ಜೇಷ್ಠ ಶುದ್ಧ ಪೂರ್ಣಮೆ ದಿನದಂದು ವಟ ಸಾವಿತ್ರಿ ವ್ರತವನ್ನು ಆಚರಣೆ ಮಾಡಬೇಕಾಗುತ್ತದೆ.ಈ ವ್ರತದ ಹಿನ್ನಲೆ ಏನು ಎಂದರೆ ಮೃತನಾದ ಪತಿಯನ್ನು ಯಮಧರ್ಮರಾಯನಿಂದ ಮರಳಿ ಪಡೆದ ಮಹಾ ಸತಿಯಾದ ಸಾವಿತ್ರಿಯ ಉಪವಾಸ ಮಾಡುವಂತಹ ವ್ರತ. ಅಂದರೆ ಪ್ರತಿಯೊಬ್ಬ ಮಹಿಳೆಯಾದ ಗೃಹಿಣಿ ತನ್ನ ಪತಿಯ ದೀರ್ಘ ಆಯಸ್ಸು ಜೊತೆಯಲ್ಲಿ ಅಕಾಲಿಕ ಮರಣದಿಂದ ತಪ್ಪಿಸಲು ಈ ವ್ರತವನ್ನು ಉಪಾವಾಸ ಇದ್ದು ಆಚರಣೆ ಮಾಡುತ್ತಾರೆ.ಮೇ 19 ನೇ ತಾರೀಕು ಶುಕ್ರವಾರ ರಾತ್ರಿ 9:00 ಪ್ರಾರಂಭವಾಗಿ ಮೇ 20ನೇ ತಾರೀಕು ಶನಿವಾರ ಸಂಜೆ 5:33ನಿಮಿಷಕ್ಕೆ ಮುಕ್ತಾಯ ಆಗುತ್ತದೆ.
ತಿಥಿಯನ್ನು ಗಣನೆಗೆ ತಗೆದುಕೊಂಡು ಮೇ 19ನೇ ತಾರೀಕು ಶುಕ್ರವಾರ ಈ ಒಂದು ವಟ ಸಾವಿತ್ರಿ ವ್ರತವನ್ನು ಆಚರಣೆ ಮಾಡಬೇಕಾಗುತ್ತದೆ.ಇನ್ನು ವಟ ಸಾವಿತ್ರಿ ವ್ರತಕ್ಕೆ ಶುದ್ಧವಾದ ಅರಿಶಿಣ ತೆಗೆದುಕೊಳ್ಳಬೇಕು.ಇದಕ್ಕೆ ಶ್ರೀಗಂಧವನ್ನು ಮತ್ತು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಎರಡು ಉಂಡೆ ಮಾಡಿಕೊಳ್ಳಿ. ಒಂದು ಸತ್ಯವನ್ ಹಾಗು ಇನ್ನೊಂದು ಸಾವಿತ್ರಿ ಎಂದು ಎರಡು ಉಂಡೆ ಮಾಡಿಕೊಳ್ಳಬೇಕು.ಇನ್ನು ವಿಳೇದೆಲೆ ಆಡಿಕೆ ತಾಂಬೂಲ ಬಾಳೆಹಣ್ಣು, 3 ರೀತಿ ಹೂವುಗಳನ್ನು ತೆಗೆದುಕೊಂಡು ಹೋದರೆ ಒಳ್ಳೆಯದು.ಎರಡು ಮಣ್ಣಿನ ದೀಪ, ಬತ್ತಿ ಹಾಗು ತುಪ್ಪ ಅಥವಾ ಎಣ್ಣೆಯನ್ನು ತೆಗೆದುಕೊಳ್ಳಿ.ಕರ್ಪೂರ, ಮ್ಯಾಚ್ ಬಾಕ್ಸ್, ಊದುಬತ್ತಿ, ಪುಟ್ಟದಾದ ಕಳಸವನ್ನು ಹಾಗು ಪೂಜೆಗೆ ಬೇಕಾಗುವ ಸಾಮಗ್ರಿಗಳನ್ನು ತೆಗೆದುಕೊಳ್ಳಿ.
ಇನ್ನು ಪ್ರಸಾದಕ್ಕೆ ಬೆಲ್ಲದ ಅನ್ನ, ಸಕ್ಕರೆ ಪೊಂಗಲ್ ಹಾಗು ವಿಶೇಷವಾಗಿ ಕಡಲೆಕಾಳನ್ನು ನೆನಸಿ, ಕೋಸಂಬರಿ ಪಾನಕ ಹೀಗೆ ನಿಮಗೆ ಯಾವುದು ಸಾಧ್ಯವೋ ಅದನ್ನು ತೆಗೆದುಕೊಂಡು ಹೋಗಿ.ಇನ್ನು ಆಲದ ಮರವನ್ನು ಸುತ್ತಲೂ ಅಂಗನೂಲು ತೆಗೆದುಕೊಳ್ಳಬೇಕು.ಅರಿಶಿಣ ಕೊಂಬಿಗೆ ಮಾಂಗಲ್ಯವನ್ನು ರೆಡಿ ಮಾಡಿಕೊಳ್ಳಿ.
