀವನದಲ್ಲಿ ಅದೃಷ್ಟವಂತರೆಂದು ಹೇಳಬಹುದು. ಇವರ ಜೀವನ ಸಂಗಾತಿಯು ಮನೆಯ ಚಟುವಟಿಕೆಗಳನ್ನು ಬಹಳ ಕೌಶಲ್ಯದಿಂದ ನಿರ್ವಹಿಸುತ್ತಾರೆ. ನಿಷ್ಠಾವಂತರೂ ಹಾಗೂ ಸದ್ಗುಣಶೀಲರೂ ಆಗಿರುತ್ತಾರೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದಾಗಿ ಸಂಗಾತಿಯಿಂದ ದೂರವಿದ್ದು ಬದುಕಬೇಕಾಗಬಹುದು. ಇವರು ತಾಯಿಯೊಂದಿಗೆ ಆತ್ಮೀಯವಾಗಿರುತ್ತಾರೆ. ತಂದೆಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗದಿರಬಹುದು.
ಕೃತಿಕಾ ನಕ್ಷತ್ರದ ಸ್ತ್ರೀಯರ ಗುಣಗಳು
ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಭಾವನಾತ್ಮಕವಲ್ಲದಿದ್ದರೂ, ಇತರರ ಭಾವನಾತ್ಮಕ ಪೀಡನೆಗೆ ಬಲಿಯಾಗುವುದಿಲ್ಲ. ಇವರ ಒಳಮನಸ್ಸು ಬಹಳ ಸದೃಢವಾಗಿರುತ್ತದೆ. ಇದನ್ನೇ ಕೆಲವರು ದುರಹಂಕಾರವೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಅದಲ್ಲದೇ ಇವರು ಮನೆಯಲ್ಲಿ ಆಗಲಿ ಅಥವಾ ಕೆಲಸದ ಸ್ಥಳವೇ ಆಗಲಿ ತಮ್ಮ ಪ್ರಾಬಲ್ಯವನ್ನು ತೋರಿಸಲು ಒಲವು ಹೊಂದಿರುತ್ತಾರೆ.
ಕೃತಿಕಾ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯರ ವೃತ್ತಿಜೀವನ
ಹೆಚ್ಚಿನವರು ಉದ್ಯೋಗವನ್ನು ಪಡೆಯಲು ಹೆಚ್ಚು ಶಿಕ್ಷಣವನ್ನು ಪಡೆದಿರುವುದಿಲ್ಲ ಆದ್ದರಿಂದ ಕೆಲವರು ಗೃಹಿಣಿಯರಾಗುತ್ತಾರೆ. ಕೆಲವರು ಕೃಷಿ ಅಥವಾ ನಿರ್ಮಾಣ ಕ್ಷೇತ್ರಗಳಲ್ಲಿ ದುಡಿಯಬಹುದು. ಕೆಲವರು ಶಿಕ್ಷಣ ಪಡೆದು ಆಡಳಿತಾಧಿಕಾರಿ, ಶಿಕ್ಷಕಿ, ವೈದ್ಯೆ ಅಥವಾ ಇಂಜಿನಿಯರ್ ಆಗಿ ಕೆಲಸ ಮಾಡಬಹುದು.
ಕೃತಿಕಾ ನಕ್ಷತ್ರದವರ ವೈವಾಹಿಕ ಜೀವನ
ಈ ನಕ್ಷತ್ರದಲ್ಲಿ ಜನಿಸಿದವರು ವೈವಾಹಿಕ ಜೀವನದ ಆನಂದವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಪ್ರತ್ಯೇಕವಾಗಿ ಬದುಕಿಬಿಡಬಹುದು. ಕೆಲವರು 37ನೇ ವಯಸ್ಸಿನವರೆಗೂ ಮದುವೆಯಾಗದೇ ಉಳಿದುಬಿಡಬಹುದು. ಇವರು ತಮ್ಮ ಸಂಬಂಧಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುವುದಿಲ್ಲ. ಹಿತೈಷಿಗಳೇ ಆಗಿದ್ದರೂ ಅವರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ತಮ್ಮದೇ ಆದ ಭ್ರಾಂತಿಯ ಜಗತ್ತಿನಲ್ಲಿ ಇರಲು ಇಷ್ಟಪಡುತ್ತಾರೆ. ಹಾಗಾಗಿ ಹೆಚ್ಚಿನ ಸಮಯ ಒಂಟಿತನವನ್ನು ಅನುಭವಿಸುತ್ತಾರೆ.