ಇನ್ನು ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆ ಸ್ವಚ್ಛ ಮಾಡಿ ಮತ್ತು ಸ್ನಾನ ಮಾಡುವಾಗ ಹಸಿ ಹಾಲು ಅರಿಶಿಣ ಹಾಕಿ ಸ್ನಾನವನ್ನು ಮಾಡಿ.ಮುತೈದೆ ರೀತಿ ರೆಡಿ ಆಗಬೇಕು.ನಂತರ ಮೊದಲು ಸೂರ್ಯ ದೇವನಿಗೆ ಅರ್ಗ್ಯವನ್ನು ಬಿಡಬೇಕು.ಇನ್ನು ಇಡೀ ದಿನ ಉಪವಾಸ ಇದ್ದು ಗಂಡನಿಗೋಸ್ಕರ ಪೂಜೆಯನ್ನು ಮಾಡುತ್ತಿದ್ದೇನೆ ಎಂದು ಸಂಕಲ್ಪ ಮಾಡಿ ಸೂರ್ಯನಿಗೆ ಅರ್ಗ್ಯವನ್ನು ಬಿಟ್ಟು ಸೂರ್ಯನಿಗೆ ವಿನಂತಿ ಮಾಡಿ ನಮಸ್ಕಾರ ಮಾಡಿ.ನಂತರ ಮನೆ ಒಳಗೆ ಬಂದು ಗಣೇಶನಿಗೆ ನಮಸ್ಕಾರ ಮಾಡಿಕೊಳ್ಳಬೇಕು.ಮನೆಯಲ್ಲಿ ಪೂಜೆ ಮುಗಿಸಿ ದೇವಸ್ಥಾನಕ್ಕೆ ಹೋಗಬೇಕು.
ಪೂಜೆಯನ್ನು ಯಾವ ರೀತಿ ಮಾಡಬೇಕು ಎಂದರೆ?
ಆಲದ ಮರದ ಬಳಿ ಹೋಗಿ ನೀರನ್ನು ಹಾಕಿ ಸ್ವಚ್ಛ ಮಾಡಿಕೊಳ್ಳಬೇಕು.ನಂತರ ರಂಗೋಲಿ ಹಾಕಿ. ನಂತರ ಎರಡು ಎಲೆ ಇಟ್ಟು ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ಕಳಸಕ್ಕೆ ನೀರನ್ನು ತುಂಬಿ ಮರದ ಕೆಳಗೆ ಇಡಬೇಕು.ಕಳಸಕ್ಕೆ ಅರಿಶಿಣ ಕುಂಕುಮ ಅಕ್ಷತೆ ಹಾಗು ಹೂವನ್ನು ಹಾಕಬೇಕು.ನಂತರ ಕಳಸದ ಮುಂದೆ ಎರಡು ಎಲೆ ಇಟ್ಟು ಅರಿಶಿಣ ಉಂಡೆಯನ್ನು ಇಡಬೇಕು.ನಂತರ ಅರಿಶಿಣ ಕುಂಕುಮ ಶ್ರೀಗಂಧ ಹಚ್ಚಿ ಗೆಜ್ಜೆ ವಸ್ತ್ರವನ್ನು, ಅಂಗನೂಲುವನ್ನು ಹಾಕಬೇಕು.
ಅರಿಶಿಣದಿಂದ ಮಾಡಿದ ಮಾಂಗಲ್ಯವನ್ನು ಸಾವಿತ್ರಿ ಅಮ್ಮನವರಿಗೆ ಹಾಕಿ.ನಂತರ ನೀವು ತೆಗೆದುಕೊಂಡು ಹೋದ ಪ್ರಸಾದವನ್ನು ಇಡಬೇಕು.ಯಾವುದೇ ಕಾರಣಕ್ಕೂ ಕಡಲೆಕಾಳು ಇಡುವುದನ್ನು ಮರೆಯಬಾರದು ಮತ್ತು ತಾಂಬೂಲವನ್ನು ಇಡಬೇಕು.ಎರಡು ಕಡೆ ಮಣ್ಣಿನ ದೀಪವನ್ನು ಹಚ್ಚಬೇಕು.ಬತ್ತಿಯನ್ನು 3 ಭಾಗವಾಗಿ ಹಚ್ಚಬೇಕು.ನಂತರ ಹೂವಿನಿಂದ ಅಲಂಕಾರ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು.ಆಲದ ಮರವನ್ನು ಮುಟ್ಟಿ ನಮಸ್ಕಾರ ಮಾಡಿ ಅಂಗನೂಲನ್ನು ಸುತ್ತಬೇಕು.3 ಸುತ್ತು 5 ಸುತ್ತು ಕೂಡ ಸುತ್ತಬಹುದು.ಪ್ರತಿಯೊಂದು ಸುತ್ತಿಗೂ ವಟ ಸಾವಿತ್ರಿ ನಮಃ ಎಂದು ಹೇಳಿಕೊಳ್ಳುತ್ತಾ ಸುತ್ತಬೇಕು.ನಂತರ ಹಳದಿ ಬಟ್ಟೆ ಹಾಗು 5 ರೂಪಾಯಿ ಕಾಯಿನ್ ಅನ್ನು ಮರದ ಕೊಂಬೆಗೆ ಕಟ್ಟಬೇಕು.ಕೊನೆಯಲ್ಲಿ ಅಲ್ಲಿ ಇರುವ ಮುತೈದೆಯರಿಗೆ ತಾಂಬೂಲವನ್ನು ಕೊಟ್ಟು ಆಶೀರ್ವಾದವನ್ನು ತೆಗೆದುಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಂಕಲ್ಪ ಈಡೇರುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512