ಕೃತಿಕಾ ನಕ್ಷತ್ರದ ಪಾದಗಳು
ಕೃತಿಕಾ ನಕ್ಷತ್ರದ ಮೊದಲನೇ ಪಾದ: ಮೊದಲನೇ ಪಾದ ಗುರುವಿನ ಆಡಳಿತಕ್ಕೊಳಪಟ್ಟ ಧನುರಾಶಿಯ ನವಾಂಶದಲ್ಲಿ ಬರುತ್ತದೆ. ಇವರು ಔದಾರ್ಯವನ್ನು ಹೊಂದಿರುತ್ತಾರೆ. ಹೆಚ್ಚಿನವರು ಸೈನಿಕ ವೃತ್ತಿಯಲ್ಲಿ ಮುಂದುವರಿಯಲು ಬಯಸುತ್ತಾರೆ. ಗ್ರಹಗಳು ಇವರಿಗೆ ಶಕ್ತಿ, ಬಲ ಹಾಗೂ ಇಚ್ಛಾಶಕ್ತಿಯನ್ನು ನೀಡುತ್ತದೆ.
ಕೃತಿಕಾ ನಕ್ಷತ್ರದ ಎಡರನೇ ಪಾದ: ಎರಡನೇ ಪಾದವು ಮಕರ ರಾಶಿ ನವಾಂಶದಲ್ಲಿ ಬರುತ್ತದೆ. ಇವರ ಗಮನವು ನೈತಿಕತೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೂ ಆಧ್ಯಾತ್ಮಿಕತೆಗಿಂತ ಹೆಚ್ಚಾಗಿ ವಸ್ತುನಿಷ್ಟ ಅಭಿವ್ಯಕ್ತಿಯನ್ನು ಹೊಂದಿರುತ್ತಾರೆ.
ಕೃತಿಕಾ ನಕ್ಷತ್ರದ ಮೂರನೇ ಪಾದ: ಇದು ಶನಿಯ ಆಡಳಿತಕ್ಕೊಳಪಟ್ಟ ಕುಂಭರಾಶಿ ನವಾಂಶದಲ್ಲಿ ಬರುತ್ತದೆ. ಇದು ಉದಾರತೆ ಹಾಗೂ ಸಹಾನುಭೂತಿಯನ್ನು ಸೂಚಿಸುತ್ತದೆ. ಇಲ್ಲಿ ಗಮನವು ಕಲಿಯುವಿಕೆ ಮತ್ತು ಜ್ಞಾನವನ್ನು ಸಂಗ್ರಹಿಸುವುದರ ಕಡೆಗೆ ಇರುತ್ತದೆ.
ಕೃತಿಕಾ ನಕ್ಷತ್ರದ ನಾಲ್ಕನೇ ಪಾದ: ಈ ನಾಲ್ಕನೇ ಪಾದವು ಗುರುವಿನ ಆಳ್ವಿಕೆಯ ಮೀನ ರಾಶಿ ನವಾಂಶದಲ್ಲಿ ಬರುತ್ತದೆ. ಈ ಪಾದದ ಮಹತ್ವವೆಂದರೆ ಇದು ವಸ್ತು ಸೌಕರ್ಯಗಳ ಬಗ್ಗೆ ಅತ್ಯಂತ ಜಾಗೃತವಾಗಿರುತ್ತದೆ ಮತ್ತು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512